ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದ ಉಪನ್ಯಾಸಕನಿಗೆ ಕಾಲೇಜ್ ನಲ್ಲಿಯೇ ಲಾಂಗ್ ತೋರಿಸಿ ಬೆದರಿಸಿದ ವಿದ್ಯಾರ್ಥಿ..!

ಕ್ಲಾಸ್ ಗೆ ಸರಿಯಾಗಿ ಬರುತ್ತಿಲ್ಲ ಎಂದು ಪೋಷಕರಿಗೆ ತಿಳಿಸಿದ್ದ ಉಪನ್ಯಾಸಕನಿಗೆ ಕಾಲೇಜ್ ನಲ್ಲಿಯೇ ಲಾಂಗ್ ತೋರಿಸಿ ಬೆದರಿಸಿದ ವಿದ್ಯಾರ್ಥಿ..!

ನಾಗಮಂಗಲ (ಮಂಡ್ಯ): ತರಗತಿಗೆ ಸರಿಯಾಗಿ ಬರುತ್ತಿಲ್ಲ ಎಂದು ತನ್ನ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿದ್ದರಿಂದ ಕುಪಿತಗೊಂಡ ವಿದ್ಯಾರ್ಥಿಯೋರ್ವ, ಲಾಂಗ್ ನೊಂದಿಗೆ ಕಾಲೇಜ್ ಗೆ ಆಗಮಿಸಿ ಉಪನ್ಯಾಸಕನಿಗೆ ಬೆದರಿಕೆ ಹಾಕಿದ ಘಟನೆ, ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬಿ.ಜೆ.ನಗರದ ಡಿಪ್ಲೋಮಾ ಕಾಲೇಜ್ ವೊಂದರಲ್ಲಿ ನಡೆದಿದೆ!

ಪ್ರಥಮ ವರ್ಷದ ಡಿಪ್ಲೊಮಾ ಅಭ್ಯಾಸ ಮಾಡುತ್ತಿರುವ ತುಮಕೂರು ಜಿಲ್ಲೆ ಕುಣಿಗಲ್ ತಾಲೂಕಿನ ನಿವಾಸಿಯಾದ, 17 ರ ವಯೋಮಾನದ ವಿದ್ಯಾರ್ಥಿಯೇ ಲಾಂಗ್ ನಿಂದ ಉಪನ್ಯಾಸಕನಿಗೆ ಬೆದರಿಸಿ ಗೂಂಡಾ ವರ್ತನೆ ತೋರಿದವನಾಗಿದ್ದಾನೆ.

ವಿದ್ಯಾರ್ಥಿಯ ಗೂಂಡಾಗಿರಿ ಕಂಡ ಕಾಲೇಜ್ ನ ಇತರೆ ಉಪನ್ಯಾಸಕರು, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ವಿದ್ಯಾರ್ಥಿಯನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ಬುದ್ದಿ ಮಾತು ಹೇಳಿದ್ದಾರೆ. ಇನ್ನು ಮುಂದೆ ಈ ರೀತಿಯ ತಪ್ಪು ಮಾಡುವುದಿಲ್ಲವೆಂದು ವಿದ್ಯಾರ್ಥಿ ತಿಳಿಸಿದ್ದಾನೆ. ನಂತರ ಠಾಣೆಯಿಂದ ಆತನನ್ನು ಪೋಷಕರ ಜೊತೆ ಕಳುಹಿಸಿಕೊಡಲಾಗಿದೆ ಎಂದು ತಿಳಿದುಬಂದಿದೆ.

ಕಾರಣವೇನು?: ‘ನಿಮ್ಮ ಮಗ ಸರಿಯಾಗಿ ಕಾಲೇಜ್ ಗೆ ಬರುತ್ತಿಲ್ಲ. ಜೊತೆಗೆ ಕಾಲೇಜ್ ನಲ್ಲಿ ಆತನ ವರ್ತನೆಯೂ ಸರಿಯಿಲ್ಲ. ಆತನಿಗೆ ಬುದ್ದಿ ಹೇಳಿ’ ಎಂದು ಸದರಿ ಕಾಲೇಜ್ ನ ಉಪನ್ಯಾಸಕರೋರ್ವರು ಆರೋಪಿತ ವಿದ್ಯಾರ್ಥಿ ಪೋಷಕರಿಗೆ ಮಾಹಿತಿ ನೀಡಿದ್ದರು.

ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿಯು, ಮರು ದಿನವೇ ಬೈಕ್ ನಲ್ಲಿ ಕಾಲೇಜ್ ಗೆ ಆಗಮಿಸಿದ್ದಾನೆ. ಕೈಯಲ್ಲಿ ಲಾಂಗ್ ಹಿಡಿದುಕೊಂಡು ಉಪನ್ಯಾಸಕರಿದ್ದ ಕೊಠಡಿಗೆ ನುಗ್ಗಿ, ‘ನನ್ನ ವಿಚಾರಕ್ಕೆ ಬಂದರೇ ತಕ್ಕ ಪಾಠ ಕಲಿಸುವುದಾಗಿ’ ಬೆದರಿಕೆ ಹಾಕಿದ್ದಾನೆ. ಈ ಘಟನೆಯನ್ನು ಕೊಠಡಿಯಲ್ಲಿದ್ದವರು ಮೊಬೈಲ್ ಫೋನ್ ನಲ್ಲಿ ಚಿತ್ರೀಕರಿಸಿಕೊಂಡಿದ್ದರು. ಇದೀಗ ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಶಕ್ತಿ ಯೋಜನೆ : ಸಬಲೀಕರಣಗೊಂಡ ಮಹಿಳೆಯರ ಪಯಣ Previous post ಶಕ್ತಿ ಯೋಜನೆ : ಸಬಲೀಕರಣಗೊಂಡ ಮಹಿಳೆಯರ ಪಯಣ
Next post ಜಾತಿ/ಸಿಂಧುತ್ವ ಪ್ರಮಾಣ ಪತ್ರ ನೀಡುವ ಬಗ್ಗೆ ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ