ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಗೆ ಆದ್ಯತೆ : ಕನ್ನಡ ಭಾಷೆ ಕಡೆಗಣನೆ - ನೆಟ್ಟಿಗರು ಗರಂ!

ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಹಿಂದಿಗೆ ಆದ್ಯತೆ : ಕನ್ನಡ ಭಾಷೆ ಕಡೆಗಣನೆ – ನೆಟ್ಟಿಗರು ಗರಂ!

ಶಿವಮೊಗ್ಗ, ಆ. 31: ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ಸೂಚನೆ ನೀಡುವ ಡಿಜಿಟಲ್ ಮಾಹಿತಿ ಫಲಕದಲ್ಲಿ ಹಿಂದಿ ಭಾಷೆಗೆ ಆದ್ಯತೆ ನೀಡಲಾಗಿದ್ದು, ಕನ್ನಡ ಭಾಷೆ ಕಡೆಗಣಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಈ ಕುರಿತಂತೆ ಟ್ವಿಟರ್ ಖಾತೆಯಲ್ಲಿ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಹಿಂದಿ ಭಾಷೆಯ ಡಿಜಿಟಲ್ ಮಾಹಿತಿ ಫಲಕದ ಫೋಟೋ ಶೇರ್ ಮಾಡಿ, ಹಿಂದಿ ಹೇರಿಕೆ ಸರಿಯಲ್ಲ ಎಂದು ದೂರಿದ್ದಾರೆ.

‘ಇದೇನಿದು ಇದು ಯಾವುದೋ ಹಿಂದಿ ರಾಜ್ಯವಲ್ಲ. ಇದು ಕರ್ನಾಟಕ. ಇಲ್ಲಿ ಹಿಂದಿ ಅವಶ್ಯಕತೆಯಿಲ್ಲ. ಇದನ್ನು ತೆಗೆಸಿ ಕನ್ನಡದಲ್ಲಿ ಹಾಕಿಸಿ..’ ಎಂದು ಕೆಲ ನೆಟ್ಟಿಗರು ಮೂಲಸೌಕರ್ಯ ಖಾತೆ ಸಚಿವ ಎಂ.ಬಿ.ಪಾಟೀಲ್ ಅವರಿಗೆ ಟ್ವಿಟರ್ ನಲ್ಲಿ ಒತ್ತಾಯಿಸಿದ್ದಾರೆ.

ನಾಗರೀಕರ ಈ ಒತ್ತಾಯಕ್ಕೆ ಟ್ವಿಟರ್ ನ ತಮ್ಮ ಖಾತೆಯಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎಂ.ಬಿ.ಪಾಟೀಲ್, ‘ಇದು ನನ್ನ ಗಮನಕ್ಕೆ ಬಂದಿರಲಿಲ್ಲ. ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ’ ಸಚಿವರು ತಿಳಿಸಿದ್ದಾರೆ. ಜೊತೆಗೆ ‘ಕನ್ನಡ ಇನ್ ಕರ್ನಾಟಕ’ ಎಂಬ ಹ್ಯಾಶ್ ಟ್ಯಾಗ್ ಕೂಡ ಹಾಕಿದ್ಧಾರೆ.

ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟಕ್ಕೆ ಚಾಲನೆ Previous post ಬೆಂಗಳೂರಿನಿಂದ ಶಿವಮೊಗ್ಗಕ್ಕೆ ವಿಮಾನ ಹಾರಾಟಕ್ಕೆ ಚಾಲನೆ
ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಹಾರಾಟಕ್ಕೆ ಚಾಲನೆ : ವಾಟರ್ ಸೆಲ್ಯೂಟ್ ಗೌರವದ ಮೂಲಕ ಸ್ವಾಗತ Next post ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಹಾರಾಟಕ್ಕೆ ಚಾಲನೆ : ವಾಟರ್ ಸೆಲ್ಯೂಟ್ ಗೌರವದ ಮೂಲಕ ಸ್ವಾಗತ