ನ್ಯಾಯಬೆಲೆ ಅಂಗಡಿ ತೆರೆಯಲು ಆಹಾರ ಇಲಾಖೆಯು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಶಿವಮೊಗ್ಗದ ವಿವಿಧೆಡೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ

 ಶಿವಮೊಗ್ಗ, ಸೆ. 2: ಶಿವಮೊಗ್ಗ ಅನೌಪಚಾರಿಕ ಪಡಿತರ ಪ್ರದೇಶ ವ್ಯಾಪ್ತಿಯಲ್ಲಿ, ಹೊಸದಾಗಿ ಮೂರು ನ್ಯಾಯಬೆಲೆ ಅಂಗಡಿ ತೆರೆಯಲು ಆಹಾರ ಇಲಾಖೆಯು ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.

ಸೂಳೇಬೈಲು ಮುಖ್ಯರಸ್ತೆಯ ಮತ್ತೂರು ಸೊಸೈಟಿ ಕಟ್ಟಡದ ಅಕ್ಕ-ಪಕ್ಕ, ಮತ್ತೂರು ಸೂಳೇಬೈಲು ರಸ್ತೆಯ ಇಂದಿರಾನಗರ ಅರಳಿಕಟ್ಟೆ ರಸ್ತೆಯ ಅಕ್ಕ-ಪಕ್ಕ ಹಾಗೂ ಗೋಪಾಳ ಮುಖ್ಯ ರಸ್ತೆಯ ದ್ರೌಪದಮ್ಮ ಸರ್ಕಲ್‍ನ ವಿಜಯನಗರದ ಎಡಭಾಗ ಸ್ಥಳಗಳಲ್ಲಿ ನ್ಯಾಯಬೆಲೆ ಅಂಗಡಿಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ.

ಆಸಕ್ತ ಅರ್ಹರು ಶಿವಮೊಗ್ಗ ಅನೌಪಚಾರಿಕ ಪಡಿತರ ಪ್ರದೇಶ ಅಥವಾ ಉಪನಿರ್ದೇಶಕರ ಕಚೇರಿಯಿಂದ ಅರ್ಜಿ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಸೆ.30 ರೊಳಗಾಗಿ ಸಲ್ಲಿಸುವಂತೆ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

View Post

2 ನೇ ತರಗತಿ ವಿದ್ಯಾರ್ಥಿಯ ಶಾಲಾ ಬ್ಯಾಗ್ ನಲ್ಲಿ ಅಡಗಿದ್ದ ನಾಗರಹಾವು! Previous post 2 ನೇ ತರಗತಿ ವಿದ್ಯಾರ್ಥಿಯ ಶಾಲಾ ಬ್ಯಾಗ್ ನಲ್ಲಿ ಅಡಗಿದ್ದ ನಾಗರಹಾವು!
ಶಿವಮೊಗ್ಗದ ನಗರದ ವಿವಿಧೆಡೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತರೆಯಲು ಅರ್ಜಿ ಆಹ್ವಾನ Next post ಶಿವಮೊಗ್ಗ ನಗರದ ವಿವಿಧೆಡೆ ಹೊಸದಾಗಿ ನ್ಯಾಯಬೆಲೆ ಅಂಗಡಿ ತೆರೆಯಲು ಅರ್ಜಿ ಆಹ್ವಾನ