‘ದೂರದೃಷ್ಟಿಯಿಲ್ಲದ, ಅಭಿವೃದ್ದಿ ಮುನ್ನೋಟವಿಲ್ಲದ ಬಜೆಟ್’ : ಸಿಎಂ ಸಿದ್ದರಾಮಯ್ಯ ಬಜೆಟ್ ಕುರಿತಂತೆ ಶಾಸಕ ಡಿ.ಎಸ್.ಅರುಣ್ ಅಭಿಪ್ರಾಯ

‘ದೂರದೃಷ್ಟಿಯಿಲ್ಲದ, ಅಭಿವೃದ್ದಿ ಮುನ್ನೋಟವಿಲ್ಲದ ಬಜೆಟ್’ : ಶಾಸಕ ಡಿ.ಎಸ್.ಅರುಣ್

ಬೆಂಗಳೂರು / ಶಿವಮೊಗ್ಗ, ಜು. 7: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿದ ಬಜೆಟ್ ನಲ್ಲಿ ರಾಜ್ಯದ ಅಭಿವೃದ್ದಿಯ ಯಾವುದೇ ದೂರದೃಷ್ಟಿಯ ಕ್ರಮಗಳಿಲ್ಲವಾಗಿದೆ. ಪ್ರಗತಿ ವಿರೋಧಿ ಬಜೆಟ್ ಇದಾಗಿದೆ’  ಎಂದು ಶಿವಮೊಗ್ಗ ವಿಧಾನ ಪರಿಷತ್ ಕ್ಷೇತ್ರದ ಶಾಸಕ ಡಿ.ಎಸ್.ಅರುಣ್ ಅವರು ದೂರಿದ್ದಾರೆ.

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಂಡಿಸಿದ ಬಜೆಟ್ ನಲ್ಲಿ, ರಾಜ್ಯದ ಸರ್ವಾಂಗೀಣ ಅಭಿವೃದ್ದಿಗೆ ಸಾವಿರಾರು ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ ಸಿದ್ದರಾಮಯ್ಯರ ಬಜೆಟ್ ನಲ್ಲಿ ಅಭಿವೃದ್ದಿಗೆ ಸ್ಥಾನವೇ ಇಲ್ಲದಂತಾಗಿದೆ’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮುಖ್ಯಮಂತ್ರಿ ಸಿದ್ದರಾಮಯ್ಯ

ಬಜೆಟ್ ನಲ್ಲಿಯೂ ಓಲೈಕೆ, ತುಷ್ಠೀಕರಣದ ನೀತಿಗಳು ಕಂಡುಬರುತ್ತಿವೆ. ಹಾಗೆಯೇ ರಾಷ್ಟ್ರೀಯ ಐಕ್ಯತೆಯ ದೋತ್ಯಕವಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಶಿಕ್ಷಣ ನೀತಿಗೆ ಬದಲಾಗಿ, ಪ್ರತ್ಯೇಕ ಶಿಕ್ಷಣ ನೀತಿ ರೂಪಿಸಲು ಕ್ರಮಕೈಗೊಂಡಿರುವುದು ಅವೈಜ್ಞಾನಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ಯಾರೆಂಟಿಗಳಿಗೆ ಅನುದಾನ ಸಂಗ್ರಹಕ್ಕಾಗಿ, ವಿವಿಧ ಬಾಬ್ತುಗಳ ಮೇಲೆ ತೆರಿಗೆ ಹೊರೆ ಹೆಚ್ಚಿಸಿರುವುದು ಕಂಡುಬರುತ್ತದೆ. ಗ್ಯಾರಂಟಿ, ವಿವಿಧ ಭಾಗ್ಯಗಳ ಮೂಲಕ ರಾಜ್ಯದ ಆರ್ಥಿಕ ವ್ಯವಸ್ಥೆಯನ್ನು ದಿವಾಳಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

Previous post ‘ಬಿಜೆಪಿಯವರ ಸುಳ್ಳುಗಳಿಗೆ, ಜೆಡಿಎಸ್ ನವರ ಡ್ರಾಮಾಗಳಿಗೆ ಅರ್ಥಪೂರ್ಣವಾಗಿ ಉತ್ತರಿಸಿ’ : ಕಾಂಗ್ರೆಸ್ ಶಾಸಕರಿಗೆ ಸಿಎಂ ಸಿದ್ದರಾಮಯ್ಯ ಸಲಹೆ
ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿನ ಹಿರಿಯ ಐಪಿಎಸ್ ಅಧಿಕಾರಿ! Next post ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ತಮಿಳುನಾಡಿನ ಹಿರಿಯ ಐಪಿಎಸ್ ಅಧಿಕಾರಿ!