
ಶರಾವತಿ ಮುಳುಗಡೆ ಸಂತ್ರಸ್ತರಿಗೆ ಗುಡ್ ನ್ಯೂಸ್ : ಮಾಜಿ ಸಿಎಂ ಬಿಎಸ್ವೈ ನೇತೃತ್ವದಲ್ಲಿ ಮಹತ್ವದ ಸಭೆ!
ಬೆಂಗಳೂರು, ಫೆ. 2 : ಶರಾವತಿ ಮುಳಗಡೆ ಸಂತ್ರಸ್ತರಿಗೆ ಭೂಮಿ ಮಂಜೂರು ಮಾಡಲು ಸರ್ಕಾರದ ಅನುಮೋದನೆಗಾಗಿ ಪ್ರಸ್ತಾವನೆ ಸಲ್ಲಿಸುವ ಬಗ್ಗೆ ಇಂದು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ವಿವಿಧ ಇಲಾಖೆ ಅಧಿಕಾರಿಗಳ ಮಹತ್ವದ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಗೃಹ ಸಚಿವರಾದ ಆರಗ ಜ್ಞಾನೇಂದ್ರ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಕೆ ಬಿ ಅಶೋಕ ನಾಯ್ಕ್ ಉಪಸ್ಥಿತರಿದ್ದರು.
ಈ ಸಭೆಯ ನಂತರ ಇದೇ ವಿಷಯದ ಕುರಿತಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಕೂಡ ಶಿವಮೊಗ್ಗ ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ ನಡೆಸಿ ಚರ್ಚಿಸಿದರು.
ಸಭೆಯ ಪ್ರಮುಖಾಂಶಗಳು:-
✔️ಈಗಾಗಲೇ 15 ರಿಂದ 20 ಗ್ರಾಮಗಳಲ್ಲಿ ಸರ್ವೆ ಮಾಡಬೇಕೆಂದು ಹೊಸದಾಗಿ ಅರ್ಜಿಗಳು ಬಂದಿದ್ದು ಮುಂದೆಯೂ ಸಹ ಹೊಸ ಅರ್ಜಿಗಳು ಬರುವ ಸಂಭವವಿದ್ದು ಈ ಬಗ್ಗೆ ಹೊಸದಾಗಿ ನಿರ್ಣಯ ಕೈಗೊಳ್ಳಲು ತೀರ್ಮಾನ ಮಾಡಲಾಯಿತು.
✔️98 ಪ್ರಸ್ತಾವಗಳಲ್ಲಿ ಅಳತೆ ಮಾಡಿದ್ದ ವಿಸ್ತೀರ್ಣ 9653 ಎಕರೆಯಾಗಿತ್ತದೆ, ಸ್ಥಳ ಪರೀಶಿಲನೆ ನಡೆಸಿ ಅಳತೆ ಮಾಡಿರುವ ವಿಸ್ತೀರ್ಣ 10315 ಎಕರೆಯಾಗಿರುತ್ತದೆ, ಸರ್ಕಾರಿ ಅದೇಶ ಗಳಲ್ಲಿ ಬಿಡುಗಡೆಯಾಗಿರುವ ವಿಸ್ತೀರ್ಣಕ್ಕಿಂತ ಅಂದಾಜು 1196 ಎಕರೆಯ ಹೆಚ್ಚು ವಿಸ್ತೀರ್ಣ ಪ್ರಸ್ತಾವನೆಗಳಲ್ಲಿ ಬಂದಿದ್ದು ಈ ಹೆಚ್ಚವರಿ ವಿಸ್ತೀರ್ಣವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿರುತ್ತದೆ.
✔️ಈಗಾಗಲೇ 15 ರಿಂದ 20 ಗ್ರಾಮಗಳಲ್ಲಿ ಸರ್ವೆ ಮಾಡಬೇಕೆಂದು ಹೊಸದಾಗಿ ಅರ್ಜಿಗಳು ಬಂದಿದ್ದು ಮುಂದೆಯೂ ಸಹ ಹೊಸ ಅರ್ಜಿಗಳು ಬರುವ ಸಂಭವವಿದ್ದು ಈ ಬಗ್ಗೆ ಹೊಸದಾಗಿ ನಿರ್ಣಯ ಕೈಗೊಳ್ಳಲು ತೀರ್ಮಾನ ಮಾಡಲಾಯಿತು.