ವಿಶ್ವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ : ಭಾರತಕ್ಕೆ ಸೋಲು – ಆಸ್ಟ್ರೇಲಿಯಾಕ್ಕೆ ಜಯ!

ವಿಶ್ವ ಟೆಸ್ಟ್ ಕ್ರಿಕೆಟ್ ಪಂದ್ಯಾವಳಿ : ಭಾರತಕ್ಕೆ ಸೋಲು!

ಲಂಡನ್ (ಇಂಗ್ಲೆಂಡ್): ವಿಶ್ವ ಟೆಸ್ಟ್ ಚಾಂಪಿಯನ್‌ ಶಿಪ್ ಫೈನಲ್‌ನಲ್ಲಿ, ಭಾರತ ಕ್ರಿಕೆಟ್ ತಂಡ ಹೀನಾಯ ಸೋಲನುಭವಿಸಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡ ವಿಶ್ವ ಟೆಸ್ಟ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.

ಆಸ್ಟ್ರೇಲಿಯಾವು ಒಟ್ಟಾರೆ 444 ರನ್ ಗುರಿ ನೀಡಿತ್ತು. ನಾಲ್ಕನೇ ದಿನದಂದು ಈ ಗುರಿ ಬೆನ್ನಟ್ಟಿದ ಭಾರತವು, ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 164 ರನ್ ಗಳಿಸಿತ್ತು. ಕೊನೆಯ ದಿನದಂದು 280 ರನ್ ಗಳಿಸಬೇಕಾಗಿತ್ತು.

ಆದರೆ ಕೊನೆಯ ದಿನವಾದ ಭಾನುವಾರ 71 ರನ್ ಗಳಿಸಲಷ್ಟೆ ಭಾರತ ಶಕ್ತವಾಯಿತು. ಒಟ್ಟಾರೆ 444 ರನ್ ಗಳ ಗುರಿಯಲ್ಲಿ ಭಾರತ ಗಳಿಸಿದ್ದು ಕೇವಲ 234 ರನ್ ಮಾತ್ರವಾಗಿದ್ದು, 209 ರನ್ ಗಳ ಅಂತರದಿಂದ ಪರಾಭಗೊಂಡಿತು.

ಭಾರತದ ಪರ ಅಜಿಂಕ್ಯ ರಹಾನೆ ಮೊದಲ ಇನ್ನಿಂಗ್ಸ್ ನಲ್ಲಿ 89 ಮತ್ತು ಎರಡನೇ ಇನಿಂಗ್ಸ್‌ನಲ್ಲಿ 46 ರನ್ ಗಳಿಸಿದರು. ಇವರ ಹೊರತಾಗಿ ಉಳಿದ ಬ್ಯಾಟ್ಸ್​ಮನ್ಸ್ ಗಳು,​ ರನ್ ಗಳಿಸುವಲ್ಲಿ ವಿಫಲವಾದರು.

ಬ್ಯಾಟ್ಸ್’ಮನ್ ಗಳ ಕಳಪೆ ಪ್ರದರ್ಶನ ಸೋಲಿಗೆ ಮುಖ್ಯ ಕಾರಣವಾಗಿದೆ. ಆಸ್ಟ್ರೇಲಿಯಾದ ಇಬ್ಬರು ಬ್ಯಾಟ್ಸ್’ಮನ್ ಗಳು ಶತಕ ಗಳಿಸಿದರೆ, ಭಾರತದ ಯಾವೊಬ್ಬ ಆಟಗಾರನೂ ಶತಕ ದಾಖಲಿಸಲು ಸಾಧ್ಯವಾಗಲಿಲ್ಲ.

ಆಗಸ್ಟ್ 11 ರಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಹಾರಾಟ! Previous post ಆಗಸ್ಟ್ 11 ರಿಂದ ಶಿವಮೊಗ್ಗ – ಬೆಂಗಳೂರು ನಡುವೆ ವಿಮಾನ ಹಾರಾಟ!
ಸಾಗರ ಖಾಸಗಿ ವಸತಿ ಶಾಲೆಯಲ್ಲಿ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ : ಶಿವಮೊಗ್ಗ ಎಸ್ಪಿ ಹೇಳಿದ್ದೇನು? Next post ಖಾಸಗಿ ವಸತಿ ಶಾಲೆಯಲ್ಲಿ ಬಾಲಕಿಯ ಅನುಮಾನಾಸ್ಪದ ಸಾವು ಪ್ರಕರಣ : ಶಿವಮೊಗ್ಗ ಎಸ್ಪಿ ಹೇಳಿದ್ದೇನು?