ಹಣದಾಸೆಗೆ ಎಂಜಿನಿಯರ್ ಪತ್ನಿ ಹತ್ಯೆ ಪ್ರಕರಣ : ಆರೋಪಿಗಳು ಅರೆಸ್ಟ್ – ದರೋಡೆ ಮಾಡಿದ್ದ 33 ಲಕ್ಷ ರೂ. ವಶ

ಹಣದಾಸೆಗೆ ಎಂಜಿನಿಯರ್ ಪತ್ನಿ ಹತ್ಯೆ ಪ್ರಕರಣ : ಆರೋಪಿಗಳು ಅರೆಸ್ಟ್ – ದರೋಡೆ ಮಾಡಿದ್ದ 33 ಲಕ್ಷ ರೂ. ವಶ

ವರದಿ : ಬಿ. ರೇಣುಕೇಶ್

ಶಿವಮೊಗ್ಗ, ಜೂ. 30: ಶಿವಮೊಗ್ಗದ ವಿಜಯನಗರ ಬಡಾವಣೆಯಲ್ಲಿ ನಡೆದ, ನೀರಾವರಿ ಇಲಾಖೆ ಎಂಜಿನಿಯರ್ ಮಲ್ಲಿಕಾರ್ಜುನ್ ರವರ ಪತ್ನಿ ಕಮಲಮ್ಮರವರ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ, ಶಿವಮೊಗ್ಗದ ತುಂಗಾ ನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಮಲ್ಲಿಕಾರ್ಜುನ್ ಅವರ ಕಾರು ಚಾಲಕ ಶಿವಮೊಗ್ಗದ ಅಬ್ಬಲಗೆರೆ ಸಮೀಪದ ಹುಣಸೋಡು ತಾಂಡಾದ ನಿವಾಸಿ ಹನುಮಂತ ನಾಯ್ಕ್ (22), ಗುಂಡಪ್ಪಶೆಡ್ ನಿವಾಸಿ ಪ್ರದೀಪ್ ವಿ ಯಾನೆ ಮೊದಲಿಯಾರ್ (21), ಅನುಪಿನಕಟ್ಟೆ ತಾಂಡಾದ ನಿವಾಸಿಗಳಾದ ಅಪ್ಪುನಾಯ್ಕ್ ಯಾನೆ ಅಪ್ಪು (21), ಪ್ರಭುನಾಯ್ಕ್ ಯಾನೆ ಸೈಕ್ (26),

ಮಲ್ಲಿಕಾರ್ಜುನ್ ಅವರ ಕಾರು ಚಾಲಕ ಶಿವಮೊಗ್ಗದ ಅಬ್ಬಲಗೆರೆ ಸಮೀಪದ ಹುಣಸೋಡು ತಾಂಡಾದ ನಿವಾಸಿ ಹನುಮಂತ ನಾಯ್ಕ್ (22), ಗುಂಡಪ್ಪಶೆಡ್ ನಿವಾಸಿ ಪ್ರದೀಪ್ ವಿ ಯಾನೆ ಮೊದಲಿಯಾರ್ (21), ಅನುಪಿನಕಟ್ಟೆ ತಾಂಡಾದ ನಿವಾಸಿಗಳಾದ ಅಪ್ಪುನಾಯ್ಕ್ ಯಾನೆ ಅಪ್ಪು (21), ಪ್ರಭುನಾಯ್ಕ್ ಯಾನೆ ಸೈಕ್ (26),

ಗುಂಡಪ್ಪ ಶೆಡ್ ನಿವಾಸಿ ಸತೀಶ್ ವಿ (26), ರಾಜು ವೈ ಯಾನೆ ತೀತಾ ಯಾನೆ ತೀರ್ಥ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಇವರೆಲ್ಲರೂ ಸ್ನೇಹಿತರಾಗಿದ್ದಾರೆ. ವಾಹನ ಚಾಲನೆ, ಗಾರೆ ಕೆಲಸ, ಕಂಟ್ರ್ಯಾಕ್ಟರ್, ಕೂಲಿ ಕೆಲಸ  ಮಾಡುವವರಾಗಿದ್ದಾರೆ.

ಜೂ. 27 ಹಾಗೂ ಜೂ. 28 ರಂದು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 33,74,800 ನಗದು, 7 ಮೊಬೈಲ್ ಫೋನ್, ಟಾಟಾ ಇಂಡಿಕಾ ಕಾರು, ಮೂರು ಬೈಕ್, ಕೊಲೆ ಮಾಡಲು ಬಳಸಿದ್ದ ಆಯುಧವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಶುಕ್ರವಾರ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಂಧಿತ ಆರೋಪಿಗಳ ಕುರಿತಂತೆ ವಿವರ ನೀಡಿದ್ದಾರೆ.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಶುಕ್ರವಾರ ಶಿವಮೊಗ್ಗ ನಗರದ ಡಿಎಆರ್ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಬಂಧಿತ ಆರೋಪಿಗಳ ಕುರಿತಂತೆ ವಿವರ ನೀಡಿದ್ದಾರೆ.

‘ಪ್ರಕರಣದ ಆರೋಪಿಗಳನ್ನು ಬಂಧಿಸಲು ಮೂರು ವಿಶೇಷ ಪೊಲೀಸ್ ತಂಡ ರಚಿಸಲಾಗಿತ್ತು. ಅತ್ಯಂತ ಚಾಕಚಕ್ಯತೆಯಿಂದ ಆರೋಪಿಗಳ ಜಾಡು ಪತ್ತೆ ಹಚ್ಚಿ ಬಂಧಿಸಲಾಗಿದೆ. ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಸಫಲವಾದ ತಂಡಗಳಿಗೆ ಅಭಿನಂದನೆ ಸಲ್ಲಿಸುವುದಾಗಿ’ ಎಸ್ಪಿ ತಿಳಿಸಿದ್ದಾರೆ.

ನಂಬಿಕಸ್ಥ ಮನೆ ಕಾರು ಚಾಲಕನೇ ಹಂತಕನಾದ..!

*** ಪ್ರಕರಣದ ಮುಖ್ಯ ಆರೋಪಿ ಹನುಮಂತನಾಯ್ಕ್, ಕಳೆದ ಒಂದು ವರ್ಷದಿಂದ ಮಲ್ಲಿಕಾರ್ಜುನ್ ಅವರ ಮನೆಯ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದ. ಪ್ರತಿನಿತ್ಯ ಮಲ್ಲಿಕಾರ್ಜುನ್ ಅವರನ್ನು ಶಿವಮೊಗ್ಗದಿಂದ ಅವರು ಕರ್ತವ್ಯನಿರ್ವಹಿಸುತ್ತಿದ್ದ ಹೊಸದುರ್ಗ ಪಟ್ಟಣಕ್ಕೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿದ್ದ. ಆತನ ಬಗ್ಗೆ ಕುಟುಂಬ ಸದಸ್ಯರಿಗೂ ಒಳ್ಳೆಯ ಅಭಿಪ್ರಾಯವಿತ್ತು. ಈ ನಡುವೆ ಮಲ್ಲಿಕಾರ್ಜುನ್ ಅವರ ಪುತ್ರ ಎಂಬಿಬಿಎಸ್ ವ್ಯಾಸಂಗ ಪೂರ್ಣಗೊಳಿಸಿದ್ದು, ಎಂಡಿ ವಿದ್ಯಾಭ್ಯಾಸ ಮಾಡಲು ನಿರ್ಧರಿಸಿದ್ದರು. ಇದಕ್ಕಾಗಿ ಮಲ್ಲಿಕಾರ್ಜುನ್ ಅವರು ಸ್ನೇಹಿತರು, ಸಂಬಂಧಿಗಳಿಂದ 35 ಲಕ್ಷ ರೂ.ಗಳನ್ನು ಪಡೆದುಕೊಂಡಿದ್ದರು. ಈ ಹಣದ ಬ್ಯಾಗ್ ನ್ನು ಆರೋಪಿ ಹನುಮಂತನಾಯ್ಕ್ ನೇ ಕಾರಿನಲ್ಲಿ ಮನೆಗೆ ತಂದು, ಬೆಡ್ ರೂಂನ ವಾರ್ಡ್ ರೋಬ್ ನಲ್ಲಿಟ್ಟಿದ್ದ.

ನಂಬಿಕಸ್ಥ ಮನೆ ಕಾರು ಚಾಲಕನೇ ಹಂತಕನಾದ..!

ಭಾರೀ ದೊಡ್ಡ ಹಣವು ಆರೋಪಿಯ ಚಿತ್ತ ಕೆಡಿಸಿತ್ತು. ಈ ಕುರಿತಂತೆ ಇತರೆ ಆರೋಪಿಗಳಿಗೆ ಮಾಹಿತಿ ನೀಡಿದ್ದ. ತದನಂತರ ಎಲ್ಲರೂ 35 ಲಕ್ಷ ಹಣ ದೋಚಲು ಸಂಚು ರೂಪಿಸಿದ್ದರು. ಮಲ್ಲಿಕಾರ್ಜುನ್ ಅವರು ಮನೆಯಲ್ಲಿರದ ವೇಳೆ ಜೂ. 17 ರಂದು ಮಧ್ಯಾಹ್ನ ಸರಿಸುಮಾರು 3.30 ರ ವೇಳೆಗೆ ಹನುಮಂತನಾಯ್ಕ್ ವಿಜಯನಗರದಲ್ಲಿರುವ ಮನೆಗೆ ಇತರೆ ಆರೋಪಿಗಳಾದ ಪ್ರದೀಪ್ ಮತ್ತು ಅಪ್ಪುನಾಯ್ಕ್ ಜೊತೆ ಆಗಮಿಸಿದ್ದ.

ತನ್ನ ಅಣ್ಣನಿಗೆ ಅಪಘಾತವಾಗಿದ್ದು, ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಬೇಕಾಗಿದೆ. ಇದಕ್ಕಾಗಿ 3000 ರೂ. ನೀಡುವಂತೆ ಕೇಳಿಕೊಂಡಿದ್ದ. ಹಣ ನೀಡಲು ಕಮಲಮ್ಮ ನಿರಾಕರಿಸಿದ್ದರು. ನಂತರ ಆರೋಪಿಗಳು ಕುಡಿಯಲು ನೀರು ಕೊಡುವಂತೆ ಕೇಳಿದ್ದರು. ಅವರು ನೀರು ತರಲು ಅಡುಗೆ ಮನೆಗೆ ತೆರಳಿದಾಗ, ಮೂರು ಜನ ಆರೋಪಿಗಳು ಬಟ್ಟೆಯಿಂದ ಬಾಯಿ ಮುಚ್ಚಿದ್ದರು. ನಂತರ ತೆಂಗಿನಕಾಯಿ ಸುಲಿಯುವ ಆಯುಧದಿಂದ ಕುತ್ತಿಗೆಗೆ ಚುಚ್ಚಿ ಹತ್ಯೆ ಮಾಡಿದ್ದರು.

ನಂತರ  ಮನೆಯಲ್ಲಿದ್ದ 35 ಲಕ್ಷ ರೂ.ಗಳನ್ನು ದೋಚಿದ್ದರು. ತದನಂತರ ಗೋಪಾಳದಲ್ಲಿದ್ದ ಇತರೆ ಮೂವರು ಆರೋಪಿಗಳಾದ ಪ್ರಭುನಾಯ್ಕ್, ರಾಜ ಯಾನೆ ತೀತಾ ಮತ್ತು ಸತೀಶ್ ಜೊತೆ ಕಾರಿನಲ್ಲಿ ಪರಾರಿಯಾಗಿದ್ದರು.

ಕದ್ದ ಹಣ ಹಂಚಿಕೊಂಡಿದ್ದರು… ಹೊಸ ಮೊಬೈಲ್ ಫೋನ್ ಖರೀದಿಸಿದ್ದರು..!

*** ಆರೋಪಿಗಳೆಲ್ಲರು ಒಂದೊಂದು ಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದರು. ದರೋಡೆ ಮಾಡಿದ್ದ ಹಣವನ್ನು ಹಂಚಿಕೊಂಡಿದ್ದರು. ತಾವು ಈ ಹಿಂದೆ ಬಳಸುತ್ತಿದ್ದ ಮೊಬೈಲ್ ಪೋನ್ ಗಳನ್ನು ಸ್ವಿಚ್ ಆಫ್ ಮಾಡಿಕೊಂಡಿದ್ದರು. ನಂತರ ದರೋಡೆ ಮಾಡಿದ್ದ ಹಣದಲ್ಲಿಯೇ ಹೊಸ ಮೊಬೈಲ್ ಫೋನ್ ಗಳನ್ನು ಖರೀದಿಸಿ ಬಳಸುತ್ತಿದ್ದರು. ಆದರೆ ಆರೋಪಿಗಳ ಬೆನ್ನು ಬಿದ್ದಿದ್ದ ಪೊಲೀಸರು ಅವರ ಪತ್ತೆಗಾಗಿ ವ್ಯಾಪಕ ಶೋಧ ಕಾರ್ಯಾಚರಣೆ ನಡೆಸಿದ್ದರು. ಕೊನೆಗೂ ಎಲ್ಲ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.  

ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ವಿವರ

*** ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ತುಂಗಾನಗರ ಠಾಣೆ ಇನ್ಸ್’ಪೆಕ್ಟರ್ ಬಿ. ಮಂಜುನಾಥ್ ನೇತೃತ್ವದಲ್ಲಿ ಸಬ್ ಇನ್ಸ್’ಪೆಕ್ಟರ್ ಗಳಾದ ಕುಮಾರ್ ಕೂರುಗುಂದ, ರಘುವೀರ್,

ಪ್ರಕರಣದ ತನಿಖೆ ನಡೆಸಿದ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳ ವಿವರ

ಎಎಸ್ಐಗಳಾದ  ರಘುವೀರ್, ಮನೋಹರ್, ಹೆಚ್.ಸಿ.ಗಳಾದ ಕಿರಣ್ ಮೊರೆ, ಅರುಣ್ ಕುಮಾರ್, ಅಶೋಕ್, ಮೋಹನ್ ಕುಮಾರ್, ಪಿಸಿಗಳಾದ ಲಂಕೇಶ್ ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್ ನಾಯ್ಕ್, ನವೀನ್ ಕುಮಾರ್, ಗುರುನಾಯ್ಕ್, ಅರಹಂತ ಶಿರಹಟ್ಟಿ, ಜಿಲ್ಲಾ ಪೊಲೀಸ್ ಕಚೇರಿಯ ಎಎನ್’ಸಿ ವಿಭಾಗದ ಇಂದ್ರೇಶ್, ಗುರುರಾಜ್, ವಿಜಯಕುಮಾರ್ ಅವರು ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಗ್ಯ ಭತ್ಯೆ – ಪಾಲಿಕೆ ವ್ಯಾಪ್ತಿ ವಿಸ್ತರಣೆ : ಹಾಲಿ, ಮಾಜಿ ಕಾರ್ಪೋರೇಟರ್ ಗಳ ಅಭಿಪ್ರಾಯಪವೇನು? Previous post ಆರೋಗ್ಯ ಭತ್ಯೆ – ಪಾಲಿಕೆ ವ್ಯಾಪ್ತಿ ವಿಸ್ತರಣೆ  : ಹಾಲಿ, ಮಾಜಿ ಕಾರ್ಪೋರೇಟರ್ ಗಳ ಅಭಿಪ್ರಾಯವೇನು?
ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ! Next post ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ!