ಭಾರೀ ಮಳೆಯಿಂದ ರಸ್ತೆ - ತಡೆಗೋಡೆ ಕುಸಿತ : ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಡಿಸಿ ಆದೇಶ!

ಭಾರೀ ಮಳೆಯಿಂದ ರಸ್ತೆ – ತಡೆಗೋಡೆ ಕುಸಿತ : ಆಗುಂಬೆ ಘಾಟಿಯಲ್ಲಿ ಭಾರೀ ವಾಹನಗಳ ಸಂಚಾರ ನಿಷೇಧಿಸಿ ಶಿವಮೊಗ್ಗ ಡಿಸಿ ಆದೇಶ!

ಶಿವಮೊಗ್ಗ, ಜು. 27:  ಧಾರಾಕಾರ ಮಳೆ ಮತ್ತು ಭಾರೀ ವಾಹನಗಳ ಸಂಚಾರದಿಂದ ತೀರ್ಥಹಳ್ಳಿ ತಾಲೂಕಿನ ಆಗುಂಬೆ ಘಾಟಿ ರಸ್ತೆಯ 6, 7 ಮತ್ತು 11 ನೇ ತಿರುವಿನ ಹಲವೆಡೆ ಸಣ್ಣ ಬಿರುಕುಗಳಾಗಿವೆ. ರಸ್ತೆ ಕುಸಿತವಾಗಿದೆ. ಜೊತೆಗೆ ತಡೆಗೋಡೆಗೂ ಹಾನಿಯಾಗಿದೆ. ಈ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧಿಸಿ ಡಾ.ಆರ್.ಸೆಲ್ವಮಣಿ ಅವರು  ಆದೇಶಿಸಿದ್ದಾರೆ.

27-07-2023 ರಿಂದ 15-09-2023 ರವರೆಗೆ ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಭಾರೀ ವಾಹನಗಳು, ಪರ್ಯಾಯ ಮಾರ್ಗದಲ್ಲಿ ಸಂಚರಿಸಲು ಆದೇಶಿಸಲಾಗಿದೆ. ತೀರ್ಥಹಳ್ಳಿ-ಉಡುಪಿ ಮಾರ್ಗದಲ್ಲಿ ಸಂಚರಿಸುವ ಭಾರೀ ವಾಹನಗಳು ತೀರ್ಥಹಳ್ಳಿ-ಆಗುಂಬೆ-ಶೃಂಗೇರಿ-ಮಾಳಾಘಾಟ್-ಕಾರ್ಕಳ-ಉಡುಪಿ ಮಾರ್ಗದ ಮೂಲಕ

ಹಾಗೂ ತೀರ್ಥಹಳ್ಳಿ-ಮಾಸ್ತಿಕಟ್ಟೆ-ಸಿದ್ದಾಪುರ-ಕುಂದಾಪುರ-ಉಡುಪಿ ಮಾರ್ಗಗಳ ಮೂಲಕ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಗುರುವಾರ  ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ Previous post ಹಿಂದಿನ ವರ್ಷಗಳ ಅನುಭವದಿಂದ ಜೀವಹಾನಿ ತಪ್ಪಿಸಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಶಿವಮೊಗ್ಗ : ಆಗಸ್ಟ್ 31 ರಿಂದ ವಿಮಾನ ಹಾರಾಟ ಆರಂಭ ಉಡಾನ್ ಯೋಜನೆಯಡಿ ತಿರುಪತಿ ಗೋವಾ ಹೈದರಾಬಾದ್ ಗೂ ವಿಮಾನ : ಸಚಿವ ಎಂ.ಬಿ.ಪಾಟೀಲ್ Next post ಶಿವಮೊಗ್ಗ : ಆಗಸ್ಟ್ 31 ರಿಂದ ವಿಮಾನ ಹಾರಾಟ ಆರಂಭ