ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಸರ ಕಳವು ಮಾಡಿದ್ದ ಆರೋಪಿ ಸೆರೆ!

ಮನೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಬಂಗಾರದ ಸರ ಕಳವು ಮಾಡಿದ್ದ ಆರೋಪಿ ಸೆರೆ!

ಶಿವಮೊಗ್ಗ, ಜೂ. 10: ಮನೆಯೊಂದರಲ್ಲಿ ಬಂಗಾರದ ಸರ ಕಳವು ಮಾಡಿದ್ದ ಆರೋಪಿಯನ್ನು ಶಿವಮೊಗ್ಗದ ಜಯನಗರ  ಠಾಣೆ ಪೊಲೀಸರು ಬಂಧಿಸಿದ್ದಾರೆ.

ನವುಲೆ ಗ್ರಾಮದ ನಿವಾಸಿ ಚೇತನ್ ಬಿ (32) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಕಳವು ಮಾಡಿದ್ದ 3.40 ಲಕ್ಷ ರೂ. ಮೌಲ್ಯದ 68 ಗ್ರಾಂ ತೂಕದ ಬಂಗಾರದ ಸರವನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಎಂ.ಸುರೇಶ್ ಮಾರ್ಗದರ್ಶನದಲ್ಲಿ ಜಯನಗರ ಠಾಣೆ ಇನ್ಸ್’ಪೆಕ್ಟರ್ ಮಾದಪ್ಪ, ಎಎಸ್ಐ ಕರಿಬಸಪ್ಪ, ಸಿಬ್ಬಂದಿಗಳಾದ ಆದರ್ಶ, ರೋಷನ್, ರವಿಕಿರಣ್ ಅವರು ಆರೋಪಿಯನ್ನು ಬಂಧಿಸುವಲ್ಲಿ ಸಫಲರಾಗಿದ್ದಾರೆ.

ಪ್ರಕರಣದ ಹಿನ್ನಲೆ: ಜೂ. 18 ರ ಬೆಳಗಿನ ಜಾವ ಶಿವಮೊಗ್ಗದ ಗಾಂಧಿನಗರ ಬಿ ಬ್ಲಾಕ್ 3 ನೇ ಕ್ರಾಸ್ ನ ವಾಸದ ಮನೆಯೊಂದರಲ್ಲಿ ಚಿನ್ನದ ಸರ  ಕಳವು ಮಾಡಲಾಗಿತ್ತು. ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

Previous post ನೋವು ನಿವಾರಕ ‘ಮೆಂಥೋಪ್ಲಸ್’ ಡಬ್ಬಿ ನುಂಗಿ 9 ತಿಂಗಳ ಮಗು ಸಾವು!
ಮಲೆನಾಡಿನಲ್ಲಿ ವರ್ಷಧಾರೆಯ ಸಿಂಚನ..! Next post ಮಲೆನಾಡಿನಲ್ಲಿ ವರ್ಷಧಾರೆಯ ಸಿಂಚನ..!