‘ಗೃಹ ಲಕ್ಷ್ಮೀ’ ಯೋಜನೆಗೆ ಆನ್’ಲೈನ್ ನಲ್ಲಿ ಅರ್ಜಿ ಹಾಕಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ಸೇವಾ ಸಿಂಧು ಕೇಂದ್ರವೊಂದರ ಬಾಗಿಲು ಮುಚ್ಚಿಸಲಾಗಿದೆ. ಜೊತೆಗೆ ಸದರಿ ಸೇವಾ ಕೇಂದ್ರದ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.

ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಹಣ ವಸೂಲಿ : ಶಿವಮೊಗ್ಗದಲ್ಲಿ ಸೇವಾ ಸಿಂಧು ಕೇಂದ್ರದ ಬಾಗಿಲು ಬಂದ್ – ಪೊಲೀಸರಿಗೆ ದೂರು!

ಶಿವಮೊಗ್ಗ, ಜು. 25: ‘ಗೃಹ ಲಕ್ಷ್ಮೀ’ ಯೋಜನೆಗೆ ಆನ್’ಲೈನ್ ನಲ್ಲಿ ಅರ್ಜಿ ಹಾಕಲು ಹಣ ಪಡೆಯುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ, ಶಿವಮೊಗ್ಗದ ಸೇವಾ ಸಿಂಧು ಕೇಂದ್ರವೊಂದರ ಬಾಗಿಲು ಮುಚ್ಚಿಸಲಾಗಿದೆ. ಜೊತೆಗೆ ಸದರಿ ಸೇವಾ ಕೇಂದ್ರದ ವಿರುದ್ದ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾದ ಘಟನೆ ನಡೆದಿದೆ.

ವಿನೋಬನಗರ ಬಡಾವಣೆಯಲ್ಲಿರುವ ಸೇವಾ ಕೇಂದ್ರದ ಮೇಲೆ ಜು. 24 ರಂದು ಈ ದಾಳಿ ನಡೆಸಲಾಗಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ, ಶಿಶು ಅಭಿವೃದ್ದಿ ಯೋಜನಾ ಕಚೇರಿಯ ಯೋಜನಾಧಿಕಾರಿ (ಸಿಡಿಪಿಓ) ಎನ್. ಚಂದ್ರಪ್ಪ ಅವರು ದಾಳಿ ನಡೆಸಿದ್ದಾರೆ.

ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ಹಣ ವಸೂಲಿ : ಶಿವಮೊಗ್ಗದಲ್ಲಿ ಸೇವಾ ಸಿಂಧು ಕೇಂದ್ರದ ಬಾಗಿಲು ಬಂದ್ – ಪೊಲೀಸರಿಗೆ ದೂರು!

ಅನುಮತಿಯೇ ಇಲ್ಲ!: ದಾಳಿಯ ವೇಳೆ ಸದರಿ ಸೇವಾ ಕೇಂದ್ರದಲ್ಲಿ, ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕಲು ನಾಗರೀಕರಿಂದ 100 ರೂಪಾಯಿ ವಸೂಲಿ ಮಾಡುತ್ತಿರುವುದು ಪತ್ತೆಯಾಗಿದೆ. ಹಾಗೆಯೇ ಸದರಿ ಸೇವಾ ಕೇಂದ್ರಕ್ಕೆ, ಗೃಹ ಲಕ್ಷ್ಮೀ ಯೋಜನೆಯಡಿ ಅರ್ಜಿ ಹಾಕಲು ಅದಿಕೃತವಾಗಿ ಅನುಮತಿಯೇ ಇಲ್ಲದಿರುವುದು ಪರಿಶೀಲನೆಯ ವೇಳೆ ಬೆಳಕಿಗೆ ಬಂದಿದೆ.  

ಭದ್ರಾವತಿ ತಾಲೂಕಿನ ಸೇವಾ ಕೇಂದ್ರವೊಂದಕ್ಕೆ, ಗೃಹ ಲಕ್ಷ್ಮೀ ಯೋಜನೆ ಅರ್ಜಿ ಹಾಕಲು ನೀಡಲಾಗಿದ್ದ ಯೂಸರ್ ಐಡಿ – ಪಾಸ್’ವರ್ಡ್ ಬಳಸಿ, ಸದರಿ ಕೇಂದ್ರದಲ್ಲಿ ಅನದಿಕೃತವಾಗಿ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಹಾಕುತ್ತಿರುವುದು ಪತ್ತೆಯಾಗಿದೆ.  

ಈ ಹಿನ್ನೆಲೆಯಲ್ಲಿ ತಕ್ಷಣವೇ ಸದರಿ ಸೇವಾ ಕೇಂದ್ರದ ಬಾಗಿಲು ಮುಚ್ಚಿಸಲಾಗಿದೆ. ಸೇವಾ ಕೇಂದ್ರ ಕಾರ್ಯಾಚರಣೆಗೆ ನೀಡಲಾಗಿದ್ದ ಅನುಮತಿ ರದ್ದುಗೊಳಿಸಲಾಗಿದೆ. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ, ಸೇವಾ ಕೇಂದ್ರದ ಮಾಲೀಕನ ವಿರುದ್ದ ಸಿಡಿಪಿಓ ಎನ್.ಚಂದ್ರಪ್ಪ ಅವರು ದೂರು ದಾಖಲಿಸಿದ್ದಾರೆ.

1.50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್! Previous post 1.50 ಲಕ್ಷ ರೂ. ಲಂಚ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್ ಕಚೇರಿ ಶಿರಸ್ತೇದಾರ್!
Next post ಜೆಸಿಬಿ ಮೂಲಕ ಎಟಿಎಂ ಯಂತ್ರ ಕಳವಿಗೆ ಯತ್ನಿಸಿದ ಐನಾತಿ ಕಳ್ಳ : ಶಿವಮೊಗ್ಗದಲ್ಲೊಂದು ಸಿನಿಮೀಯ ಘಟನೆ!