
ಸನ್‌ಪ್ಯೂರ್‌ನಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಶಿವಮೊಗ್ಗ, ಜ. 13: ಸನ್‌ಪ್ಯೂರ್ ಶಿವಮೊಗ್ಗದ ಮ್ಯಾಕ್ಸ್‌ಆಸ್ಪತ್ರೆ ಸಹಯೋಗದೊಂದಿಗೆ ಆಸ್ಪತ್ರೆಯಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಿತು. ೧೨ ವಿಶೇಷ ವೈದ್ಯರು, ೪ ವೈದ್ಯರು, ೧೫ ನರ್ಸಿಂಗ್‌ಸಿಬ್ಬಂದಿ ಹಾಗೂ ೧೫ ನರ್ಸಿಂಗೇತರ ವೈದ್ಯಕೀಯ ಸಿಬ್ಬಂದಿ ಹಾಜರಿದ್ದರು. ಇಎನ್‌ಟಿ, ಮೂಳೆ, ಮೂತ್ರಶಾಸ್ತ್ರ, ಮಕ್ಕಳ ತಜ್ಞರು, ಸ್ತ್ರಿರೋಗ, ದಂತ ಹಾಗೂ ಪೀರಿಯೊಡಾಂಟಲ್‌ಮುಂತಾದ ವೀಶೇಷತೆಗಳ ಅಡಿಯಲ್ಲಿ ತಪಾಸಣೆ ನಡೆಸಲಾಯಿತು.
೨೬೦ ಹಿಂದುಳಿದ ನಿವಾಸಿಗಳಿಗೆ ಸೇವೆ ಒದಗಿಸಲಾಯಿತು. ಸನ್‌ಪ್ಯೂರ್ ಸನ್ ಫ್ಲವರ್ ಆಯಿಲ್, ಸನ್‌ಪ್ಯೂರ್‌ವನಸ್ಪತಿ, ಸನ್‌ಪ್ಯೂರ್‌ಅಟ್ಟಾ, ಬಿಸ್ಕಿಟ್‌ಗಳು ಮತ್ತು ಪಾನೀಯಗಳನ್ನು ಉಚಿತವಾಗಿ ವಿತರಿಸಿತು.
ಈ ಬಗ್ಗೆ ಮಾತನಾಡಿದ ಸನ್‌ಪ್ಯೂರ್‌ನ ರಾಷ್ಟ್ರೀಯ ಮಾರಾಟ ಮುಖ್ಯಸ್ಥರಾದ ಗೋಕರನ್‌ಸಿಂಗ್‌ಪವಾರ್, ಆರೋಗ್ಯದ ಬಗ್ಗೆ ಸರಿಯಾದ ಅರಿವು ಇಲ್ಲದ ಕಾರಣದಿಂದಾಗಿ ಜನರಿಗೆ ಆರೋಗ್ಯಕರ ಆಯ್ಕೆ ಕಠಿಣವಾಗಿದೆ. ಮೂಲಭೂತ ಆರೋಗ್ಯ ಸೇವೆಗಳು ಸಿಗದೇ ಇರುವಂಥಹ ಹಾಗೂ ತಮಗೆ ಇರಬಹುದಾದ ಕಾಯಿಲೆಗಳ ಬಗ್ಗೆ ಸ್ಪಷ್ಟ ಅರಿವು ಇಲ್ಲದೆ ಇರುವ ಹಿಂದುಳಿದ ವರ್ಗಗಳಲ್ಲಿ ಈ ಬಗ್ಗೆ ಜಾಗೃತಿ ಮೂಡಿಸುವುದು ಅತಿ ಮುಖ್ಯವಾಗಿದೆ.
ಕಾರ್ಯಕ್ರಮ ನಡೆಸಲು ಮ್ಯಾಕ್ಸ್‌ಆಸ್ಪತ್ರೆಯೊಂದಿಗೆ ಪಾಲುದಾರಿಕೆ ಮಾಡಿಕೊಂಡಿರುವುದು ಹೆಚ್ಚು ಸಂತಸ ತಂದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.