ಶಿವಮೊಗ್ಗ ನಗರದ ವಿವಿಧೆಡೆ ಜ.22 ರಂದು ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಜ. 20: ಶಿವಮೊಗ್ಗ ನಗರದ ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಿಂದ ಸರಬರಾಜಾಗುವ ಫೀಡರ್ ಎ.ಎಫ್-12,13,19,21 ರಲ್ಲಿ ಜ. 22 ರಂದು ತುರ್ತು ಕಾಮಗಾರಿ ಹಮ್ಮಿಕೊಳ್ಳಲಾಗಿದೆ.

ಈ ಹಿನ್ನೆಲೆಯಲ್ಲಿ ಅಂದು ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆವರೆಗೆ ನಗರದ ಜೆ.ಹೆಚ್.ಪಟೇಲ್ ಬಡಾವಣೆ ಎ.ಬಿ.ಸಿ.ಡಿ.ಇ ಬ್ಲಾಕ್, ಸಹಕಾರಿನಗರ, ಆಲ್ಕೊಳ, ಮಂಗಳ ಮಂದಿರ ರಸ್ತೆ, ಸುಜ್ಞಾನ ಲೇಔಟ್, ಗಜಾನನ ಲೇಔಟ್, ಎಸ್.ಎಲ್.ವಿ.ಲೇಔಟ್,

ಎಸ್.ಹೆಚ್.ಲೇಔಟ್,  ಸೋಮಿನಕೊಪ್ಪ, ಆದರ್ಶನಗರ, ಭೋವಿ ಕಾಲೋನಿ, ವಿಜಯ ಲೇಔಟ್, ಸಹ್ಯಾದ್ರಿನಗರ, ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, 

ಪಶುವೈದ್ಯಕೀಯ ಕಾಲೇಜ್, ಹನುಮಂತನಗರ, ಅಂಬೇಡ್ಕರ್ ಕಾಲೋನಿ,  ಶಿವಸಾಯಿ ಕ್ಯಾಸ್ಟಿಂಗ್, ಮಧ್ವನಗರ, ಪುಷ್ಪಗಿರಿ ಲೇಔಟ್, ಕೆ.ಹೆಚ್.ಬಿ.ಕಾಲೋನಿ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ನಗರ ಉಪ ವಿಭಾಗ – 3 ರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Previous post ಬಿ.ಎಸ್.ಯಡಿಯೂರಪ್ಪ ಭೇಟಿಯಾದ ಶಾಸಕ ಕೆ.ಬಿ.ಅಶೋಕನಾಯ್ಕ್
Next post 7 ನೇ ವೇತನ ಆಯೋಗ : ಸರ್ಕಾರಕ್ಕೆ ಶೀಘ್ರ ವರದಿ ಸಲ್ಲಿಸಲು ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮನವಿ