ಸರ್ಕಲ್ ಮುಚ್ಚಿದ ಫ್ಲೆಕ್ಸ್ : ಕಣ್ಮುಚ್ಚಿ ಕುಳಿತಿದೆಯೇ ಆಡಳಿತ..?!

ಸರ್ಕಲ್ ಮುಚ್ಚಿದ ಫ್ಲೆಕ್ಸ್ : ಕಣ್ಮುಚ್ಚಿ ಕುಳಿತಿದೆಯೇ ಆಡಳಿತ..?!

ಶಿವಮೊಗ್ಗ, ಜೂ. 21: ಶಿವಮೊಗ್ಗ ನಗರದ ಪ್ರಮುಖ ಸರ್ಕಲ್ ಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಗಳ ಹಾವಳಿ ಹೆಚ್ಚಾಗಲಾರಂಭಿಸಿದೆ. ರಸ್ತೆ, ಫುಟ್’ಪಾತ್ ಅತಿಕ್ರಮಿಸಿ ಫ್ಲೆಕ್ಸ್ ಅಳವಡಿಸಲಾಗುತ್ತಿದೆ. ಸುಗಮ ಜನ – ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಆರೋಪಗಳು ಸಾರ್ವಜನಿಕ ವಲಯದಿಂದ ನಿರಂತರವಾಗಿ ಕೇಳಿಬರುತ್ತಿದೆ.

ಇದಕ್ಕೆ ತಾಜಾ ನಿರ್ದರ್ಶನವೆಂಬಂತೆ, ಮಹಾವೀರ ವೃತ್ತದಲ್ಲಿ ಫುಟ್’ಪಾತ್ ಹಾಗೂ ರಸ್ತೆಗೆ ಹೊಂದಿಕೊಂಡಂತೆ ಬೃಹತ್ ಫ್ಲೆಕ್ಸ್ ವೊಂದನ್ನು ಖಾಸಗಿ ಶಿಕ್ಷಣ ಸಂಸ್ಥೆಯೊಂದು ಅಳವಡಿಸಿದೆ!

ಭಾರೀ ಪ್ರಮಾಣದ ಜನ-ವಾಹನ ದಟ್ಟಣೆಯಿರುವ ವೃತ್ತದಲ್ಲಿ, ರಸ್ತೆಗೆ ಹೊಂದಿಕೊಂಡಂತೆ ಬೃಹತ್ ಫ್ಲೆಕ್ಸ್ ಅಳವಡಿಸಲು ಅನುಮತಿ ನೀಡಿದ್ದು ಹೇಗೆ? ವುಳ್ಳವರು, ಪ್ರಭಾವಿಗಳಿಗೆ ಬೇರೊಂದು ನೀತಿಯಿದೆಯೇ? ಎಂದು ಕೆಲ ನಾಗರೀಕರು ಪಾಲಿಕೆ ಆಡಳಿತವನ್ನು ಪ್ರಶ್ನಿಸಲಾರಂಭಿಸಿದ್ದಾರೆ.

ಪ್ರಮುಖ ವೃತ್ತಗಳಲ್ಲಿ ಫ್ಲೆಕ್ಸ್, ಬಂಟಿಂಗ್ಸ್ ಅಳವಡಿಕೆ ಮಾಡಲು ಅನುಮತಿ ನೀಡುವ ವೇಳೆ ಸಂಚಾರ ವ್ಯವಸ್ಥೆ ಹಾಗೂ ನಾಗರೀಕರ ಹಿತಾಸಕ್ತಿಯನ್ನು ಆಡಳಿತಗಾರರು ಗಮನದಲ್ಲಿಟ್ಟುಕೊಳ್ಳಬೇಕು. ಇನ್ನು ಮುಂದಾದರು ಬೇಕಾಬಿಟ್ಟಿಯಾಗಿ ಫ್ಲೆಕ್ಸ್, ಬಂಟಿಂಗ್ಸ್ ಗಳ ಅಳವಡಿಕೆ ಗೆ ಅನುಮತಿ ನೀಡುವ ಮುನ್ನ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳ ಪಾಲನೆಯತ್ತ ಪಾಲಿಕೆ ಆಡಳಿತ ಆದ್ಯ ಗಮನಹರಿಸಬೇಕು ಎಂದು ಪ್ರಜ್ಞಾವಂತ ನಾಗರೀಕರು ಆಗ್ರಹಿಸುತ್ತಾರೆ.

ರಸ್ತೆಯಲ್ಲಿಯೇ ಶಿವಮೊಗ್ಗ ಪಾಲಿಕೆ ಮೇಯರ್’ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಸಾರ್ವಜನಿಕರು..! Previous post ರಸ್ತೆಯಲ್ಲಿಯೇ ಶಿವಮೊಗ್ಗ ಪಾಲಿಕೆ ಮೇಯರ್’ಗೆ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡ ಸಾರ್ವಜನಿಕರು..!
ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ? Next post ವರ್ಷಗಳೇ ಉರುಳಿದರೂ ಮುಗಿಯದ 24X7 ಕುಡಿಯುವ ನೀರು ಕಾಮಗಾರಿ : ತಪ್ಪದ ಕಿರಿಕಿರಿ – ಗಮನಹರಿಸುವುದೆ ಜಲ ಮಂಡಳಿ?