
ಶಿಕಾರಿಪುರ, ಶಿರಾಳಕೊಪ್ಪ ಪೊಲೀಸರಿಂದ ವಾಕಿಂಗ್ – ರನ್ನಿಂಗ್!
ಶಿಕಾರಿಪುರ/ಶಿರಾಳಕೊಪ್ಪ, ಜೂ. 12: ಪೊಲೀಸರಲ್ಲಿ ದೈಹಿಕ ಸದೃಢತೆ ಹಾಗೂ ಆರೋಗ್ಯ ಕಾಯ್ದುಕೊಳ್ಳುವ ಉದ್ದೇಶದಿಂದ, ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ವಾಕಿಂಗ್ – ರನ್ನಿಂಗ್ ಎಂಬ ಪರಿಕಲ್ಪನೆಯನ್ನು ಜಿಲ್ಲಾ ಪೊಲೀಸ್ ಇಲಾಖೆಯಲ್ಲಿ ಪರಿಚಯಿಸಿದ್ದಾರೆ.
ಬೆಳಿಗ್ಗೆಯ ವೇಳೆ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು, ಸಾರ್ವಜನಿಕ ರಸ್ತೆಗಳಲ್ಲಿ ವಾಕಿಂಗ್ – ರನ್ನಿಂಗ್ ನಡೆಸುವ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇತ್ತೀಚೆಗಷ್ಟೆ ಎಸ್ಪಿ ನೇತೃತ್ವದಲ್ಲಿ ಶಿವಮೊಗ್ಗ ನಗರದ ಮುಖ್ಯ ರಸ್ತೆಗಳಲ್ಲಿ ಪೊಲೀಸರು ವಾಕಿಂಗ್ ಹಾಗೂ ರನ್ನಿಂಗ್ ನಡೆಸಿದ್ದರು.
ಇದೀಗ ಶಿಕಾರಿಪುರ ಹಾಗೂ ಶಿರಾಳಕೊಪ್ಪ ಪೊಲೀಸರು ಕೂಡ ವಾಕಿಂಗ್ – ರನ್ನಿಂಗ್ ಆರಂಭಿಸಿದ್ದಾರೆ. ಸೋಮವಾರ ಬೆಳಿಗ್ಗೆ ಡಿವೈಎಸ್ಪಿ ಶಿವಾನಂದ ಮದರಕಂಡಿ ನೇತೃತ್ವದಲ್ಲಿ ಶಿಕಾರಿಪುರ ಪಟ್ಟಣದಲ್ಲಿ ನಡಿಗೆ-ಓಟ ನಡೆಯಿತು. ಸಬ್ ಇನ್ಸ್ ಪೆಕ್ಟರ್ ಗಳಾದ ಪ್ರಶಾಂತ್, ಶರತ್, ಶೋಭಾರಾಣಿ ಸೇರಿದಂತೆ ಇತರೆ ಸಿಬ್ಬಂದಿಗಳು ಭಾಗಿಯಾಗಿದ್ದರು.
ಮತ್ತೊಂದೆಡೆ ಶಿರಾಳಕೊಪ್ಪದಲ್ಲಿ ನಡೆದ ನಡಿಗೆ – ಓಟದಲ್ಲಿ ಸಬ್ ಇನ್ಸ್’ಪೆಕ್ಟರ್ ಮಂಜುನಾಥ್ ಕುರಿ ಮತ್ತವರ ಸಿಬ್ಬಂದಿಗಳು ಭಾಗವಹಿಸಿದ್ದರು.