ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ!

ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ!

ಬರ್ಲಿನ್ (ಆಸ್ಟ್ರೀಯಾ): ವಿಶ್ವದ ಅತ್ಯಂತ ಹಳೇಯ ದಿನಪತ್ರಿಕೆಯಾದ ಆಸ್ಟ್ರೀಯಾ ದೇಶದ ವಿಯನ್ನಾ ಮೂಲದ ‘ವೀನರ್ ಜೈಟುಂಗ್’ ದಿನಪತ್ರಿಕೆಯ ಮುದ್ರಣ ಕಾರ್ಯವನ್ನು ಜೂ.30 ರ ಶುಕ್ರವಾರದಿಂದ ಸ್ಥಗಿತಗೊಳಿಸಲಾಗಿದೆ.

ಆಗಸ್ಟ್ 8, 1703 ರಲ್ಲಿ ಸದರಿ ಪತ್ರಿಕೆಯ ಮುದ್ರಣ ಕಾರ್ಯ ಆರಂಭಿಸಲಾಗಿತ್ತು. ಸತತ 320 ವರ್ಷಗಳಿಂದ ನಿರಂತರವಾಗಿ ಪತ್ರಿಕೆಯನ್ನು ಮುದ್ರಣ ಮಾಡಿಕೊಂಡು ಬರಲಾಗುತ್ತಿತ್ತು. ಒಟ್ಟಾರೆ ಇಲ್ಲಿಯವರೆಗೂ 1,16,840 ದಿನಗಳ ಕಾಲ ಪತ್ರಿಕೆ ಮುದ್ರಿತವಾಗಿದೆ!

ಸದರಿ ಪತ್ರಿಕೆಯು ಸರ್ಕಾರದ ಒಡೆತನದಲ್ಲಿತ್ತು. ಆದರೆ ಪ್ರತ್ಯೇಕ ಸಂಪಾದಕೀಯ ಮಂಡಳಿ ಹೊಂದಿತ್ತು. ಸರ್ಕಾರಿ ಜಾಹೀರಾತು ಹಾಗೂ ಆದಾಯದಿಂದಲೇ ಪತ್ರಿಕೆ ನಡೆಸಿಕೊಂಡು ಬರಲಾಗುತ್ತಿತ್ತು. ಸದ್ಯ ಆಸ್ಟ್ರೀಯಾ ಸರ್ಕಾರ ತನ್ನ ನೀತಿಯನ್ನು ಬದಲಾಯಿಸಿದ್ದು, ಪತ್ರಿಕೆಗೆ ನೀಡುತ್ತಿದ್ದ ಆದಾಯ ಸ್ಥಗಿತಗೊಳಿಸಿತ್ತು.

ಇದರಿಂದ ಪತ್ರಿಕೆ ಮುದ್ರಣ ಮಾಡುವುದು ಸಂಕಷ್ಟಕರವಾಗಿ ಪರಿಣಮಿಸಿತ್ತು. ಈ ಕಾರಣದಿಂದ ಪತ್ರಿಕೆಯ ದೈನಂದಿನ ಮುದ್ರಣ ಕಾರ್ಯ ಸ್ಥಗಿತಗೊಳಿಸುವ ನಿರ್ಧಾರವನ್ನು, ಪತ್ರಿಕೆಯ ಸಂಪಾದಕೀಯ ಮಂಡಳಿ ಕೈಗೊಂಡಿದೆ. ಇದಕ್ಕೆ ಬದಲಾಗಿ ಆನ್’ಲೈನ್ ಪೋರ್ಟಲ್ ಮೂಲಕ ದೈನಂದಿನ ಸುದ್ದಿ ಬಿತ್ತರಿಸಲು ಹಾಗೂ ತಿಂಗಳಿಗೊಮ್ಮೆ ಪತ್ರಿಕೆ ಹೊರತರುವ ತೀರ್ಮಾನ ಮಾಡಿದೆ.

ಪತ್ರಿಕೆಯ ಕೊನೆಯ ಮುದ್ರಣದ ಮೊದಲ ಪುಟದಲ್ಲಿ ‘320 ವರ್ಷ… 12 ಅಧ್ಯಕ್ಷರು… 10 ಚಕ್ರವರ್ತಿಗಳು… 2 ಗಣರಾಜ್ಯ… 1 ಪತ್ರಿಕೆ…’ ಎಂಬ ಹೆಡ್ಡಿಂಗ್ ನಲ್ಲಿ ಸುದ್ದಿ ಪ್ರಕಟಿಸಿದೆ.

‘ವೀನರ್ ಜೈಟುಂಗ್’ ಪ್ರಧಾನ ಸಂಪಾದಕ ಥಾಮಸ್ ಸೀಫರ್ಟ್ ಅವರು, ಆಸ್ಟ್ರೀಯ ಸರ್ಕಾರದ ಹೊಸ ನೀತಿಯನ್ನು ಖಂಡಿಸಿದ್ದಾರೆ. ಪತ್ರಿಕೆಯ ದೈನಂದಿನ ಆವೃತ್ತಿ ಸ್ಥಗಿತಗೊಳಿಸುವ ನಿರ್ಧಾರವನ್ನು, ‘ಪತ್ರಿಕೋದ್ಯಮಕ್ಕೆ ಬಿರುಗಾಳಿಯ ಸಮಯ’ ಎಂದು ಹೇಳಿಕೊಂಡಿದ್ದಾರೆ. 
ಹಣದಾಸೆಗೆ ಎಂಜಿನಿಯರ್ ಪತ್ನಿ ಹತ್ಯೆ ಪ್ರಕರಣ : ಆರೋಪಿಗಳು ಅರೆಸ್ಟ್ – ದರೋಡೆ ಮಾಡಿದ್ದ 33 ಲಕ್ಷ ರೂ. ವಶ Previous post ಹಣದಾಸೆಗೆ ಎಂಜಿನಿಯರ್ ಪತ್ನಿ ಹತ್ಯೆ ಪ್ರಕರಣ : ಆರೋಪಿಗಳು ಅರೆಸ್ಟ್ – ದರೋಡೆ ಮಾಡಿದ್ದ 33 ಲಕ್ಷ ರೂ. ವಶ
ಶಿವಮೊಗ್ಗದ ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ವೀಡಿಯೋ! Next post ಶಿವಮೊಗ್ಗ – ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ಆದ ವೀಡಿಯೋ!