ಶಿವಮೊಗ್ಗ, ಮೇ 30: ಮನೆಯೊಂದರಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣವೊಂದನ್ನು, ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳವು ಆರೋಪದ ಮೇರೆಗೆ ಮನೆಯ ಸೊಸೆ ಹಾಗೂ ಯುವಕನೋರ್ವನನ್ನು ಬಂಧಿಸಿದ್ದಾರೆ! ಹೇಮಾವತಿ ಆರ್ (23) ಹಾಗೂ ಸತೀಶ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ 4.30 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 2050 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಚಿನ್ನಾಭರಣ ಕಳವು ಮಾಡಿದ್ದ ಸೊಸೆ ಸೇರಿದಂತೆ ಇಬ್ಬರು ಅರೆಸ್ಟ್..!

*ಸಿನಿಮೀಯ ಶೈಲಿಯ ಕಳವು ಪ್ರಕರಣ ಬಯಲಿಗೆಳೆದ ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು

ಶಿವಮೊಗ್ಗ, ಮೇ 30: ಮನೆಯೊಂದರಲ್ಲಿ ನಡೆದಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಪ್ರಕರಣವೊಂದನ್ನು, ಶಿವಮೊಗ್ಗದ ತುಂಗಾನಗರ ಠಾಣೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಕಳವು ಆರೋಪದ ಮೇರೆಗೆ ಮನೆಯ ಸೊಸೆ ಹಾಗೂ ಯುವಕನೋರ್ವನನ್ನು ಬಂಧಿಸಿದ್ದಾರೆ!

ಹೇಮಾವತಿ ಆರ್ (23) ಹಾಗೂ ಸತೀಶ್ (22) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರಿಂದ 4.30 ಲಕ್ಷ ರೂ. ಮೌಲ್ಯದ 90 ಗ್ರಾಂ ತೂಕದ ಬಂಗಾರದ ಆಭರಣ ಹಾಗೂ 2050 ನಗದನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ಇನ್‌ಸ್ಪೆಕ್ಟರ್ ಮಂಜುನಾಥ್ ಬಿ ರವರ ನೇತೃತ್ವದಲ್ಲಿ ಸಬ್ ಇನ್‌ಸ್ಪೆಕ್ಟರ್ ಗಳಾದ ರಾಜುರೆಡ್ಡಿ ಬೆನ್ನೂರು, ಕುಮಾರ್ ಕುರಗುಂದ,

ಎಎಸ್ಐ ಮನೋಹರ್, ಹೆಡ್ ಕಾನ್ಸ್​ಟೇಬಲ್ ಗಳಾದ ಕಿರಣ್ ಮೋರೆ, ಅರುಣ್ ಕುಮಾರ್, ಮೋಹನ್ ಕುಮಾರ್, ಕಾನ್ಸ್​ಟೇಬಲ್ ಗಳಾದ ನಾಗಪ್ಪ, ಹರೀಶ್ ನಾಯ್ಕ್, ಲಂಕೇಶ್, ಕಾಂತರಾಜ್, ಅರಿಹಂತ್, ಹರೀಶ್, ಸಂತೋಷ್, ರಮೇಶ್, ಶಿವಕುಮಾರ್, ರಾಘವೇಂದ್ರ, ಜಯಪ್ಪರವರು  ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನೆ ಹಿನ್ನಲೆ: 13-5-2023 ರಂದು ಗ್ರಾಮವೊಂದರ ಮಹಿಳೆಯೋರ್ವರು ತುಂಗಾನಗರ ಪೊಲೀಸ್ ಠಾಣೆಗೆ ದೂರು ನೀಡಿ, ಮನೆಯ ಬೀರುವಿನಲ್ಲಿಟ್ಟಿದ್ದ ಚಿನ್ನಾಭರಣ ಹಾಗೂ ನಗದನ್ನು ಕಳ್ಳರು ಅಪಹರಿಸಿದ್ದಾರೆ. ಹುಡುಕಿಕೊಡುವಂತೆ ಕೋರಿಕೊಂಡಿದ್ದರು.

ನಿಗೂಢವಾಗಿದ್ದ ಪ್ರಕರಣದ ತನಿಖೆಗೆ, ವಿಶೇಷ ಪೊಲೀಸ್ ತಂಡ ರಚನೆ ಮಾಡಲಾಗಿತ್ತು. ತನಿಖೆ ವೇಳೆ ವೃತ್ತಿಪರ ಚೋರರ ಕೃತ್ಯವಲ್ಲ, ಪರಿಚಯಸ್ಥರೇ ಭಾಗಿಯಾಗಿರುವ ಕೃತ್ಯವೆಂಬುವುದು ಪೊಲೀಸರಿಗೆ ಮನವರಿಕೆಯಾಗಿದೆ.

ತನಿಖೆ ವೇಳೆ ಸದರಿ ಮನೆಯ ಸೊಸೆಯೇ, ಆಕೆಗೆ ಪರಿಚಯವಿದ್ದ ಅದೇ ಗ್ರಾಮದ ಯುವಕನ ಜೊತೆ ಸೇರಿ ಚಿನ್ನಾಭರಣ ಕಳವು ಮಾಡಿದ್ದು ಪೊಲೀಸರಿಗೆ ಗೊತ್ತಾಗಿದೆ. ತದನಂತರ ಇಬ್ಬರನ್ನು ಬಂಧಿಸಿ, ಅವರು ಕಳವು ಮಾಡಿದ್ದ ಚಿನ್ನಾಭರಣ ವಶಕ್ಕೆ ಪಡೆದುಕೊಂಡಿದ್ದಾರೆ.

‘ಕಾಂಗ್ರೆಸ್ ಪಕ್ಷ ನೀಡಿದ್ದ ಭರವಸೆಯಂತೆ, ನಿರುದ್ಯೋಗಿ ಯುವಕರಿಗೆ ಕೆಲವೇ ದಿನಗಳಲ್ಲಿ ನಿರುದ್ಯೋಗ ಭತ್ಯೆ ನೀಡುವ ಪ್ರಕ್ರಿಯೆ ಪ್ರಾರಂಭವಾಗಲಿದೆ’ ಎಂದು ಯುವ ಕಾಂಗ್ರೆಸ್ ರಾಜ್ಯ ಮುಖಂಡ ಮೃಣಾಲ್ ಹೆಬ್ಬಾಳ್ಕರ್ ತಿಳಿಸಿದ್ದಾರೆ. ಶಿವಮೊಗ್ಗ ನಗರದ ಜಿಲ್ಲಾ ಎನ್.ಎಸ್.ಯು.ಐ. ಕಚೇರಿಗೆ ಮಂಗಳವಾರ ಭೇಟಿ ನೀಡಿದ್ದ ವೇಳೆ ಕಾರ್ಯಕರ್ತನುದ್ದೇಶಿಸಿ ಅವರು ಮಾತನಾಡಿದರು. Previous post ಕೆಲವೇ ದಿನಗಳಲ್ಲಿ ‘ನಿರುದ್ಯೋಗ ಭತ್ಯೆ’ ಘೋಷಣೆ ಜಾರಿ – ಯುವ ಕಾಂಗ್ರೆಸ್‍ ರಾಜ್ಯ ಮುಖಂಡ ಮೃಣಾಲ್ ಹೆಬ್ಬಾಳ್ಕರ್
ಭದ್ರಾವತಿ, ಮೇ 30: ಭದ್ರಾವತಿ ನಗರದಲ್ಲಿ ಸುಸಜ್ಜಿತ ಸಾರ್ವಜನಿಕ ಈಜುಕೊಳ ಸ್ಥಾಪನೆಗೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸಿ, ‘ಇರುವೆ ಟ್ರಸ್ಟ್’ ವತಿಯಿಂದ ಮಂಗಳವಾರ ತಹಶೀಲ್ದಾರ್ ಹಾಗೂ ನಗರಸಭೆ ಆಡಳಿತಕ್ಕೆ ಮನವಿ ಪತ್ರ ಅರ್ಪಿಸಲಾಗಿದೆ. ಭದ್ರಾವತಿ ತಾಲೂಕಿನಲ್ಲಿ ಭದ್ರಾ ನದಿ, ಭದ್ರಾ ಆಣೆಕಟ್ಟು, ಭದ್ರಾ ನಾಲೆಗಳು ಸೇರಿದಂತೆ ಸಾಕಷ್ಟು ಕೆರೆಕಟ್ಟೆಗಳಿವೆ. ತಾಲೂಕಿನ ಸಾಕಷ್ಟು ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಯುವ ಸಮುದಾಯಕ್ಕೆ, ಈಜು ಜನಪ್ರಿಯ ಚಟುವಟಿಕೆಯಾಗಿದೆ. ಜೊತೆಗೆ ಆರೋಗ್ಯದ ದೃಷ್ಟಿಯಿಂದಲೂ ಎಲ್ಲ ವರ್ಗದವರು ಈಜಿನತ್ತ ಆಕರ್ಷಿಸುತ್ತಿದ್ದಾರೆ. Next post ಭದ್ರಾವತಿ ನಗರದಲ್ಲಿ ಸಾರ್ವಜನಿಕ ಈಜುಕೊಳ ಸ್ಥಾಪನೆಗೆ ಆಗ್ರಹಿಸಿ ಮನವಿ