ಹೆಚ್.ಡಿ.ಕುಮಾರಸ್ವಾಮಿ ಜೊತೆ ರೈತರ ಆನ್’ಲೈನ್ ಸಂವಾದ

ಶಿವಮೊಗ್ಗ, ಜ. 16: ‘ರೈತ ಸಂಕ್ರಾಂತಿ ಕುಮಾರಣ್ಣನ ಜೊತೆ’ ಎಂಬ ಆನ್‌ಲೈನ್ ಸಂವಾದ ಕಾರ್ಯಕ್ರಮ ಜ. 16 ರ ಮಧ್ಯಾಹ್ನ 3 ಗಂಟೆಯಿಂದ 6 ಗಂಟೆಯವರೆಗೆ ಶಿವಮೊಗ್ಗ ನಗರದ ಉಷಾ ನರ್ಸಿಂಗ್ ಹೋಂ ಎದುರಿನ ನವ್ಯಶ್ರೀ ಹಾಲ್‌ನಲ್ಲಿ ಜೆಡಿಎಸ್ ಪಕ್ಷ ಹಮ್ಮಿಕೊಂಡಿದೆ.

ಶಿವಮೊಗ್ಗ ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ರೈತರು ಈ ಸಂವಾದಲ್ಲಿ ಪಾಲ್ಗೊಂಡು, ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಕುಮಾರಸ್ವಾಮಿ ಅವರ ಪಂಚರತ್ನ ಯೋಜನೆಯಲ್ಲಿ ರೈತ ಚೈತನ್ಯ ಯೋಜನೆಯೂ ಸಹ ಇದ್ದು, ಅದರ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರು ಮಾಹಿತಿ ನೀಡಲಿದ್ದಾರೆ.

ಜೊತೆಗೆ ರೈತರು ಅನುಭವಿಸುತ್ತಿರುವ ಸಮಸ್ಯೆಗಳು, ಕೈಗೊಳ್ಳಬೇಕಾದ ಪರಿಹಾರಗಳ ಬಗ್ಗೆ ಚರ್ಚಿಸಿ ರೈತರಿಂದ ಸಲಹೆಗಳನ್ನು ಪಡೆಯಲಿದ್ದಾರೆ ಎಂದು ಜೆಡಿಎಸ್ ಕಾರ್ಯಾಧ್ಯಕ್ಷ ಕಾಂತರಾಜ್ ಸೋಮಿನಕೊಪ್ಪ ತಿಳಿಸಿದ್ದಾರೆ.

Previous post ಬೆಳ್ಳಂಬೆಳಿಗ್ಗೆ ಸರ್ಕಾರಿ ಶಾಲೆ ಕಾಂಪೌಂಡ್ ಧ್ವಂಸ!
Next post ಆದಿ ದ್ರಾವಿಡರ್ ಕೋ ಆಪರೇಟಿವ್ ಸೊಸೈಟಿ ಸರ್ವ ಸದಸ್ಯರ ಸಭೆ