
ಭದ್ರಾವತಿ : ಗಾಂಜಾ ಮಾರಾಟ ಮಾಡುತ್ತಿದ್ದವರು ಪೊಲೀಸ್ ಬಲೆಗೆ!
ಭದ್ರಾವತಿ, ಜೂ. 19: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ಜೂ. 18 ರಂದು ನಡೆದಿದೆ.
ಭದ್ರಾವತಿ ಜಟ್’ಪಟ್ ನಗರದ ನಿವಾಸಿಗಳಾದ ನಸ್ರುಲ್ಲಾ ಯಾನೆ ನಸ್ರು (19) ಹಾಗೂ ಸೈಫ್ ಆಲಿ ಖಾನ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಸಬ್ ಇನ್ಸ್’ಪೆಕ್ಟರ್ ಶರಣಪ್ಪ ನೇತೃತ್ವದ ಪೊಲೀಸ್ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.
ದಾಳಿ: ಆರೋಪಿಗಳು ಭದ್ರಾವತಿಯ ಜಟ್’ಪಟ್ ನಗರದ ಸ್ಮಶಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದರು. ಈ ಕುರಿತಂತೆ ಪೊಲೀಸರಿಗೆ ಲಭಿಸಿದ ಖಚಿತ ವರ್ತಮಾನದ ಮೇರೆಗೆ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದರು.
ಈ ವೇಳೆ 34,400 ರೂ. ಮೌಲ್ಯದ 1 ಕೆ.ಜಿ. 490 ರೂ. ಮೌಲ್ಯದ ಒಣ ಗಾಂಜಾ ಮತ್ತು 700 ನಗದನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.