
ತಲೆ ಮೇಲೆ ಕಲ್ಲು ಎತ್ತಿ ಹಾಕಿ ವ್ಯಕ್ತಿಯ ಹತ್ಯೆ!
ಶಿವಮೊಗ್ಗ, ಆ. 27: ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಅಪರಿಚಿತ ವ್ಯಕ್ತಿಯೋರ್ವರ ಹತ್ಯೆ ಮಾಡಿರುವ ಘಟನೆ ಶಿವಮೊಗ್ಗದ ಟಿಪ್ಪು ನಗರ ಬಡಾವಣೆ 7 ನೇ ಕ್ರಾಸ್ ನಲ್ಲಿ ತಡರಾತ್ರಿ ನಡೆದಿದೆ.
ಕೊಲೆಗೀಡಾದ ವ್ಯಕ್ತಿಯ ಹೆಸರು, ವಿಳಾಸ ಮತ್ತೀತರ ವಿವರಗಳು ತಿಳಿದುಬಂದಿಲ್ಲ. ಸುಮಾರು 50 ರಿಂದ 55 ರ ವಯೋಮಾನವಿದೆ ಎಂದು ಅಂದಾಜಿಸಲಾಗಿದೆ. ಅಪರಿಚಿತ ವ್ಯಕ್ತಿ ಮಲಗಿದ್ದ ವೇಳೆ ದುಷ್ಕರ್ಮಿಗಳು ಕೊಲೆ ಮಾಡಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಭಾನುವಾರ ಮುಂಜಾನೆ ಕೃತ್ಯ ಬೆಳಕಿಗೆ ಬಂದಿದೆ. ಸಾರ್ವಜನಿಕರು ನೀಡಿದ ಮಾಹಿತಿ ಆಧಾರದ ಮೇಲೆ ಘಟನಾ ಸ್ಥಳಕ್ಕೆ ತುಂಗಾ ನಗರ ಠಾಣೆ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.
ಪೊಲೀಸರು ಸ್ಥಳ ಪಂಚನಾಮೆ ನಡೆಸಿದ ನಂತರ, ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಮೆಗ್ಗಾನ್ ಆಸ್ಪತ್ರೆ ಶವಾಗಾರಕ್ಕೆ ರವಾನಿಸಿದ್ದಾರೆ. ಪೊಲೀಸರ ತನಿಖೆಯ ನಂತರವಷ್ಟೆ ಹತ್ಯೆಗೆ ಕಾರಣ ಏನೆಂಬುವುದು ತಿಳಿದುಬರಬೇಕಾಗಿದೆ.
More Stories
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 18 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 18: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, ಏ. 18 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ...