ನೀರು ಪಾಲಾದ ಕಾರ್ಕಳದ ಇಬ್ಬರು ಉಪನ್ಯಾಸಕರು!

ತೀರ್ಥಹಳ್ಳಿ, ಜೂ. 18:  ತೀರ್ಥಹಳ್ಳಿ ತಾಲೂಕಿನ ತೀರ್ಥಮತ್ತೂರು ಗ್ರಾಮದ ತುಂಗಾ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ ಉಪನ್ಯಾಸಕರಿಬ್ಬರು, ನೀರು ಪಾಲಾದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ.

ಉಡುಪಿ ಜಿಲ್ಲೆ ಕಾರ್ಕಳದ ನಿಟ್ಟೆ ಎಂಜಿನಿಯರಿಂಗ್ ಕಾಲೇಜ್ ನ ಉಪನ್ಯಾಸಕರಾದ ಪುನೀತ್ (36) ಹಾಗೂ ಬಾಲಾಜಿ (38) ನೀರು ಪಾಲಾದವರೆಂದು ಗುರುತಿಸಲಾಗಿದೆ.

ಇದರಲ್ಲಿ ಬಾಲಾಜಿ ಅವರ ಶವ ಪತ್ತೆಯಾಗಿದೆ. ಮತ್ತೋರ್ವರ ಶೋಧ ಕಾರ್ಯಾಚರಣೆ ನಡೆಯುತ್ತಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ, ತೀರ್ಥಹಳ್ಳಿ ಪೊಲೀಸರು ದೌಡಾಯಿಸಿದ್ದಾರೆ. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದು ಬರಬೇಕಾಗಿದೆ.

ಶಿವಮೊಗ್ಗ : ಮನೆಯಲ್ಲಿ ಒಂಟಿ ಮಹಿಳೆಯ ನಿಗೂಢ ಸಾವು – ಕೊಲೆ ಶಂಕೆ? Previous post ಶಿವಮೊಗ್ಗ : ಮನೆಯಲ್ಲಿ ಒಂಟಿ ಮಹಿಳೆಯ ನಿಗೂಢ ಸಾವು – ಕೊಲೆ ಶಂಕೆ?
ಹಣದಾಸೆಗೆ ಪರಿಚಯಸ್ಥನಿಂದಲೇ ನಡೆಯಿತೆ ಎಂಜಿನಿಯರ್ ಪತ್ನಿಯ ಹತ್ಯೆ : ಹಂತಕರ ಬೆನ್ನು ಬಿದ್ದ ಪೊಲೀಸರು! Next post ಹಣದಾಸೆಗೆ ಪರಿಚಯಸ್ಥನಿಂದಲೇ ನಡೆಯಿತೆ ಎಂಜಿನಿಯರ್ ಪತ್ನಿಯ ಹತ್ಯೆ? : ಹಂತಕರ ಬೆನ್ನು ಬಿದ್ದ ಪೊಲೀಸರು..!