
2 ನೇ ತರಗತಿ ವಿದ್ಯಾರ್ಥಿಯ ಶಾಲಾ ಬ್ಯಾಗ್ ನಲ್ಲಿ ಅಡಗಿದ್ದ ನಾಗರಹಾವು!
ರಿಪ್ಪನ್’ಪೇಟೆ (ಹೊಸನಗರ), ಸೆ. 2: ವಿದ್ಯಾರ್ಥಿಯೋರ್ವನ ಶಾಲಾ ಬ್ಯಾಗ್ ನಲ್ಲಿ ನಾಗರ ಹಾವೊಂದು ಅಡಗಿದ್ದ ಘಟನೆ, ಶಿವಮೊಗ್ಗ ಜಿಲ್ಲೆ ಹೊಸನಗರ ತಾಲೂಕು ರಿಪ್ಪನ್ ಪೇಟೆ ಸಮೀಪದ ಬಾಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆಯಲ್ಲಿ ಶುಕ್ರವಾರ ನಡೆದಿದೆ.
ಭುವನ್ ಎಂಬ ವಿದ್ಯಾರ್ಥಿಯ ಬ್ಯಾಗ್ ನಲ್ಲಿ ಹಾವು ಅಡಗಿಕೊಂಡಿದ್ದು ಬೆಳಕಿಗೆ ಬಂದಿದೆ. ಎಂದಿನಂತೆ ವಿದ್ಯಾರ್ಥಿಯು ಬೆಳಿಗ್ಗೆ ಮನೆಯಿಂದ ಬ್ಯಾಗ್ ನೊಂದಿಗೆ ಶಾಲೆಗೆ ಆಗಮಿಸಿದ್ದಾನೆ.
ಶಿಕ್ಷಕರು ಪಾಠ ಮಾಡುವ ವೇಳೆ ಪುಸ್ತಕ ತೆಗೆದುಕೊಳ್ಳಲು ವಿದ್ಯಾರ್ಥಿ ಬ್ಯಾಗ್ ಜಿಪ್ ತೆರೆದಿದ್ದು, ಈ ವೇಳೆ ಬ್ಯಾಗ್ ನಲ್ಲಿ ಹಾವು ಗಮನಿಸಿ ಭಯಭೀತನಾಗಿದ್ದಾನೆ. ಪಕ್ಕದಲ್ಲಿದ್ದ ಸಹಪಾಠಿ ಮಣಿಕಂಠ ಎಂಬ ವಿದ್ಯಾರ್ಥಿಯು, ಭುವನ್ ಬ್ಯಾಗ್ ನ ಜಿಪ್ ಮುಚ್ಚಿ ಶಿಕ್ಷಕರ ಬಳಿ ಬ್ಯಾಗ್ ತೆಗೆದುಕೊಂಡು ಬಂದು ಹಾವಿರುವುದನ್ನು ತಿಳಿಸಿದ್ದಾನೆ.
ಶಿಕ್ಷಕರು ತಕ್ಷಣವೇ ಬ್ಯಾಗ್ ನ್ನು ಕೊಠಡಿಯಿಂದ ಹೊರತಂದಿದ್ದಾರೆ. ಶಾಲೆಯ ಸಮೀಪದಲ್ಲಿಯೇ ಇದ್ದ ಭುವನ್ ಪೋಷಕರನ್ನು ಕರೆಯಿಸಿ ವಿಷಯ ತಿಳಿಸಿದ್ದಾರೆ. ನಂತರ ಸಮೀಪದ ಕಾಡಿನಲ್ಲಿ ಹಾವನ್ನು ಬಿಡಲಾಗಿದೆ.
More Stories
hosanagara | ಕಾಡಿನ ರಸ್ತೆಯಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬೈಕ್ ಸವಾರನಿಗೆ ನೆರವಾದ ಪೊಲೀಸರು!
Hosnagar, D. 24: The incident took place in the early morning of December 24 in the area of Rippon Pette Police Station of Hosanagar taluk where the police of Hedhari patrol vehicle gave first aid to the rider who fell down from the bike and was bleeding and was in an unconscious state.