ಶಿವಮೊಗ್ಗದ ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ವೀಡಿಯೋ!

ಶಿವಮೊಗ್ಗ – ಬಾರ್ ಮುಂಭಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ : ವೈರಲ್ ಆದ ವೀಡಿಯೋ!

ಶಿವಮೊಗ್ಗ: ಶಿವಮೊಗ್ಗ ನಗರದ ಸವಾರ್ ಲೈನ್ ರಸ್ತೆಯಲ್ಲಿರುವ ಬಾರ್ ವೊಂದರ ಮುಂಭಾಗ, ಇತ್ತೀಚೆಗೆ ನಡೆದ ಗಲಾಟೆ ಪ್ರಕರಣವೊಂದರ ವೀಡಿಯೋ, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ!

ಜೂ. 26 ರ  ರಾತ್ರಿ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ವಿದ್ಯಾರ್ಥಿ ಸಂಘಟನೆಯೊಂದರ ಸದಸ್ಯರು ಹಾಗೂ ಇತರರ ನಡುವೆ ಗಲಾಟೆಯಾಗಿದೆ ಎಂದು ಹೇಳಲಾಗಿದೆ.

ಈ ಸಂಬಂಧ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಎರಡು ಕಡೆಯವರಿಂದ ದೂರು – ಪ್ರತಿದೂರು ದೂರು ಕೂಡ ದಾಖಲಾಗಿದೆ ಎನ್ನಲಾಗಿದೆ.  

ಎರಡು ಕಡೆಯವರ ನಡುವೆ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ನಡೆದಿದೆ. ತದನಂತರ ಮಾರಾಮಾರಿ ನಡೆದಿದೆ ಎಂದು ಹೇಳಲಾಗುತ್ತಿದೆ.

ಗಲಾಟೆಗೆ ಕಾರಣವೇನು?  ಭಾಗಿಯಾದವರು ಯಾರು? ಎಂಬಿತ್ಯಾದಿ ವಿವರಗಳ ಬಗ್ಗೆ ಇನ್ನಷ್ಟೆ ಹೆಚ್ಚಿನ ಮಾಹಿತಿಗಳು ಲಭ್ಯವಾಗಬೇಕಾಗಿದೆ.

ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ! Previous post ಮುದ್ರಣ ಸ್ಥಗಿತಗೊಳಿಸಿದ ವಿಶ್ವದ ಅತ್ಯಂತ ಹಳೇಯ ದಿನ ಪತ್ರಿಕೆ!
Next post ‘ದಿಕ್ಕು ತಪ್ಪಿದ, ಮೌಲ್ಯಗಳನ್ನು ಮರೆತ ಪತ್ರಿಕೋದ್ಯಮ’ – ಹಿರಿಯ ಪತ್ರಕರ್ತ ಸಮಿವುಲ್ಲಾ ಬೆಲಗೂರು