ತೀರ್ಥಹಳ್ಳಿ : ಅಡಕೆ ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದ ಇಬ್ಬರು ಅರೆಸ್ಟ್!

ತೀರ್ಥಹಳ್ಳಿ : ಅಡಕೆ ತೋಟದಲ್ಲಿ ಗಾಂಜಾ ಗಿಡ ಬೆಳೆದಿದ್ದ ಇಬ್ಬರು ಅರೆಸ್ಟ್!

ತೀರ್ಥಹಳ್ಳಿ, ಆ. 10: ಅಡಕೆ ತೋಟವೊಂದರಲ್ಲಿ ಗಾಂಜಾ ಗಿಡ ಬೆಳೆದಿದ್ದ ಆರೋಪದ ಮೇರೆಗೆ ಇಬ್ಬರನ್ನು ಪೊಲೀಸರು ಬಂಧಿಸಿದ ಘಟನೆ ತೀರ್ಥಹಳ್ಳಿ ತಾಲೂಕು ಕೋಣಂದೂರು ಸಮೀಪದ ಕೋಲಿಗೆ ಗ್ರಾಮದಲ್ಲಿ ಆ. 9 ರಂದು ನಡೆದಿದೆ.

ಕೋಲಿಗೆ ಗ್ರಾಮದ ನಿವಾಸಿಗಳಾದ ಸುನೀಲ್ (34) ಹಾಗೂ ಕಾರ್ತಿಕ್ (29) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಖಚಿತ ವರ್ತಮಾನದ ಮೇರೆಗೆ ಪೊಲೀಸರು ತೋಟದ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಆರೋಪಿಗಳು ಅಡಕೆ ಗಿಡಗಳ ನಡುವೆ ಗಾಂಜಾ ಗಿಡ ಬೆಳೆದಿದ್ದು ಪತ್ತೆಯಾಗಿದೆ.

2 ಕೆಜಿ 164 ಗ್ರಾಂ ತೂಕದ ಹಸಿ ಗಾಂಜಾ ಗಿಡಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇವುಗಳ ಮೌಲ್ಯ 80 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಇನ್ಸ್’ಪೆಕ್ಟರ್ ಅಶ್ವತ್ ಗೌಡ, ಸಬ್ ಇನ್ಸ್’ಪೆಕ್ಟರ್ ಗಾದಿ ಲಿಂಗಪ್ಪ ಗೌಡರ್ ಮತ್ತವರ ಸಿಬ್ಬಂದಿಗಳ ತಂಡ ಈ ಕಾರ್ಯಾಚರಣೆ ನಡೆಸಿದೆ.

ಬಂಧಿತ ಆರೋಪಿಗಳ ವಿರುದ್ದ ಎನ್.ಡಿ.ಪಿ.ಎಸ್ ಕಾಯ್ದೆ ಕಲಂ 8 (ಎ), 20 (ಎ) (ಐ) ಕಾಯ್ದೆಯಡಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭ Previous post ಬೆಂಗಳೂರಿನಲ್ಲಿ ಕೆಎಎಸ್ ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭ
ಭದ್ರಾವತಿ - ಲಾರಿಯಲ್ಲಿ ಡಿಸೇಲ್ ಕಳವು ಮಾಡಿದ್ದ ಇಬ್ಬರ ಬಂಧನ! Next post ಭದ್ರಾವತಿ : ಲಾರಿಯಲ್ಲಿ ಡೀಸೆಲ್ ಕಳವು ಪ್ರಕರಣ – ಶಿವಮೊಗ್ಗದ ಇಬ್ಬರ ಬಂಧನ!