‘ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶದ ಸುಳ್ಳು ಜಾಹೀರಾತು ನಂಬಿ ಮೋಸ ಹೋಗಬೇಡಿ’ – ಎಸ್ಪಿ ಮನವಿ!

ಶಿವಮೊಗ್ಗ, ಫೆ. 2: ಸದ್ಯ ಶಿವಮೊಗ್ಗ ವಿಮಾನ ನಿಲ್ದಾಣ ಸಾಕಷ್ಟು ಟ್ರೆಂಡಿಂಗ್ ನಲ್ಲಿದೆ. ಜನಮಾನಸದಲ್ಲಿ ಚರ್ಚೆಯಾಗುತ್ತಿದೆ. ಇದರ ನಡುವೆ ಸಾಮಾಜಿಕ ಜಾಲತಾಣಗಳಲ್ಲಿ ವಿಮಾನ ನಿಲ್ದಾಣದಲ್ಲಿ ಉದ್ಯೋಗಾವಕಾಶಗಳು ಖಾಲಿಯಿರುವ ಕುರಿತಂತೆ ಪೋಸ್ಟ್ ವೊಂದು ಹರಿದಾಡುತ್ತಿತ್ತು. ಇದು ವೈರಲ್ ಆಗಿತ್ತು.

ಆದರೆ ಈ ಉದ್ಯೋಗಾವಕಾಶದ ಪೋಸ್ಟ್ ನಕಲಿಯಾಗಿದೆ. ಇದನ್ನು ನಂಬಿ ಮೋಸ ಹೋಗದಂತೆ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ಎಚ್ಚರಿಕೆ ನೀಡಿದ್ದಾರೆ. ಈ ಕುರಿತಂತೆ ಗುರುವಾರ ಅವರು ಪ್ರಕಟಣೆಯೊಂದನ್ನು ಹೊರಡಿಸಿದ್ದಾರೆ.

‘ಈ ಜಾಹೀರಾತಿನ ಮೂಲದ ಕುರಿತಂತೆ ತನಿಖೆ ನಡೆಸಲಾಗುತ್ತಿದೆ. ಯಾವುದೇ ಕಾರಣಕ್ಕೂ ಈ ಜಾಹೀರಾತು ನಂಬದಂತೆ’ ಎಸ್ಪಿ ಅವರು ನಾಗರೀಕರಿಗೆ ಮನವಿ ಮಾಡಿದ್ದಾರೆ.

ಏನೀದೆ ಜಾಹೀರಾತಿನಲ್ಲಿ?: ಇಂಗ್ಲೀಷ್ ಭಾಷೆಯಲ್ಲಿರುವ  ನಕಲಿ ಜಾಹೀರಾತಿನಲ್ಲಿ ವಿಮಾನ ನಿಲ್ದಾಣದಲ್ಲಿ ವಿವಿಧ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತಿದೆ. ಶೀಘ್ರವೇ ಸಂದರ್ಶನ ನಡೆಸಲಾಗುವುದು.

ಬ್ಯಾಗೇಜ್ ಹೋಲ್ಡರ್, ಟಿಕೆಟ್ ಎಕ್ಸಿಕ್ಯೂಟಿವ್, ಏರ್ ಹೋಸ್ಟಸ್, ಗ್ರೌಂಡ್ ಸ್ಟಾಫ್ಸ್, ಕ್ಯಾಬಿನ್ ಕ್ರ್ಯೂ, ಏರ್ ಲೈನ್ಸ್ ಎಕ್ಸಿಕ್ಯೂಟಿವ್, ಬಿಸಿನೆಸ್ ಡೆವಲಪ್ ಮೆಂಟ್ ಮ್ಯಾನೇಜರ್, ಸೆಕ್ಯೂರಿಟಿ ಗಾರ್ಡ್, ಹೆಲ್ಪರ್ಸ್, ಟೀಂ ಮ್ಯಾನೇಜರ್ ಹುದ್ದೆಗಳಿಗೆ ನೇಮಕ ಮಾಡಿಕೊಳ್ಳಲಾಗುತ್ತದೆ.

ಎಸ್ಎಸ್ಎಲ್’ಸಿ, ಪಿಯುಸಿ ಹಾಗೂ ಯಾವುದೇ ಪದವಿ ಅಥವಾ ಡಿಪ್ಲೊಮಾ ಪದವಿ ಓದಿರುವ 40 ವರ್ಷದೊಳಗಿನ ಪುರುಷ – ಮಹಿಳಾ ಅಭ್ಯರ್ಥಿಗಳು ಶಿವಮೊಗ್ಗ ಏರ್ ಪೋರ್ಟ್ ಐರಿಂಗ್ ಎಂಬ ಇ-ಮೇಲ್ ಗೆ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಜಾಹೀರಾತಿನಲ್ಲಿ ತಿಳಿಸಲಾಗಿತ್ತು.

Previous post ‘ಹೆದ್ದಾರಿ ಗಂಡಾಂತರ..!’ : ಎಚ್ಚೆತ್ತುಕೊಳ್ಳುವುದೆ ಎನ್.ಹೆಚ್., ಪೊಲೀಸ್, ಸ್ಮಾರ್ಟ್ ಸಿಟಿ ಆಡಳಿತ?
Next post ಅರ್ಥಪೂರ್ಣ ನರೇಗಾ ದಿನ ಕಾರ್ಯಕ್ರಮ : ಜಿಪಂ ಸಿಇಓ ಎನ್.ಡಿ.ಪ್ರಕಾಶ್ ಭಾಗಿ