ಮಲೆನಾಡಿನಲ್ಲಿ ಕಡಿಮೆಯಾದ ವರ್ಷಧಾರೆಯ ಅಬ್ಬರ ಲಿಂಗನಮಕ್ಕಿ ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿಇಳಿಕೆ

ತಗ್ಗಿದ ಮಳೆ : ಲಿಂಗನಮಕ್ಕಿ, ತುಂಗಾ, ಭದ್ರಾ ಡ್ಯಾಂಗಳ ಒಳಹರಿವಿನಲ್ಲಿ ಇಳಿಕೆ

ಶಿವಮೊಗ್ಗ, ಜು. 28: ಕಳೆದೆರೆಡು ದಿನಗಳಿಂದ ಶಿವಮೊಗ್ಗ ಜಿಲ್ಲೆಯಲ್ಲಿ ವರ್ಷಧಾರೆಯ ಅಬ್ಬರ ಕಡಿಮೆಯಾಗಿದೆ. ನದಿಗಳ ನೀರಿನ ಹರಿವಿನಲ್ಲಿ ಇಳಿಕೆಯಾಗಿದೆ. ಇದರಿಂದ ಲಿಂಗನಮಕ್ಕಿ, ತುಂಗಾ, ಭದ್ರಾ ಜಲಾಶಯಗಳ ಒಳ ಹರಿವು ತಗ್ಗಲಾರಂಭಿಸಿದೆ.

ಶುಕ್ರವಾರದ ಬೆಳಿಗ್ಗೆಯ ಮಾಹಿತಿಯಂತೆ ರಾಜ್ಯದ ಪ್ರಮುಖ ಜಲ ವಿದ್ಯುತ್ ಉತ್ಪಾದನಾ ಕೇಂದ್ರವಾದ ಲಿಂಗನಮಕ್ಕಿ ಡ್ಯಾಂ ಒಳಹರಿವು 25,631 ಕ್ಯೂಸೆಕ್ ಗೆ ಇಳಿಕೆಯಾಗಿದೆ. 891 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 1785.6 (ಗರಿಷ್ಠ ಮಟ್ಟ : 1819) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 1798.4 ಅಡಿಯಿತ್ತು.

ಭದ್ರಾ ಡ್ಯಾಂ ಒಳಹರಿವು 16,041 ಕ್ಯೂಸೆಕ್ ಇದ್ದು, 185 ಕ್ಯೂಸೆಕ್ ನೀರನ್ನು ಹೊರ ಹರಿಸಲಾಗುತ್ತಿದೆ. ಡ್ಯಾಂ ನೀರಿನ ಮಟ್ಟ 159.6 (ಗರಿಷ್ಠ ಮಟ್ಟ : 186) ಅಡಿಯಿದೆ. ಕಳೆದ ವರ್ಷ ಇದೇ ದಿನದಂದು ಡ್ಯಾಂ ನೀರಿನ ಮಟ್ಟ 184.1 ಅಡಿಯಿತ್ತು.

ಉಳಿದಂತೆ ತುಂಗಾ ಡ್ಯಾಂನ ಒಳಹರಿವು 32,211 ಕ್ಯೂಸೆಕ್ ಇದೆ. 30,117 ಕ್ಯೂಸೆಕ್ ನೀರನ್ನು ಹೊರಹರಿಸಲಾಗುತ್ತಿದೆ. ಈಗಾಗಲೇ ಡ್ಯಾಂ ಗರಿಷ್ಠ ಮಟ್ಟ ತಲುಪಿದೆ.

ಮಳೆ ವಿವರ: ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡಂತೆ, ಕಳೆದ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಬಿದ್ದ ಒಟ್ಟಾರೆ ಸರಾಸರಿ ಮಳೆಯ ಪ್ರಮಾಣ 11.27 ಮಿಲಿ ಮೀಟರ್ (ಮಿ.ಮೀ.) ಆಗಿದೆ.

ಶಿವಮೊಗ್ಗ 4 ಮಿ.ಮೀ., ಭದ್ರಾವತಿ 3.90 ಮಿ.ಮೀ., ತೀರ್ಥಹಳ್ಳಿ 14.50 ಮಿ.ಮೀ., ಸಾಗರ 29.10 ಮಿ.ಮೀ., ಶಿಕಾರಿಪುರ 3.20 ಮಿ.ಮೀ., ಸೊರಬ 7.60 ಮಿ.ಮೀ. ಹಾಗೂ ಹೊಸನಗರದಲ್ಲಿ 16.60 ಮಿ.ಮೀ. ವರ್ಷಧಾರೆಯಾಗಿದೆ.

ಶಿವಮೊಗ್ಗ : ಆಗಸ್ಟ್ 31 ರಿಂದ ವಿಮಾನ ಹಾರಾಟ ಆರಂಭ ಉಡಾನ್ ಯೋಜನೆಯಡಿ ತಿರುಪತಿ ಗೋವಾ ಹೈದರಾಬಾದ್ ಗೂ ವಿಮಾನ : ಸಚಿವ ಎಂ.ಬಿ.ಪಾಟೀಲ್ Previous post ಶಿವಮೊಗ್ಗ : ಆಗಸ್ಟ್ 31 ರಿಂದ ವಿಮಾನ ಹಾರಾಟ ಆರಂಭ
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭದ್ರತಾ ವ್ಯವಸ್ಥೆ : ದೆಹಲಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಮಾಲೋಚನೆ Next post ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ಭದ್ರತಾ ವ್ಯವಸ್ಥೆ : ದೆಹಲಿಯಲ್ಲಿ ಸಂಸದ ಬಿ.ವೈ.ರಾಘವೇಂದ್ರ ಸಮಾಲೋಚನೆ