
ಠಾಣೆಗಳ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಪೊಲೀಸರು
ಶಿವಮೊಗ್ಗ, ಜೂ. 12: ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೋಮವಾರ ತಮ್ಮ ಠಾಣೆಗಳ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು.

ಶಿವಮೊಗ್ಗ ನಗರದ ಜಯನಗರ, ಕೋಟೆ, ವಿನೋಬನಗರ, ತುಂಗಾನಗರ, ಕುಂಸಿ, ಗ್ರಾಮಾಂತರ ಹಾಗೂ ಸೊರಬ ತಾಲೂಕಿನ ಆನವಟ್ಟಿ ಪೊಲೀಸ್ ಠಾಣೆಗಳ ಆವರಣದಲ್ಲಿ ಶ್ರಮದಾನ ಕಾರ್ಯಗಳು ನಡೆದವು.

ಠಾಣೆಗಳ ಆವರಣದಲ್ಲಿನ ಕಸಕಡ್ಡಿ, ಗಿಡಗಂಟೆಗಳನ್ನು ಸಿಬ್ಬಂದಿಗಳು ತೆರವುಗೊಳಿಸಿದರು. ಹಲವೆಡೆ ನೀರು ಹಾಕಿ ಸ್ವಚ್ಛಗೊಳಿಸಿದ್ದಾರೆ. ಜೊತೆಗೆ ಆವರಣದ ಹಲವೆಡೆ ಗಿಡಗಳನ್ನು ನೆಡುವ ಕಾರ್ಯ ನಡೆಸಿದ್ದಾರೆ.

ಶ್ರಮದಾನ ಕಾರ್ಯದಲ್ಲಿ ಠಾಣೆಗಳ ಇನ್ಸ್’ಪೆಕ್ಟರ್, ಸಬ್ ಇನ್ಸ್’ಪೆಕ್ಟರ್ ಸೇರಿದಂತೆ ಇತರೆ ಸಿಬ್ಬಂದಿಗಳು ಭಾಗಿಯಾಗಿದ್ದರು.

In#shimoganews, #Shivamogga, #shivamogganews #shimogalocalnews, #shivamogganews #shimoganews, #Shivamoggapolice #policedepartment #police #sp #asp #dysp #cpi #psi #ಜಿಲ್ಲಾರಕ್ಷಣಾಧಿಕಾರಿ #ಎಸ್ಪಿ #ಪೊಲೀಸ್ಇಲಾಖೆ #ಶಿವಮೊಗ್ಗಜಿಲ್ಲಾಪೊಲೀಸ್ಇಲಾಖೆ, #udayasaakshi #ಉದಯಸಾಕ್ಷಿ #ಉದಯಸಾಕ್ಷಿನ್ಯೂಸ್ #udayasaakshinews #shimoga #shimoganews #shimogalocalnews #shivamogganews #ಶಿವಮೊಗ್ಗ #ಶಿವಮೊಗ್ಗಸುದ್ದಿ, #ಉದಯಸಾಕ್ಷಿ, #ಉದಯಸಾಕ್ಷಿನ್ಯೂಸ್, #ಶಿವಮೊಗ್ಗ, #ಶಿವಮೊಗ್ಗನ್ಯೂಸ್, ಠಾಣೆಗಳ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದ ಪೊಲೀಸರು, ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳು ಸೋಮವಾರ ತಮ್ಮ ಠಾಣೆಗಳ ಆವರಣದಲ್ಲಿ ಸ್ವಚ್ಛತಾ ಅಭಿಯಾನ ನಡೆಸಿದರು, ಶಿವಮೊಗ್ಗ ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ