ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು..! *ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ!!

ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು!

*ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ!!

ಶಿವಮೊಗ್ಗ, ಆ. 14: ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿದ ಕಳ್ಳರ ತಂಡವೊಂದು, ರಸ್ತೆಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಳವು ಮಾಡಿ ಕೊಂಡೊಯ್ದ ಘಟನೆ ಶಿವಮೊಗ್ಗದ ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯ ಗೆಜ್ಜೇನಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ನಡೆದಿದೆ.

ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು..! 
*ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ!!

ಕಳ್ಳರು ಎರಡು ಜಾನುವಾರುಗಳನ್ನು ಕಾರಲ್ಲಿ ತುಂಬಿಕೊಂಡು ಹೋಗುತ್ತಿರುವ ಕೃತ್ಯವು, ಸಮೀಪದ ಮನೆಯೊಂದರಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸದರಿ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

‘ರಾಮಾನಾಯ್ಕ್ ಹಾಗೂ ಉಮೇಶ್ ನಾಯ್ಕ್ ಎಂಬುವರಿಗೆ ಈ ಜಾನುವಾರುಗಳು ಸೇರಿದ್ದಾಗಿವೆ. ಕಳೆದ ಕೆಲ ತಿಂಗಳುಗಳಿಂದ ಗ್ರಾಮದಲ್ಲಿ ಜಾನುವಾರುಗಳ ಕಳವು ಮಾಡಲಾಗುತ್ತಿದೆ.

ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು..! 
*ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ!!

ಇತ್ತೀಚೆಗೆ ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಎರಡು ಆಕಳುಗಳನ್ನು ಕಳವು ಮಾಡಲಾಗಿದೆ. ಇದು ಗ್ರಾಮದ ಮನೆಯೊಂದರ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸ್ಕಾರ್ಪಿಯೋ ಕಾರಲ್ಲಿ ಆಗಮಿಸಿ ಜಾನುವಾರುಗಳ ಕಳವು..! 
*ಸಿಸಿ ಕ್ಯಾಮರಾದಲ್ಲಿ ಸೆರೆಯಾದ ದೃಶ್ಯ!!

ಈ ಕುರಿತಂತೆ ವಿನೋಬನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.  ಪೊಲೀಸರು ಕೂಡ ಸಿಸಿ ಕ್ಯಾಮರಾದ ದೃಶ್ಯಾವಳಿ ಸಂಗ್ರಹಿಸಿ ಕೊಂಡೊಯ್ದಿದ್ದಾರೆ. ಗ್ರಾಮದಲ್ಲಿ ನಡೆಯುತ್ತಿರುವ ಜಾನುವಾರು ಕಳವು ಕೃತ್ಯಗಳಿಗೆ ಕಡಿವಾಣ ಹಾಕಲು ಕ್ರಮಕೈಗೊಳ್ಳಬೇಕು’ ಎಂದು ಗ್ರಾಮ ಪಂಚಾಯ್ತಿ ಸದಸ್ಯ ದೂದ್ಯನಾಯ್ಕ್ ಅವರು ಆಗ್ರಹಿಸಿದ್ದಾರೆ.

ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ! Previous post ನಿರ್ಜನ ಪ್ರದೇಶದಲ್ಲಿ ನೀರಿನ ಗುಂಡಿಗೆ ಬಿದ್ದಿದ್ದ ಎಮ್ಮೆಗಳ ರಕ್ಷಣೆ!
ಶಿವಮೊಗ್ಗ ನಗರದ ಡಿಎಆರ್ ಮೈದಾನದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 77 ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭ Next post ‘ಹೋರಾಟಗಾರರ ತ್ಯಾಗದ ಫಲದಿಂದ ಸ್ವಾತಂತ್ರ್ಯ’ : ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ