ಮೇವು ಬೆಳೆಗಳ ಕುರಿತು ರೈತರಿಗೆ ತರಬೇತಿ

ಶಿವಮೊಗ್ಗ ಡಿಸೆಂಬರ್ 28 (ಕರ್ನಾಟಕ ವಾರ್ತೆ): ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಬೀದರ ಹಾಗೂ ಪಶುವೈದ್ಯಕೀಯ ಮಹಾವಿದ್ಯಾಲಯ, ಶಿವಮೊಗ್ಗ ಇವರುಗಳ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಗ್ರಾಮೀಣ ಪ್ರದೇಶದ ರೈತರು/ರೈತ ಮಹಿಳೆಯರು/ ನಿರುದ್ಯೋಗ ಯುವಕ/ಯುವತಿಯರಿಗೆ ನಗರದ ವಿನೋಬನಗರದಲ್ಲಿರುವ ಪಶುವೈದ್ಯಕೀಯ ಮಹಾವಿದ್ಯಾಲಯದಲ್ಲಿ ಮೇವು ಬೆಳಗಳ ಕುರಿತು ರೈತರಿಗೆ ತರಬೇತಿ ಕಾರ್ಯಕ್ರಮವನ್ನು ಉಚಿತವಾಗಿ ಆಯೋಜಿಸಲಾಗಿದೆ.
ಈ ತರಬೇತಿಯು ಹಸಿರು ಮೇವಿನ ಬೆಳೆಗಳ ಬೇಸಾಯ ಕ್ರಮಗಳು, ಮೇವು ಬೆಳೆಗಳ ತಾಕುಗಳಿಗೆ ಭೇಟಿ, ಮೇವು ಬೀಜಗಳ ಸಂಸ್ಕರಣೆ ಹಾಗೂ ಮೇವಿನ ತಳಿಗೆ ಪಸರಣೆ-ಪ್ರಾಯೋಗಿಕ ತರಬೇತಿ ಹಾಗೂ ಹುಲ್ಲುಗಾವಲು ನಿರ್ವಹಣೆಯ ಅಗತ್ಯತೆಯ ಕುರಿತಾದ ವಿವಿಧ ವಿಷಯಗಳು ಒಳಗೊಂಡಿರುತ್ತದೆ.
ಆಸಕ್ತರು ತಮ್ಮ ಹೆಸರನ್ನು ಸಹ ಪ್ರಾಧ್ಯಾಪಕರು ಹಾಗೂ ರಾ.ಕೃ.ವಿಕಾಸ ಯೋಜನಾ ಸಂಯೋಜಕರ ಮೊ.ನಂ.: 9916918909/8310384135 ಗಳಿಗೆ ಎಸ್.ಎಂ.ಎಸ್/ವಾಟ್ಸ್‍ಪ್ ಮಾಡಿ ನೋಂದಾಯಿಸುವುದು ಅಥವಾ ಡಾ.ಆರ್. ಜಯಶ್ರೀ, ಸಹ ಪ್ರಾಧ್ಯಾಪಕರು ಹಾಗೂ ರಾ.ಕೃ.ವಿಕಾಸ ಯೋಜನಾ ಸಂಯೋಜಕರು, ಪ್ರಾಣಿ ಅನುವಂಶೀಯತೆ ಹಾಗೂ ತಳಿಶಾಸ್ತ್ರ ವಿಭಾಗ, ಪಶುವೈದ್ಯಕೀಯ ಮಹಾವಿದ್ಯಾಲಯ, ವಿನೋಬನಗರ, ಶಿವಮೊಗ್ಗ ಇವನ್ನು ಸಂಪರ್ಕಿಸುವುದು.

Previous post ಡಿ. 29 ರಂದು ಶಿವಮೊಗ್ಗ ತಾಲೂಕಿನ ವಿವಿಧೆಡೆ ವಿದ್ಯುತ್ ವ್ಯತ್ಯಯ!
Next post ವಿಕಲಚೇತನರ ಬಸ್ ಪಾಸ್‍ಗೆ ಅರ್ಜಿ ಆಹ್ವಾನ