ಅಶ್ಲೀಲ ವೀಡಿಯೋಗಳು ವೈರಲ್ ಪ್ರಕರಣ : ಯುವಕ ಅರೆಸ್ಟ್!

ಅಶ್ಲೀಲ ವೀಡಿಯೋಗಳು ವೈರಲ್ ಪ್ರಕರಣ : ಯುವಕ ಅರೆಸ್ಟ್!

ಶಿವಮೊಗ್ಗ/ತೀರ್ಥಹಳ್ಳಿ, ಜೂ. 18: ಸಾಮಾಜಿಕ ಜಾಲತಾಣಗಳಲ್ಲಿ ಯುವತಿಯರ ಅಶ್ಲೀಲ ವೀಡಿಯೋಗಳು ವೈರಲ್ ಆಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ತೀರ್ಥಹಳ್ಳಿಯ ವಿದ್ಯಾರ್ಥಿ ಸಂಘಟನೆಯ ಮುಖಂಡನೋರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಈ ವಿಷಯವನ್ನು ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ತಿಳಿಸಿದ್ದಾರೆ. ಭಾನುವಾರ ಬೆಳಿಗ್ಗೆ ಹೇಳಿಕೆ ನೀಡಿರುವ ಅವರು, ‘ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ಅಶ್ಲೀಲ ವೀಡಿಯೋಗಳಿಗೆ ಸಂಬಂಧಿಸಿದಂತೆ ಯುವಕನೋರ್ವನ ಬಂಧಿಸಲಾಗಿದೆ. ಆತನ ವಿರುದ್ದ ಎಫ್.ಐ.ಆರ್ ದಾಖಲಿಸಿಕೊಂಡು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗುವುದು’ ಎಂದು ಮಾಹಿತಿ ನೀಡಿದ್ದಾರೆ.

ಕಾಲೇಜು ವಿದ್ಯಾರ್ಥಿ: ಪ್ರಸ್ತುತ ಪೊಲೀಸರಿಂದ ಬಂಧಿತನಾಗಿರುವ ಆರೋಪಿಯು, ಕಾಲೇಜ್ ವೊಂದರ ವಿದ್ಯಾರ್ಥಿಯಾಗಿದ್ದಾನೆ. ಜೊತೆಗೆ ವಿದ್ಯಾರ್ಥಿ ಸಂಟನೆಯೊಂದರ ನಾಯಕನಾಗಿದ್ದಾನೆ ಎನ್ನಲಾಗಿದೆ. ಆರೋಪಿಯು ಯುವತಿಯರ ಜೊತೆ ಸಲುಗೆಯಿಂದಿರುವ ವೀಡಿಯೋಗಳು ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.

ಇದು ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆಗೆಡೆ ಮಾಡಿಕೊಟ್ಟಿತ್ತು. ತೀರ್ಥಹಳ್ಳಿಯ ಕೆಲ ಸಂಘಟನೆಗಳು ಆರೋಪಿಯ ಬಂಧನಕ್ಕೆ ಒತ್ತಾಯಿಸಿದ್ದವು. ಕಠಿಣ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಗೆ ಆಗ್ರಹಿಸಿದ್ದವು.

ಅಪಾಯಕಾರಿ ಪ್ಲಾಸ್ಟಿಕ್ ಕವರ್’ಗೆ ಸೆಡ್ಡು ಹೊಡೆದ ಪರಿಸರ ಸ್ನೇಹಿ ಮೆಕ್ಕೆಜೋಳ - ಸಬ್ಬಕ್ಕಿಯಿಂದ ತಯಾರಿಸಿದ ಕ್ಯಾರಿ ಬ್ಯಾಗ್’ಗಳು..! Previous post ಅಪಾಯಕಾರಿ ಪ್ಲಾಸ್ಟಿಕ್ ಕವರ್’ಗೆ ಸೆಡ್ಡು ಹೊಡೆದ ಪರಿಸರ ಸ್ನೇಹಿ ಮೆಕ್ಕೆಜೋಳ – ಸಬ್ಬಕ್ಕಿಯಿಂದ ತಯಾರಿಸಿದ ಕ್ಯಾರಿ ಬ್ಯಾಗ್’ಗಳು..!
ಶಿವಮೊಗ್ಗ : ಮನೆಯಲ್ಲಿ ಒಂಟಿ ಮಹಿಳೆಯ ನಿಗೂಢ ಸಾವು – ಕೊಲೆ ಶಂಕೆ? Next post ಶಿವಮೊಗ್ಗ : ಮನೆಯಲ್ಲಿ ಒಂಟಿ ಮಹಿಳೆಯ ನಿಗೂಢ ಸಾವು – ಕೊಲೆ ಶಂಕೆ?