ಶಿವಮೊಗ್ಗ – ಭದ್ರಾವತಿಯ ವಿವಿಧೆಡೆ ನ್ಯಾಯಬೆಲೆ ಅಂಗಡಿ ತೆರೆಯಲು ಆಹಾರ ಇಲಾಖೆಯಿಂದ ಅರ್ಜಿ ಆಹ್ವಾನ

ಶಿವಮೊಗ್ಗ – ಭದ್ರಾವತಿಯ ವಿವಿಧೆಡೆ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

ಶಿವಮೊಗ್ಗ, ಜೂ. 17: ಶಿವಮೊಗ್ಗ ಮತ್ತು ಭದ್ರಾವತಿ ತಾಲೂಕುಗಳ ವಿವಿಧೆಡೆ ಹೊಸದಾಗಿ ನ್ಯಾಯಬೆಲೆ ಅಂಗಡಿಗಳನ್ನು ತೆರೆಯಲು ಅರ್ಜಿ ಆಹ್ವಾನಿಸಲಾಗಿದೆ. ಅರ್ಹರು ಶಿವಮೊಗ್ಗ ಮತ್ತು ಭದ್ರಾವತಿಯ ಆಹಾರ ಇಲಾಖೆಯ ಅನೌಪಚಾರಿಕ ಪಡಿತರ ಪ್ರದೇಶ / ಉಪ ನಿರ್ದೇಶಕರ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಈ ಕುರಿತಂತೆ ಜು. 17 ರಂದು ಆಹಾರ, ನಾಗರೀಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದು, ವಿವರ ಈ ಮುಂದಿನಂತಿದೆ.

ಶಿವಮೊಗ್ಗ ನಗರ ಪ್ರದೇಶ ವ್ಯಾಪ್ತಿಯ ಆರ್.ಎಂ.ಎಲ್. ನಗರದ ಎಡಭಾಗ, ಕನಕ ವಿದ್ಯಾ ಸಂಸ್ಥೆಯ ಹತ್ತಿರ, ಮಂಜುನಾಥ ಬಡಾವಣೆ, ನಾಗರಕಟ್ಟೆ ದೇವಸ್ಥಾನದ ಹತ್ತಿರ, ಶಾಂತಿನಗರ ಮುಖ್ಯರಸ್ತೆ, ಶ್ರೀ ಶನೇಶ್ವರಸ್ವಾಮಿ ದೇವಸ್ಥಾನದ ಹತ್ತಿರ, ಗಾಡಿಕೊಪ್ಪ ಪುರದಾಳು ರಸ್ತೆ,

ಗಾಡಿಕೊಪ್ಪ ತಾಂಡ, ಟಿಪ್ಪುನಗರ ಬಲಭಾಗ ಅಲ್ ಹಬೀಬ್ ಆಂಗ್ಲ ಪ್ರಾ.ಮತ್ತು ಪ್ರೌಢಶಾಲೆ ಹತ್ತಿರ, ಟಿಪ್ಪುನಗರ ಕೆಕೆ ಶೆಡ್, ಗೋಪಾಳ ರಂಗನಾಥ ಬಡಾವಣೆ ಬಿ ಬ್ಲಾಕ್ ಶ್ರೀ ಶನೇಶ್ವರ ಸ್ವಾಮಿ ದೇವಸ್ಥಾನದ ಹತ್ತಿರ, ಶರಾವತಿ ನಗರ ಮುಖ್ಯರಸ್ತೆ ಬಿ ಬ್ಲಾಕ್ ಹಿಂದೂ ರುದ್ರಭೂಮಿ ಎದುರು.

ಭದ್ರಾವತಿ ನಗರ ಪ್ರದೇಶದ ಹುತ್ತಾ ಕಾಲೋನಿ ಈ ಎಲ್ಲಾ ಸ್ಥಳಗಳಲ್ಲಿ ಹೊಸದಾಗಿ ನ್ಯಾಯಬೆಲೆ  ಅಂಗಡಿ ತೆರೆಯಲು ಆಗಸ್ಟ್-15 ರೊಳಗೆ ಅರ್ಜಿ ಸಲ್ಲಿಸಬಹುದು ಎಂದು ಆಹಾರ, ನಾಗರೀಕ ಸರಬರಾಜು  ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಿವಮೊಗ್ಗ : ಗಾಂಜಾ ಮಾರಾಟ - ಇಬ್ಬರು ಯುವಕರ ಬಂಧನ ತೀರ್ಥಹಳ್ಳಿ : ಶಾಲಾ ಮೈದಾನದಲ್ಲಿ ಇಸ್ಪೀಟ್ ಜೂಜು - 10 ಜನರು ವಶಕ್ಕೆ ಶಿವಮೊಗ್ಗ – ಭದ್ರಾವತಿಯ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರ ಪಥ ಸಂಚಲನ Previous post ಶಿವಮೊಗ್ಗ : ಗಾಂಜಾ ಮಾರಾಟ – ಇಬ್ಬರು ಯುವಕರ ಬಂಧನ
ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳ ಕರ್ತವ್ಯಕ್ಕೆ ಅಡ್ಡಿ ಪ್ರಕರಣ : ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ Next post ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ ಕರ್ತವ್ಯಕ್ಕೆ ಅಡ್ಡಿ ಪ್ರಕರಣ : ಇಬ್ಬರಿಗೆ 3 ವರ್ಷ ಕಠಿಣ ಜೈಲು ಶಿಕ್ಷೆ