ಭದ್ರಾವತಿ – ಚರಂಡಿ ಅವ್ಯವಸ್ಥೆಯಿಂದ ದುರ್ನಾತ : ನಗರಸಭೆ ವಿರುದ್ದ ನಿವಾಸಿಗಳ ಆಕ್ರೋಶ!

ಭದ್ರಾವತಿ – ಚರಂಡಿ ಅವ್ಯವಸ್ಥೆಯಿಂದ ದುರ್ನಾತ : ನಗರಸಭೆ ವಿರುದ್ದ ನಿವಾಸಿಗಳ ಆಕ್ರೋಶ!

ಭದ್ರಾವತಿ, ಆ. 18: ‘ಚರಂಡಿಯಲ್ಲಿ ಕಸಕಡ್ಡಿ ತುಂಬಿಕೊಂಡು, ಸರಾಗವಾಗಿ ಕೊಳಚೆ ನೀರು ಹರಿದು ಹೋಗದೆ ದುರ್ನಾತ ಬೀರುತ್ತಿದೆ. ಅವ್ಯವಸ್ಥೆ ಪರಿಹಾರಕ್ಕೆ ನಗರಸಭೆ ಆಡಳಿತ ಯಾವುದೇ ಕ್ರಮಕೈಗೊಂಡಿಲ್ಲ. ಸಂಪೂರ್ಣ ನಿರ್ಲಕ್ಷ್ಯವಹಿಸಿದೆ’ ಎಂದು ಭದ್ರಾವತಿ ಪಟ್ಟಣದ 4 ನೇ ವಾರ್ಡ್ ಹಳೇನಗರ ವ್ಯಾಪ್ತಿಯ ಮರಾಠ ಬೀದಿ ನಿವಾಸಿಗಳು ದೂರಿದ್ದಾರೆ.

ಕಳೆದ ಹಲವು ದಿನಗಳಿಂದ ಅವ್ಯವಸ್ಥೆ, ದುರ್ನಾತದಿಂದ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡು ಓಡಾಡುವಂತಹ ದುಃಸ್ಥಿತಿಯಿದೆ. ಸೊಳ್ಳೆ, ನೊಣ, ಕ್ರಿಮಿಕೀಟಗಳ ಹಾವಳಿ ಹೆಚ್ಚಾಗುವಂತಾಗಿದೆ ಎಂದು ಸ್ಥಳೀಯರು ತಮ್ಮ ಅಹವಾಲು ತೋಡಿಕೊಂಡಿದ್ದಾರೆ.

ಈ ಸಂಬಂಧ ನಗರಸಭೆ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಚರಂಡಿ ಅವ್ಯವಸ್ಥೆ ಸರಿಪಡಿಸುವಂತೆ ಮನವಿ ಮಾಡಲಾಗಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ ಎಂದು ನಿವಾಸಿಯೋರ್ವರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ಇನ್ನಾದರೂ ನಗರಸಭೆ ಆಡಳಿತ ಎಚ್ಚೆತ್ತುಕೊಳ್ಳಬೇಕು. ಕಾಲಮಿತಿಯೊಳಗೆ ಮರಾಠ ಬೀದಿಯಲ್ಲಿನ ಚರಂಡಿ ಅವ್ಯವಸ್ಥೆ ಸರಿಪಡಿಸಲು ಕ್ರಮಕೈಗೊಳ್ಳಬೇಕು ಎಂದು ನಿವಾಸಿಗಳು ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕರೊಂದಿಗೆ ಸಿಎಂ – ಡಿಸಿಎಂ ಸಭೆ Previous post ಶಿವಮೊಗ್ಗ ಜಿಲ್ಲೆಯ ಕಾಂಗ್ರೆಸ್ ಶಾಸಕರಿಗೆ ಸಿಎಂ – ಡಿಸಿಎಂ ನೀಡಿದ ಖಡಕ್ ಸೂಚನೆಯೇನು?  
ಶಿವಮೊಗ್ಗ – ಹಾಳಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ : ಎಚ್ಚೆತ್ತುಕೊಳ್ಳುವುದೆ ಸ್ಮಾರ್ಟ್ ಸಿಟಿ ಆಡಳಿತ? Next post ಶಿವಮೊಗ್ಗ – ಹಾಳಾಗುತ್ತಿರುವ ಬಸ್ ನಿಲ್ದಾಣ ಕಾಮಗಾರಿ : ಎಚ್ಚೆತ್ತುಕೊಳ್ಳುವುದೆ ಸ್ಮಾರ್ಟ್ ಸಿಟಿ ಆಡಳಿತ?