
ಅರ್ಥಪೂರ್ಣ ನರೇಗಾ ದಿನ ಕಾರ್ಯಕ್ರಮ : ಜಿಪಂ ಸಿಇಓ ಎನ್.ಡಿ.ಪ್ರಕಾಶ್ ಭಾಗಿ
ಶಿವಮೊಗ್ಗ, ಫೆ. 2: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲ್ಲೂಕು ಹೋತನಕಟ್ಟೆ ಗ್ರಾಮ ಪಂಚಾಯತಿ ಹೋತನಕಟ್ಟೆ ಗ್ರಾಮದ ಬರಗಿ ಕಟ್ಟೆಕೆರೆ ಆವರಣದಲ್ಲಿ ಇಂದು ನರೇಗಾ ದಿನವನ್ನು ಬಹಳ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯವರಾದ ಎನ್ ಡಿ ಪ್ರಕಾಶ್ ರವರು ನರೇಗಾ ಹಬ್ಬಕ್ಕೆ ಗಿಡ ನೆಡುವ ಮೂಲಕ ಚಾಲನೆ ನೀಡಿ, ಇದೇ ತಿಂಗಳ ಫೆಬ್ರವರಿ ಒಂದರಿಂದ ಆಧಾರ್ ಬೇಸಡ್ ಪೇಮೆಂಟ್ ಕಡ್ಡಾಯವಾಗಿರುವ ಬಗ್ಗೆ ಹಾಗೂ ಇ-ಶ್ರಮ್ ಕಾರ್ಡ್ ಮಹತ್ವದ ಬಗ್ಗೆ ಕೂಲಿಕಾರ್ಮಿಕರಿಗೆ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಸುಮಾರು 129 ಜನ ಕೂಲಿಕಾರ್ಮಿಕರು ಕೆರೆ ಕೆಲಸದಲ್ಲಿ ನಿರತರಾಗಿದ್ದು, ಪ್ರತಿಯೊಬ್ಬರಿಗೂ ಆರೋಗ್ಯ ತಪಾಸಣೆ ನಡೆಸಲಾಯಿತು ಅಲ್ಲದೆ ಇ-ಶ್ರಮ್ ಕಾರ್ಡ್ ವಿತರಣೆ ಮಾಡಲಾಯಿತು ಹಾಗೂ ನರೇಗಾ ಯೋಜನೆ ಅಡಿ 100 ದಿನಗಳನ್ನು ಪೂರೈಸಿದ ಕುಟುಂಬದವರಿಗೆ ಗೌರವ ಸಮರ್ಪಣೆ ಮಾಡಲಾಯಿತು.
ಅಲ್ಲದೆ ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಜೀವನ ಸುರಕ್ಷಾ ವಿಮಾ ಯೋಜನೆ ಬಗ್ಗೆ ಕೂಲಿಕಾರ್ಮಿಕರಿಗೆ ಮಾಹಿತಿ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿಯ ಯೋಜನಾ ನಿರ್ದೇಶಕರಾದ ನಂದಿನಿಯವರು, ತಾಲ್ಲೂಕಿನ ಕಾರ್ಯನಿರ್ವಾಹಕ ಅಧಿಕಾರಿಯವರಾದ ಪರಮೇಶ್, ಹೋತನಕಟ್ಟೆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಗೌರಿಬಾಯಿ, ಮಧು, ಗಣೇಶ್, ಸಹಾಯಕ ನಿರ್ದೇಶಕರುಗಳಾದ ಪಾಂಡುರಂಗರಾವ್ ಎಂ ಜೆ, ರಾಜು ಸಿ ಜಿ, ಮಧು ಸಿ ಎಮ್, ನಿಲ್ ಕುಮಾರ್ ಮೊದಲಾದವರಿದ್ದರು.