
ಅಸೆಂಬ್ಲಿ ಎಲೆಕ್ಷನ್ : ಶಿವಮೊಗ್ಗದಲ್ಲಿ ಆರ್.ಎ.ಎಫ್. ರೌಂಡ್ಸ್!
ಶಿವಮೊಗ್ಗ, ಜ. 18: ವಿಧಾನಸಭೆ ಸಾರ್ವತ್ರಿಕ ಚುನಾವಣೆ ಚಟುವಟಿಕೆಗಳು ಕ್ರಮೇಣ ಕಾವೇರಲಾರಂಭಿಸಿದೆ. ಈಗಾಗಲೇ ಆಡಳಿತಯಂತ್ರವು ಚುನಾವಣಾ ಪೂರ್ವಭಾವಿ ಸಿದ್ದತೆ ನಡೆಸಲಾರಂಭಿಸಿದೆ.
ಈ ನಡುವೆ ಜಿಲ್ಲೆಯ ಪ್ರಮುಖ ಹಾಗೂ ಸೂಕ್ಷ್ಮ ಪ್ರದೇಶಗಳ ಪರಿಚಯ ಹಾಗೂ ಭದ್ರತೆಯ ಉದ್ದೇಶದಿಂದ, ಕ್ಷಿಪ್ರ ಕಾರ್ಯಾಚರಣೆ ಪಡೆ ಶಿವಮೊಗ್ಗಕ್ಕೆ ಆಗಮಿಸಿದೆ.
ಬುಧವಾರ ಶಿವಮೊಗ್ಗ ನಗರದ ವಿವಿಧೆಡೆ, ಆರ್.ಎ.ಎಫ್ ಪಡೆಯು ಪ್ರದೇಶಗಳ ಪರಿಚಯ ಹಾಗೂ ಅವಲೋಕನಕ್ಕಾಗಿ ಪಥ ಸಂಚಲನ ನಡೆಸಿತು. ಕೆಳಗಿನ ತುಂಗಾನಗರದಿಂದ ಆರಂಭವಾದ ಪಥ ಸಂಚಲನವು ಕೆ.ಕೆ.ಶೆಡ್, ಪದ್ಮಾ ಟಾಕೀಸ್, ಟಿಪ್ಪುನಗರ, ವಿಜಯಾ ಗ್ಯಾರೇಜ್, ಗಜಾನನ ಗೇಟ್,
ಸೀಗೆಹಟ್ಟಿ, ಕುಂಬಾರ ಬೀದಿ, ಕೆ.ಆರ್.ಪುರಂ, ಸಿದ್ದಯ್ಯ ಸರ್ಕಲ್, ಎಂಕೆಕೆ ರಸ್ತೆ, ಎ ಎ ಸರ್ಕಲ್, ಎಸ್.ಎಸ್. ಸರ್ಕಲ್, ಗಾಂಧಿಬಜಾರ್, ಅಶೋಕ ರಸ್ತೆ, ಶಿವಾಜಿ ಸರ್ಕಲ್, ಲಷ್ಕರ್ ಮೊಹಲ್ಲಾ, ಓಲ್ಡ್ ಬಾರ್ ಲೈನ್ ರಸ್ತೆ ಮೂಲಕ ಕೋಟೆ ಪೊಲೀಸ್ ಠಾಣೆ ಬಳಿ ಅಂತ್ಯಗೊಂಡಿತು.
ಪಥ ಸಂಚಲನದಲ್ಲಿ ಆರ್.ಎ.ಎಫ್. ಅಸಿಸ್ಟೆಂಟ್ ಕಮಾಂಡೆಂಟ್ ನವೀನ್, ಶಿವಮೊಗ್ಗ ಪೊಲೀಸ್ ಉಪ ವಿಭಾಗದ ಡಿವೈಎಸ್ಪಿ ಬಾಲರಾಜ್, ನಯನ ನಂದಿ ಮೊದಲಾದವರಿದ್ದರು.