ಬೆಂಗಳೂರಿನ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಜಾಪುರ ಜಿಲ್ಲೆಯ ಆರೋಪಿಯನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು!

ಬೆಂಗಳೂರಿನ ಕೋರ್ಟ್ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಬಿಜಾಪುರ ಜಿಲ್ಲೆಯ ಆರೋಪಿಯನ್ನು ಬಂಧಿಸಿದ ಶಿವಮೊಗ್ಗ ಪೊಲೀಸರು!

ಶಿವಮೊಗ್ಗ, ಜು. 11: ಬೆಂಗಳೂರಿನ ಕೋಕಾ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ, ಬಿಜಾಪುರ ಜಿಲ್ಲೆಯ ಆರೋಪಿಯೋರ್ವನನ್ನು, ಶಿವಮೊಗ್ಗದ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.

ಬಿಜಾಪುರ ಜಿಲ್ಲೆ ಇಂಡಿ ತಾಲೂಕು ನಂದ್ರಾಳ ಗ್ರಾಮದ ನಿವಾಸಿ ಏಜಾಸ್ ಪಟೇಲ್ (35) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ಜು. 9 ರಂದು ಇಂಡಿ ತಾಲೂಕಿನ ಭೈರವಣಿಗೆ ಗ್ರಾಮದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಸುರೇಶ್ ಎಂ ಮಾರ್ಗದರ್ಶನದಲ್ಲಿ ವಿನೋಬನಗರ ಠಾಣೆ ಇನ್ಸ್’ಪೆಕ್ಟರ್ ರವಿ ಎ. ಎಸ್. ನೇತೃತ್ವದಲ್ಲಿ ಪಿಎಸ್ಐ ಮಂಜುನಾಥ್, ಸಿಬ್ಬಂದಿಗಳಾದ ಸಾಗರ್ ಹಾಗೂ ಮಂಜುನಾಥ್ ತಂಡ ಆರೋಪಿಯನ್ನು ಬಂಧಿಸುವಲ್ಲಿ ಸಫಲವಾಗಿದೆ.

ಆರೋಪಿ ಏಜಾಸ್ ಪಟೇಲ್ ವಿರುದ್ದ ಕೋಕಾ ಕಾಯ್ದೆ (ಕರ್ನಾಟಕ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ), ಐಟಿ ಕಾಯ್ದೆ, ಆಯುಧ ಕಾಯ್ದೆ ಸೇರಿದಂತೆ ಐಪಿಸಿಯ ವಿವಿಧ ಕಲಂಗಳಡಿ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆರೋಪಿ ವಿರುದ್ದ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯದ ಕೋಕಾ ಕೋರ್ಟ್ ನಲ್ಲಿ ವಿಚಾರಣೆ ನಡೆಯುತ್ತಿದೆ. ಜೊತೆಗೆ ಆರೋಪ ಪಟ್ಟಿ ಕೂಡ ದಾಖಲಾಗಿದೆ. ಜಾಮೀನಿನ ಮೇಲೆ ಹೊರಬಂದಿದ್ದ ಆರೋಪಿಯು, 2021 ರಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ. ಈತನ ಬಂಧನಕ್ಕೆ ವಾರೆಂಟ್ ಹೊರಡಿಸಲಾಗಿತ್ತು. ಈ ಕುರಿತಂತೆ ಪೊಲೀಸ್ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಪ್ರಕರಣವೇನು?: 2014 ರಲ್ಲಿ ಶಿವಮೊಗ್ಗದ ಅಡಕೆ ಮಂಡಿ ವರ್ತಕರೋರ್ವರಿಗೆ ಹಣಕ್ಕೆ ಡಿಮ್ಯಾಂಡ್ ಮಾಡಿ ಜೀವ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ, ಕುಖ್ಯಾತ ಭೂಗತ ಪಾತಕಿ ಬನ್ನಂಜೆ ರಾಜಾನ ವಿರುದ್ದ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೇ ಪ್ರಕರಣದಲ್ಲಿ ಪ್ರಸ್ತುತ ಬಂಧಿತನಾಗಿರುವ ಆರೋಪಿ ಏಜಾಸ್ ಪಟೇಲ್ ಹಾಗೂ ಇತರೆ ಕೆಲ ಕ್ರಿಮಿನಲ್ಸ್ ಗಳನ್ನು ಪೊಲೀಸರು ಬಂಧಿಸಿದ್ದರು. ರಿವಾಲ್ವಾರ್, ಮದ್ದುಗುಂಡುಗಳನ್ನು ವಶಕ್ಕೆ ಪಡೆದಿದ್ದರು. ಕೋಕಾ ಸೇರಿದಂತೆ ಹಲವು ಕಾಯ್ದೆಗಳಡಿ ಪ್ರಕರಣ ದಾಖಲಿಸಿದ್ದರು.

ಸರ್ಕಾರಿ ಗೋಡೌನ್ ಬಳಿ ಇಸ್ಪೀಟ್ ಜೂಜಾಟ : 6 ಜನರು ವಶಕ್ಕೆ Previous post ಸರ್ಕಾರಿ ಗೋಡೌನ್ ಬಳಿ ಇಸ್ಪೀಟ್ ಜೂಜಾಟ : 6 ಜನರು ವಶಕ್ಕೆ
ಮಳೆ ಕೊರತೆ : ಲಿಂಗನಮಕ್ಕಿಯಲ್ಲಿ 28, ಭದ್ರಾ ಡ್ಯಾಂನಲ್ಲಿ 34 ಅಡಿ ಕಡಿಮೆ ನೀರು ಸಂಗ್ರಹ! Next post ಮಳೆ ಕೊರತೆ : ಲಿಂಗನಮಕ್ಕಿಯಲ್ಲಿ 28, ಭದ್ರಾ ಡ್ಯಾಂನಲ್ಲಿ 34 ಅಡಿ ಕಡಿಮೆ ನೀರು ಸಂಗ್ರಹ!