ತೀರ್ಥಹಳ್ಳಿ ಪೊಲೀಸರು, ಸಾರ್ವಜನಿಕರಿಂದ ರಕ್ತದಾನ

ತೀರ್ಥಹಳ್ಳಿ ಪೊಲೀಸರು, ಸಾರ್ವಜನಿಕರಿಂದ ರಕ್ತದಾನ

ತೀರ್ಥಹಳ್ಳಿ, ಆ. 27: ತೀರ್ಥಹಳ್ಳಿ ಪಟ್ಟಣದ ಟೌನ್ ಹಾಲ್ ನಲ್ಲಿ ಭಾನುವಾರ ಶಿವಮೊಗ್ಗದ ಆಶಾ ಜ್ಯೋತಿ ರಕ್ತ ಕೇಂದ್ರದ ಸಂಯುಕ್ತಾಶ್ರಯದಲ್ಲಿ, ಸ್ಥಳೀಯ ಪೊಲೀಸರು ರಕ್ತದಾನ ಶಿಬಿರ ಹಮ್ಮಿಕೊಂಡಿದ್ದರು.

ತೀರ್ಥಹಳ್ಳಿ ಡಿವೈಎಸ್ಪಿ ಗಜಾನನ ವಾಮನ ಸುತಾರ ನೇತೃತ್ವದಲ್ಲಿ ಇನ್ಸ್’ಪೆಕ್ಟರ್ ಅಶ್ವತ್ ಗೌಡ, ಸಬ್ ಇನ್ಸ್’ಪೆಕ್ಟರ್ ಗಳಾದ ನವೀನ್ ಮಠಪತಿ, ಶಿವಾನಂದ್, ಗಾದಿಲಿಂಗಪ್ಪ ಗೌಡರ್ ಹಾಗೂ  ಹೊಸನಗರ ಪೊಲೀಸ್ ಠಾಣೆಯ ಹೆಚ್.ಸಿ. ಹಾಲೇಶಪ್ಪ ಅವರು ರಕ್ತದಾನ ಶಿಬಿರವನ್ನು ಆಯೋಜಿಸಿದ್ದರು.

ಸದರಿ ಶಿಬಿರದಲ್ಲಿ ತೀರ್ಥಹಳ್ಳಿ, ಮಾಳೂರು ಪೊಲೀಸ್ ಠಾಣೆಯ ಅಧಿಕಾರಿ – ಸಿಬ್ಬಂದಿಗಳು, ಸಾರ್ವಜನಿಕರು ಸೇರಿದಂತೆ ಒಟ್ಟಾರೆ 47 ಜನ ರಕ್ತದಾನ ಮಾಡಿದ್ದಾರೆ ಎಂದು ಪೊಲೀಸ್ ಇಲಾಖೆಯು ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.

ಆ. 28 ರಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ‘ಸಿಸಿ ಕ್ಯಾಮರಾ’ ಆಧಾರಿತ ದಂಡ! Previous post ಆ. 28 ರಿಂದ ಶಿವಮೊಗ್ಗದಲ್ಲಿ ಸಂಚಾರ ನಿಯಮ ಉಲ್ಲಂಘಿಸಿದರೆ ‘ಸಿಸಿ ಕ್ಯಾಮರಾ’ ಆಧಾರಿತ ದಂಡ!
ಆ. 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ ಲೋಹದ ಹಕ್ಕಿಗಳ ಕಲರವ! Next post ಆ. 31 ರಿಂದ ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಆರಂಭವಾಗಲಿದೆ ಲೋಹದ ಹಕ್ಕಿಗಳ ಕಲರವ!