
ಬೆಂಗಳೂರು ಶಿವಮೊಗ್ಗ ನಡುವೆ ವಿಮಾನ ಹಾರಾಟಕ್ಕೆ ಚಾಲನೆ : ವಾಟರ್ ಸೆಲ್ಯೂಟ್ ಗೌರವದ ಮೂಲಕ ಸ್ವಾಗತ
ಶಿವಮೊಗ್ಗ, ಆ. 31: ಬೆಂಗಳೂರಿನಿಂದ ಶಿವಮೊಗ್ಗಕ್ಕೆ, ಇಂದು ಬೆಳಿಗ್ಗೆ ವಿಮಾನ ಹಾರಾಟಕ್ಕೆ ವಿಧ್ಯುಕ್ತ ಚಾಲನೆ ದೊರಕಿದೆ.
ಬೆಂಗಳೂರಿನ ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ, ಶಿವಮೊಗ್ಗದ ವಿಮಾನ ನಿಲ್ದಾಣಕ್ಕೆ ಮೊದಲ ವಿಮಾನ ಬೆಳಿಗ್ಗೆ 9.50 ಕ್ಕೆ ಪ್ರಯಾಣ ಆರಂಭಿಸಿತು. ಇಂಡೀಗೋ ಏರ್ ಲೈನ್ಸ್ ಸಂಸ್ಥೆಯ ಸಿಬ್ಬಂದಿಗಳು ಗಣ್ಯರಿಗೆ ಪುಷ್ಪಗುಚ್ಛ ನೀಡುವ ಮೂಲಕ ಸ್ವಾಗತಿಸಿದರು.
ಶಿವಮೊಗ್ಗಕ್ಕೆ ಬೆಳಿಗ್ಗೆ 11 ಗಂಟೆ 5 ನಿಮಿಷದ ಸುಮಾರಿಗೆ ವಿಮಾನ ಲ್ಯಾಂಡಿಂಗ್ ಆಯಿತು. ಈ ವೇಳೆ ಅಗ್ನಿಶಾಮಕ ದಳದ ವಾಹನಗಳಿಂದ ವಿಮಾನದ ಮೇಲೆ ನೀರು ಚಿಮ್ಮಿಸಿ ವಾಟರ್ ಸೆಲ್ಯೂಟ್ ಗೌರವ ನೀಡುವ ಮೂಲಕ ಸ್ವಾಗತಿಸಲಾಯಿತು.
ವಿಮಾನದಲ್ಲಿ ಮೂಲಸೌಕರ್ಯ ಇಲಾಖೆ ಸಚಿವ ಎಂ.ಬಿ.ಪಾಟೀಲ್, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ, ಮಾಜಿ ಸಚಿವ ಆರಗ ಜ್ಞಾನೇಂದ್ರ,ಕೆ.ಎಸ್.ಈಶ್ವರಪ್ಪ, ಶಾಸಕರಾದ ಬಿ.ವೈ.ವಿಜಯೇಂದ್ರ, ಚನ್ನಬಸಪ್ಪ, ವಿಪ ಶಾಸಕ ಡಿ.ಎಸ್.ಅರುಣ್, ಮಾಜಿ ಶಾಸಕ ಹರತಾಳು ಹಾಲಪ್ಪ ಸೇರಿದಂತೆ ಮೊದಲಾದವರಿದ್ದರು.
ವಿಮಾನ ನಿಲ್ದಾಣ ಆವರಣದಲ್ಲಿ ವೇದಿಕೆ ಸಮಾರಂಭ ನಡೆಯಿತು. ವಿಮಾನಗಳ ಕಾರ್ಯಾಚರಣೆ ಹಾಗೂ ಜಾಲತಾಣ ಉದ್ಘಾಟನೆ ಸಮಾರಂಭ ನಡೆಯಿತು.
More Stories
shimoga | ಶಿವಮೊಗ್ಗ ಎಪಿಎಂಸಿ ಸಗಟು ಮಾರುಕಟ್ಟೆಯಲ್ಲಿ ಏ. 18 ರ ತರಕಾರಿ ಬೆಲೆಗಳ ವಿವರ
ಶಿವಮೊಗ್ಗ (shivamogga), ಏ. 18: ಶಿವಮೊಗ್ಗದ ವಿನೋಬನಗರ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆ ಪ್ರಾಂಗಣದಲ್ಲಿನ, ಏ. 18 ರಂದು ವಿವಿಧ ತರಕಾರಿಗಳ ಸಗಟು (wholesale) ಮಾರಾಟದ ದರಗಳ...