ಶಿವಮೊಗ್ಗ, ಜೂ. 28: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ರಸ್ತೆಯ ತುಂಗಾ ಚಾನಲ್ ಬಳಿ ನಡೆದಿದೆ.

ಗಾಂಜಾ ಮಾರಾಟ ಮಾಡುತ್ತಿದ್ದ ಯುವಕರಿಬ್ಬರು ಪೊಲೀಸ್ ಬಲೆಗೆ!

ಶಿವಮೊಗ್ಗ, ಜೂ. 28: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪದ ಮೇರೆಗೆ ಇಬ್ಬರು ಯುವಕರನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ ಘಟನೆ, ಶಿವಮೊಗ್ಗ ನಗರದ ಹೊರವಲಯ ಅನುಪಿನಕಟ್ಟೆ ರಸ್ತೆಯ ತುಂಗಾ ಚಾನಲ್ ಬಳಿ ನಡೆದಿದೆ.

ಖಚಿತ ವರ್ತಮಾನದ ಮೇರೆಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ. ಸಾಗರ ಪಟ್ಟಣ ರಾಮನಗರದ ನಿವಾಸಿ ಅಲ್ತಾಫ್ ಯಾನೆ ಮಚ್ಚಿ (36) ಹಾಗೂ ಶಿವಮೊಗ್ಗ ತಾಲೂಕು ಆಯನೂರು ಗ್ರಾಮದ ನಿವಾಸಿ ಸಯ್ಯದ್ ಯಾಸೀನ್ ಯಾನೆ ಯಾಸಿನ್ (25) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ.

ಜೂ. 27 ರಂದು ಸಿಇಎನ್ ಠಾಣೆ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದಾರೆ. ಆರೋಪಿತರಿಂದ 35 ಸಾವಿರ ರೂ. ಮೌಲ್ಯದ 1 ಕೆಜಿ 282 ಗ್ರಾಂ ತೂಕದ ಒಣ ಗಾಂಜಾ, 1500 ನಗದು, ಕೃತ್ಯಕ್ಕೆ ಉಪಯೋಗಿಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿಸಿಆರ್’ಬಿ ವಿಭಾಗದ ಡಿವೈಎಸ್ಪಿ ಡಿ.ಟಿ.ಪ್ರಭುರವರ ಮಾರ್ಗದರ್ಶನದಲ್ಲಿ ಸಿಇಎನ್ ಠಾಣೆ ಇನ್ಸ್​ಪೆಕ್ಟರ್ ದೀಪಕ್ ಎಂ. ಎಸ್., ಸಬ್ ಇನ್ಸ್​ಪೆಕ್ಟರ್ ಮಂಜುನಾಥ್ ಮತ್ತವರ ಸಿಬ್ಬಂದಿಗಳು ಈ ಯಶಸ್ವಿ  ಕಾರ್ಯಾಚರಣೆ ನಡೆಸಿದ್ದಾರೆ.

Previous post ಶಿವಮೊಗ್ಗ ಮಹಾನಗರ ಪಾಲಿಕೆಯಿಂದ ಒತ್ತುವರಿ ತೆರವು ಕಾರ್ಯಾಚರಣೆ : ಕೋಟ್ಯಾಂತರ ರೂ. ಮೌಲ್ಯದ ಜಾಗ ವಶಕ್ಕೆ!
ಕಾರ್ಪೋರೇಟರ್’ಗಳ ಆರೋಗ್ಯ ಭತ್ಯೆಗೆ ಬ್ರೇಕ್ : ಎಂಜಿನಿಯರ್ ಗಳಿಗೆ ತಲಾ 25 ಸಾವಿರ ರೂ. ದಂಡ - ಶಿವಮೊಗ್ಗ ಪಾಲಿಕೆ ಆಯುಕ್ತರ ಖಡಕ್ ಕ್ರಮ!! Next post ಕಾರ್ಪೋರೇಟರ್’ಗಳ ಆರೋಗ್ಯ ಭತ್ಯೆಗೆ ಬ್ರೇಕ್ : ಎಂಜಿನಿಯರ್ ಗಳಿಗೆ ತಲಾ 25 ಸಾವಿರ ರೂ. ದಂಡ – ಶಿವಮೊಗ್ಗ ಪಾಲಿಕೆ ಆಯುಕ್ತರ ಖಡಕ್ ಕ್ರಮ!!