
ಭದ್ರಾವತಿ : ಲಾರಿಯಲ್ಲಿ ಡೀಸೆಲ್ ಕಳವು ಪ್ರಕರಣ – ಶಿವಮೊಗ್ಗದ ಇಬ್ಬರ ಬಂಧನ!
ಭದ್ರಾವತಿ, ಆ. 10: ನಿಲ್ಲಿಸಿದ್ದ ಲಾರಿಯೊಂದರಲ್ಲಿ ಡೀಸೆಲ್ ಕಳವು ಮಾಡಿದ್ದ ಆರೋಪದ ಮೇರೆಗೆ ಇಬ್ಬರನ್ನು ಭದ್ರಾವತಿ ಹಳೇನಗರ ಠಾಣೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಶಿವಮೊಗ್ಗದ ಟಿಪ್ಪು ನಗರದ ನಿವಾಸಿಗಳಾದ ಸೋನು (24) ಹಾಗೂ ನೂರುಲ್ಲಾ (24) ಬಂಧಿತ ಆರೋಪಿಗಳೆಂದು ಗುರುತಿಸಲಾಗಿದೆ. ಆರೋಪಿಗಳಿಂದ 150 ಲೀಟರ್ ಡೀಸೆಲ್ ವಶಕ್ಕೆ ಪಡೆಯಲಾಗಿದೆ. ಇದರ ಅಂದಾಜು ಮೌಲ್ಯ 15 ಸಾವಿರ ರೂ.ಗಳೆಂದು ಅಂದಾಜಿಸಲಾಗಿದೆ.
ಕಳೆದ ಆ. 6 ರಂದು ಭದ್ರಾವತಿ ಪಟ್ಟಣದ ಶಿವನಿ ಕ್ರಾಸ್ ನ ಪೆಟ್ರೋಲ್ ಬಂಕ್ ವೊಂದರ ಸಮೀಪ ನಿಲ್ಲಿಸಿದ್ದ ಮಾವಿನಕೆರೆ ನಿವಾಸಿ ಮಹೇಶ್ ಎಂಬುವರ ಲಾರಿಯಲ್ಲಿದ್ದ ಡೀಸೆಲ್ ಕಳವು ಮಾಡಲಾಗಿತ್ತು.
ಈ ಸಂಬಂಧ ಮಹೇಶ್ ಅವರು ಹಳೇ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಭದ್ರಾವತಿ ಡಿವೈಎಸ್ಪಿ ಜಿತೇಂದ್ರ ಕುಮಾರ್ ದಯಾಮ ಅವರ ಮಾರ್ಗದರ್ಶನದಲ್ಲಿ ಇನ್ಸ್’ಪೆಕ್ಟರ್ ಶ್ರೀಶೈಲ, ಸಬ್ ಇನ್ಸ್’ಪೆಕ್ಟರ್ ಶರಣಪ್ಪ ಹಂಡ್ರುಗಲ್ ನೇತೃತ್ವದಲ್ಲಿ ಹೆಚ್.ಸಿ. ಗಳಾದ ಹಾಲಪ್ಪ, ಮಧು ಪ್ರಸಾದ್, ಪಿಸಿಗಳಾದ ನಾರಾಯಣಸ್ವಾಮಿ, ಮೌನೇಶ್, ರಾಘವೇಂದ್ರ, ರುದ್ರಪ್ಪ ರವರುಗಳು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.