
ಶಿವಮೊಗ್ಗ : ಕೊನೆಗೂ ಬೋನಿಗೆ ಬಿದ್ದ ಗಂಡು ಚಿರತೆ..!
ಶಿವಮೊಗ್ಗ, ಆ. 19: ಶಿವಮೊಗ್ಗ ತಾಲೂಕಿನ ಬಿಕ್ಕೋನಹಳ್ಳಿ ಗ್ರಾಮದ ಹೊರವಲಯದಲ್ಲಿ ಗಂಡು ಚಿರತೆಯೊಂದು ಅರಣ್ಯ ಇಲಾಖೆಯಿಟ್ಟಿದ್ದ ಬೋನಿಗೆ ಬಿದ್ದಿರುವ ಘಟನೆ ತಡರಾತ್ರಿ ನಡೆದಿದ್ದು, ಶನಿವಾರ ಬೆಳಿಗ್ಗೆ ಘಟನೆ ಬೆಳಕಿಗೆ ಬಂದಿದೆ.

‘ಪ್ರಸ್ತುತ ಬೋನಿಗೆ ಬಿದ್ದಿರುವ ಚಿರತೆಗೆ ಸರಿಸುಮಾರು 7 ವರ್ಷ ವಯೋಮಾನವಿದೆ. ಚಿರತೆಯನ್ನು ತ್ಯಾವರೆಕೊಪ್ಪ ಲಯನ್ ಸಫಾರಿಯಲ್ಲಿಡಲಾಗಿದ್ದು, ಇದನ್ನು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಗುವುದು’ ಎಂದು ಅರಣ್ಯ ಇಲಾಖೆ ಮೂಲಗಳು ಮಾಹಿತಿ ನೀಡಿವೆ.

ಕಳೆದ ಕೆಲ ದಿನಗಳ ಹಿಂದೆ ಬಿಕ್ಕೋನಹಳ್ಳಿ ಗ್ರಾಮದಲ್ಲಿ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯೋರ್ವರ ಮೇಲೆ ಚಿರತೆ ದಾಳಿ ನಡೆಸಿ ಸಾಯಿಸಿತ್ತು. ಘಟನೆಯ ನಂತರ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮಕೈಗೊಂಡಿತ್ತು. ಇದಕ್ಕಾಗಿ ಮೈಸೂರಿನಿಂದ ವಿಶೇಷ ತಂಡ ಕೂಡ ಆಗಮಿಸಿತ್ತು.

ಕಳೆದ ಹಲವು ದಿನಗಳಿಂದ ಬಿಕ್ಕೋನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ ಸುತ್ತಮುತ್ತ ಚಿರತೆ ಸೆರೆಗೆ ಅರಣ್ಯ ಇಲಾಖೆ ವ್ಯಾಪಕ ಕಾರ್ಯಾಚರಣೆ ನಡೆಸುತ್ತಿತ್ತು. ಹಲವೆಡೆ ಕ್ಯಾಮರಾಗಳನ್ನು ಅಳವಡಿಸಿ ಚಿರತೆಯ ಚಲನವಲನದ ಮೇಲೆ ಕಣ್ಣಿಟ್ಟಿತ್ತು. ಇದೀಗ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಸಫಲವಾಗಿದೆ.

ಕಾರ್ಯಾಚರಣೆಯಲ್ಲಿ ಅರಣ್ಯ ಇಲಾಖೆ ಶಂಕರ ವಲಯದ ಆರ್.ಎಫ್.ಓ ಸುಧಾಕರ್, ಡಿ.ಆರ್.ಎಫ್.ಓ ಪಾಂಡುರಂಗ, ಇಫ್ತೀಕರ್, ಉಮೇಶ್ ನಾಯ್ಕ್, ಹನುಮಂತು ಮೊದಲಾದವರು ಭಾಗಿಯಾಗಿದ್ದರು.
More Stories
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರ ಅಕ್ರಮ ಮರಳು ಲೂಟಿಗೆ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?
shimoga | A temporary break in illegal sand looting after the case of the female officer: Does the administration need to wake up?
shimoga | ಮಹಿಳಾ ಅಧಿಕಾರಿ ಪ್ರಕರಣದ ನಂತರಕ ಅಕ್ರಮ ಮರಳು ಲೂಟಿಗೆ ತಾತ್ಕಾಲಿಕ ಬ್ರೇಕ್ : ಇನ್ನಾದರೂ ಎಚ್ಚೆತ್ತುಕೊಳ್ಳಬೇಕಿದೆ ಆಡಳಿತ?