ಶಿವಮೊಗ್ಗ, ಜೂ. 6: ‘ದಕ್ಷಿಣ ಆಫ್ರಿಕಾದ ಜೋರ್ಡಾನ್ ದೇಶ ಹಾಗೂ ಉತ್ತರ ಭಾರತದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 9 ಜನರಲ್ಲಿ ಮಲೇರಿಯಾ ರೋಗ ಪತ್ತೆಯಾಗಿತ್ತು. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಅವರು ತಿಳಿಸಿದ್ದಾರೆ. ‘ದಕ್ಷಿಣ ಆಫ್ರಿಕಾದಲ್ಲಿ ಮಲೇರಿಯಾ ರೋಗ ಹೆಚ್ಚಿದೆ. ಕಳೆದ ಮೇ ತಿಂಗಳಲ್ಲಿ ಜೋರ್ಡಾನ್ ದೇಶದಿಂದ ಹಿಂದಿರುಗಿದ್ದ ಹಕ್ಕಿಪಿಕ್ಕಿ ಸಮುದಾಯದ 106 ಜನರ ಆರೋಗ್ಯ ತಪಾಸಣೆಗೊಳಪಡಿಸಲಾಗಿತ್ತು. ಈ ವೇಳೆ ಮೂವರು ಪುರುಷರಲ್ಲಿ ರೋಗ ಪತ್ತೆಯಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅವರೆಲ್ಲರೂ ಗುಣಮುಖರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಸೂಡಾನ್ ದೇಶ, ಉತ್ತರ ಭಾರತದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 9 ಜನರಲ್ಲಿ ಮಲೇರಿಯಾ ರೋಗ ಪತ್ತೆ!

ಶಿವಮೊಗ್ಗ, ಜೂ. 6: ‘ದಕ್ಷಿಣ ಆಫ್ರಿಕಾದ ಸೂಡಾನ್ ದೇಶ ಹಾಗೂ ಉತ್ತರ ಭಾರತದಿಂದ ಶಿವಮೊಗ್ಗಕ್ಕೆ ಆಗಮಿಸಿದ್ದ 9 ಜನರಲ್ಲಿ ಮಲೇರಿಯಾ ರೋಗ ಪತ್ತೆಯಾಗಿತ್ತು. ಇವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿದೆ’ ಎಂದು ಆರೋಗ್ಯ ಇಲಾಖೆಯ ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಅವರು ತಿಳಿಸಿದ್ದಾರೆ.

‘ದಕ್ಷಿಣ ಆಫ್ರಿಕಾದಲ್ಲಿ ಮಲೇರಿಯಾ ರೋಗ ಹೆಚ್ಚಿದೆ. ಕಳೆದ ಮೇ ತಿಂಗಳಲ್ಲಿ ಸೂಡಾನ್ ದೇಶದಿಂದ ಹಿಂದಿರುಗಿದ್ದ ಹಕ್ಕಿಪಿಕ್ಕಿ ಸಮುದಾಯದ 106 ಜನರ ಆರೋಗ್ಯ ತಪಾಸಣೆಗೊಳಪಡಿಸಲಾಗಿತ್ತು. ಈ ವೇಳೆ ಮೂವರು ಪುರುಷರಲ್ಲಿ ರೋಗ ಪತ್ತೆಯಾಗಿತ್ತು. ಅವರಿಗೆ ಸೂಕ್ತ ಚಿಕಿತ್ಸೆ ನೀಡಲಾಗಿತ್ತು. ಸದ್ಯ ಅವರೆಲ್ಲರೂ ಗುಣಮುಖರಾಗಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

ಹಾಗೆಯೇ ಉತ್ತರ ಭಾರತದ ವಿವಿಧ ರಾಜ್ಯಗಳಲ್ಲಿಯೂ ಮಲೇರಿಯಾ ರೋಗ ವ್ಯಾಪಕವಾಗಿದೆ. ಈ ಕಾರಣದಿಂದ ವಿಧಾನಸಭೆ ಚುನಾವಣೆ ವೇಳೆ ಭದ್ರತಾ ಕಾರ್ಯಕ್ಕೆ ಆಗಮಿಸಿದ್ದ ಸಿ.ಆರ್.ಪಿ.ಎಫ್ ಸಿಬ್ಬಂದಿಗಳ ಆರೋಗ್ಯ ತಪಾಸಣೆ ಮಾಡಲಾಗಿತ್ತು. ನಾಲ್ವರಲ್ಲಿ ರೋಗ ಪತ್ತೆಯಾಗಿತ್ತು.

ಹಾಗೆಯೇ ಉತ್ತರ ಭಾರತದಿಂದ ಶಿವಮೊಗ್ಗ ನಗರಕ್ಕೆ ಕೆಲಸಕ್ಕೆಂದು ಆಗಮಿಸಿದ್ದ ಮೂವರು ಕಾರ್ಮಿಕರಲ್ಲಿಯೂ ಮಲೇರಿಯಾ ಕಂಡುಬಂದಿತ್ತು. ಇವರೆಲ್ಲರಿಗೂ ಸೂಕ್ತ ಚಿಕಿತ್ಸೆ ನೀಡಿ, ರೋಗ ಗುಣಪಡಿಸಲಾಗಿತ್ತು ಎಂದು ಹೇಳಿದ್ದಾರೆ.

ಕಳೆದ ಜನವರಿಯಿಂದ ಇಲ್ಲಿಯವರೆಗೂ ಒಟ್ಟಾರೆ 9 ಮಲೇರಿಯಾ ಪ್ರಕರಣಗಳು ಜಿಲ್ಲೆಯಲ್ಲಿ ವರದಿಯಾಗಿದ್ದವು. ಆದರೆ ಈ ಎಲ್ಲ ಪ್ರಕರಣಗಳು ಬೇರೆಡೆಯಿಂದ ವಲಸೆ ಬಂದವರಲ್ಲಿಯೇ ಕಂಡುಬಂದಿದ್ದವು. ಜಿಲ್ಲೆಯಲ್ಲಿ ಯಾವುದೇ ಪ್ರಕರಣಗಳು ವರದಿಯಾಗಿಲ್ಲ ಎಂದು ಡಾ.ಗುಡದಪ್ಪ ಕಸಬಿ ಅವರು ಮಾಹತಿ ನೀಡಿದ್ದಾರೆ.

ಸೊಳ್ಳೆ ಪರದೆ ವಿತರಣೆ: ಮಲೇರಿಯಾ ಸೋಂಕಿತರಿದ್ದ ಸ್ಥಳಗಳಲ್ಲಿನ ನಿವಾಸಿಗಳಿಗೆ ಕೀಟನಾಶಕದಿಂದ ಉಪಚರಿಸಿದ ಸೊಳ್ಳೆ ಪರದೆಗಳನ್ನು ಇಲಾಖೆಯ ಮೂಲಕ ವಿತರಿಸಲಾಗಿದೆ. ಈಗಾಗಲೇ ಶಿವಮೊಗ್ಗದ ಗಾಡಿಕೊಪ್ಪದಲ್ಲಿರುವ ಹಕ್ಕಿಪಿಕ್ಕಿ ಕ್ಯಾಂಪ್ ನಲ್ಲಿ ಸೊಳ್ಳೆ ಪರದೆಗಳ ವಿತರಣೆಯನ್ನು ಶಾಸಕ ಚನ್ನಬಸಪ್ಪ ಅವರ ಮೂಲಕ ಸಾವರ್ವಜನಿಕರಿಗೆ ವಿತರಿಸಲಾಗಿದೆ. ಹಸೂಡಿ ಗ್ರಾಮದಲ್ಲಿನ ಹಕ್ಕಿಪಿಕ್ಕಿ ಕ್ಯಾಂಪ್ ನಿವಾಸಿಗಳಿಗೂ ಇಷ್ಟರಲ್ಲಿಯೇ ಸೊಳ್ಳೆ ಪರದೆ ವಿತರಿಸಲಾಗುವುದು ಎಂದು ಡಾ.ಗುಡದಪ್ಪ ಕಸಬಿ ಅವರು ಮಾಹಿತಿ ನೀಡಿದ್ದಾರೆ.

ಮಲೇರಿಯಾ ವಿರೋಧಿ ಮಾಸಾಚರಣೆ: ಪ್ರತಿ ವರ್ಷ ಜೂನ್ ತಿಂಗಳ 1 ರಿಂದ 30 ರವರೆಗೆ ಮಲೇರಿಯಾ ವಿರೋಧಿ ಮಾಸಾಚರಣೆ ಆಚರಿಸಲಾಗುತ್ತದೆ. ನಾನಾ ರೀತಿಯ ಇಲಾಖೆಯಿಂದ ನಾನಾ ರೀತಿಯ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ ಎಂದು ಡಾ.ಗುಡುದಪ್ಪ ಕಸಬಿ ಅವರು ಮಾಹಿತಿ ತಿಳಿಸಿದ್ದಾರೆ.

ಮಲೇರಿಯಾ ಮುಕ್ತ ಜಿಲ್ಲೆ : ಸಾರ್ವಜನಿಕರ ಸಹಕಾರ ಅಗತ್ಯ – ಶಾಸಕ ಚನ್ನಬಸಪ್ಪ

*** ಮಲೇರಿಯಾ ಮುಕ್ತ ಜಿಲ್ಲೆಯನ್ನಾಗಿಸಲು ಸಾರ್ವಜನಿಕರು ಸಹಕಾರ ನೀಡಬೇಕು ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.

ಶಿವಮೊಗ್ಗದ ಗಾಡಿಕೊಪ್ಪದ ಹಕ್ಕಿಪಿಕ್ಕಿ ಕ್ಯಾಂಪಿನಲ್ಲಿ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸೊಳ್ಳೆಪರದೆ ವಿತರಿಸಿ ಮಾತನಾಡುತ್ತಿದ್ದರು.

ಮಲೇರಿಯಾ ಮುಕ್ತ ಜಿಲ್ಲೆ : ಸಾರ್ವಜನಿಕರ ಸಹಕಾರ ಅಗತ್ಯ – ಶಾಸಕ ಚನ್ನಬಸಪ್ಪ

ಮಲೇರಿಯಾಕ್ಕೆ ಪ್ರಮುಖವಾದ ಕಾರಣ ಸೊಳ್ಳೆ. ಸಾರ್ವಜನಿಕರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸೊಳ್ಳೆಗಳು ಬಾರದಂತೆ ಸುರಕ್ಷಿತವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳಬೇಕು. ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ತೆಂಗಿನ ಚಿಪ್ಪು ಸೇರಿದಂತೆ ಪ್ಲಾಸ್ಟಿಕ್ ವಸ್ತುಗಳಲ್ಲಿ ನೀರಿ ಸಂಗ್ರಹವಾಗದAತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ.ಗುಡುದಪ್ಪ ಕಸಬಿ ಮಾತನಾಡಿ, ಆರೋಗ್ಯ ಇಲಾಖೆ ಮಲೇರಿಯಾ ನಿಯಂತ್ರಣಕ್ಕೆ ಹಲವು ಕಾರ್ಯಕ್ರಮ ಹಮ್ಮಿಕೊಂಡಿದೆ. ಆದರೆ ಇಲಾಖೆಯ ಜೊತೆಗೆ ಸಾರ್ವಜನಿಕರುಕೂಡ ಸಹಕರಿಸಬೇಕು. ಆರೋಗ್ಯ ಇಲಾಖೆಯ ಸೂಚನೆಗಳನ್ನು ಪಾಲಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ರೋಟರಿ ಮಾಜಿ ಸಹಾಯಕ ಗವರ್ನರ್ ಜಿ.ವಿಜಯಕುಮಾರ್, ಡಾ. ಚಂದ್ರಶೇಖರ್, ನಾರಾಯಣ, ಉಮೇಶ್‌ಧೀರೇಂದ್ರ, ಆಶಾ ಹಾಗೂ ಆರೋಗ್ಯ ಕಾರ್ಯಕರ್ತರು ಹಾಜರಿದ್ದರು.

Previous post ಬಾರ್ ಕ್ಯಾಷಿಯರ್ ಹತ್ಯೆ ಆರೋಪಿ ಕಾಲಿಗೆ ಪೊಲೀಸರಿಂದ ಗುಂಡೇಟು..!
ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್ ಸೌಲಭ್ಯ : ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ Next post ಬಾಡಿಗೆ ಮನೆಯವರಿಗೂ ಉಚಿತ ವಿದ್ಯುತ್ ಸೌಲಭ್ಯ : ಸಿಎಂ ಸಿದ್ಧರಾಮಯ್ಯ ಸ್ಪಷ್ಟನೆ