8 ವರ್ಷದ ಬಾಲಕನ ಕಿಡ್ನ್ಯಾಪ್ ಮಾಡಿ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ – 3.25 ಲಕ್ಷ ರೂ. ದಂಡ

8 ವರ್ಷದ ಬಾಲಕನ ಕಿಡ್ನಾಪ್ ಮಾಡಿ ಕೊಲೆ ಮಾಡಿದ್ದವನಿಗೆ ಜೀವಾವಧಿ ಶಿಕ್ಷೆ – 3.25 ಲಕ್ಷ ರೂ. ದಂಡ

ಶಿವಮೊಗ್ಗ, ಆ. 17: ವ್ಯಕ್ತಿಯೋರ್ವರ ಮೇಲಿನ ದ್ವೇಷದ ಹಿನ್ನೆಲೆಯಲ್ಲಿ, ಅವರ ಪುತ್ರನನ್ನು ಅಪಹರಿಸಿ ನೀರಿನಲ್ಲಿ ಮುಳುಗಿಸಿ ಕೊಲೆ ಮಾಡಿದ್ದವನಿಗೆ, ಜೀವಾವಧಿ ಶಿಕ್ಷೆ ಹಾಗೂ 3.25 ಲಕ್ಷ ರೂ. ದಂಡ ವಿಧಿಸಿ ಶಿವಮೊಗ್ಗದ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ.

ಶಿಕಾರಿಪುರ ತಾಲೂಕು ಚುರ್ಚಿಗುಂಡಿ ಗ್ರಾಮದ ನಿವಾಸಿ ಬಸವರಾಜಪ್ಪ (40) ಶಿಕ್ಷೆಗೊಳಗಾದ ವ್ಯಕ್ತಿ ಎಂದು ಗುರುತಿಸಲಾಗಿದೆ. 16-08-2023 ರಂದು ನ್ಯಾಯಾಧೀಶರಾದ ಬಿ. ಆರ್. ಪಲ್ಲವಿ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಪುಷ್ಪ ಅವರು ವಾದ ಮಂಡಿಸಿದ್ದರು.

ಘಟನೆ ಹಿನ್ನಲೆ: ಶಿವಮೊಗ್ಗದ ಆಲ್ಕೋಳದ ನಿವಾಸಿ ನಿಂಗರಾಜು ಎಂಬವರೊಂದಿಗೆ ಶಿಕ್ಷೆಗೊಳಗಾದ ಅಪರಾಧಿ ಬಸವರಾಜಪ್ಪಗೆ ಹಳೇಯ ವೈಷಮ್ಯವಿತ್ತು. ಈ ಕಾರಣದಿಂದ ನಿಂಗರಾಜು ಅವರ 8 ವರ್ಷದ ಪುತ್ರ ಪ್ರೇಮ್ ಕುಮಾರನನ್ನು, 02-03-2017 ರಂದು ಆಲ್ಕೋಳದಿಂದ ಬಸವರಾಜಪ್ಪನು ಕಿಡ್ನ್ಯಾಪ್ ಮಾಡಿದ್ದ.

ನಂತರ ಶಿಕಾರಿಪುರದ ಚುರ್ಚಿಗುಂಡಿ ಗ್ರಾಮಕ್ಕೆ ಬಾಲಕನ್ನು ಕರೆತಂದಿದ್ದ. ಸಮೀಪದ ಕುಮದ್ವತಿ ನದಿಗೆ ಕರೆದೊಯ್ದು, ನೀರಿನಲ್ಲಿ ಮುಳುಗಿಸಿ ಬಾಲಕನನ್ನು ಕೊಲೆ ಮಾಡಿದ್ದ. ಈ ಕುರಿತಂತೆ ಮೃತ ಬಾಲಕನ ತಂದೆ ನಿಂಗರಾಜು ಅವರು ವಿನೋಬನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಸಂಬಂಧ ಪೊಲೀಸರು ಐಪಿಸಿ ಕಲಂ 363, 302, 201 ರ ಅಡಿ ಪ್ರಕರಣ ದಾಖಲಿಸಿಕೊಂಡಿದ್ದರು. ಅಂದಿನ ದೊಡ್ಡಪೇಟೆ ಠಾಣೆ ವೃತ್ತದ ಸರ್ಕಲ್ ಇನ್ಸ್’ಪೆಕ್ಟರ್ ಕೆ.ಟಿ.ಗುರುರಾಜ್ ಅವರು ಪ್ರಕರಣದ ತನಿಖೆ ನಡೆಸಿದ್ದರು. ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.

ಇನ್ಸ್ಪೆಕ್ಟರ್ ಆದ 8 ವರ್ಷದ ಬಾಲಕ : ಪುಟಾಣಿಯ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ! ಶಿವಮೊಗ್ಗ, ಆ. 16: ದೊಡ್ಡವನಾದ ಮೇಲೆ ಪೊಲೀಸ್ ಅಧಿಕಾರಿಯಾಗಬೇಕೆಂಬ ಅದಮ್ಯ ಆಸೆ ಹೊಂದಿದ್ದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ 8 ವರ್ಷದ ಬಾಲಕನ ಕೋರಿಕೆಯನ್ನು, ಶಿವಮೊಗ್ಗ ಪೊಲೀಸ್ ಇಲಾಖೆ ಈಡೇರಿಸಿದೆ..! ಪುಟಾಣಿಯ ಆಸೆಯಂತೆ ಆತನನ್ನು ಪೊಲೀಸ್ ಠಾಣೆಗೆ ಕರೆಯಿಸಿ, ಪೊಲೀಸ್ ಅಧಿಕಾರಿಯಾಗುವ ಅವಕಾಶ ಕಲ್ಪಿಸಿದೆ. ಈ ಮೂಲಕ ಬಾಲಕನ ಬದುಕಿಗೆ ಹೊಸ ಚೈತನ್ಯ ತುಂಬುವ ಹೃದಯ ಸ್ಪರ್ಶಿ ಕಾರ್ಯ ನಡೆಸಿದೆ. ಹೌದು. ಮೂಲತಃ ಶಿವಮೊಗ್ಗದವರಾದ ಪ್ರಸ್ತುತ ಬಾಳೆಹೊನ್ನೂರಿನಲ್ಲಿ ನೆಲೆಸಿರುವ ತಬ್ರೇಜ್ ಖಾನ್ ಎಂಬುವರ ಪುತ್ರ ಆಜಾನ್ ಖಾನ್ ಪೊಲೀಸ್ ಅಧಿಕಾರಿಯಾಗಿ ಕಾರ್ಯಾಭಾರ ನಿರ್ವಹಿಸಿದ ಪುಟಾಣಿಯಾಗಿದ್ದಾನೆ. ಬುಧವಾರ ಸಂಜೆ ದೊಡ್ಡಪೇಟೆ ಪೊಲೀಸ್ ಠಾಣೆಗೆ ಪೊಲೀಸ್ ಅಧಿಕಾರಿ ಬಟ್ಟೆ ತೊಟ್ಟು ಆಗಮಿಸಿದ ಬಾಲಕನನ್ನು ಸ್ವತಃ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ ಸೇರಿದಂತೆ ಹಿರಿಯ ಅಧಿಕಾರಿಗಳು ಠಾಣೆ ಮುಂಭಾಗ ಆತ್ಮೀಯ ಸ್ವಾಗತ ನೀಡಿದರು. ಠಾಣೆಯ ಇನ್ಸ್’ಪೆಕ್ಟರ್ ಕುರ್ಚಿಯಲ್ಲಿ ಕುಳಿತ ಆಜಾನ್ ಖಾನ್ ಪೊಲೀಸ್ ಅಧಿಕಾರಿ – ಸಿಬ್ಬಂದಿಗಳಿಗೆ ಕೆಲಸ ಕಾರ್ಯಗಳ ಕುರಿತಂತೆ ಸಲಹೆ ಸೂಚನೆ ನೀಡಿದ. ಪೊಲೀಸ್ ಅಧಿಕಾರಿಯಾಗುವ ತನ್ನ ಆಸೆ ಈಡೇರಿದ್ದಕ್ಕೆ ಬಾಲಕ ಸಂತಸಗೊಂಡಿದ್ದ. ನಗುನಗುತ್ತಲೆ ತನ್ನ ಸಂತಸ ಹಂಚಿಕೊಂಡ. Previous post ಇನ್ಸ್‌ಪೆಕ್ಟರ್ ಆದ 8 ವರ್ಷದ ಬಾಲಕ : ಪುಟಾಣಿಯ ಆಸೆ ಈಡೇರಿಸಿದ ಶಿವಮೊಗ್ಗ ಪೊಲೀಸ್ ಇಲಾಖೆ!
ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ಸಿಎಂ – ಡಿಸಿಎಂ ಸಭೆ Next post ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಿಎಂ – ಡಿಸಿಎಂ ನೀಡಿದ ಖಡಕ್ ಸೂಚನೆಯೇನು?