ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಪೊಲೀಸರ ಕಾರ್ಯಾಚರಣೆ : ನೂರಕ್ಕೂ ಅಧಿಕ ಕೇಸ್ ದಾಖಲು!

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ಪೊಲೀಸರ ಕಾರ್ಯಾಚರಣೆ : ನೂರಕ್ಕೂ ಅಧಿಕ ಕೇಸ್ ದಾಖಲು!

ಶಿವಮೊಗ್ಗ/ಭದ್ರಾವತಿ/ಸಾಗರ, ಸೆ. 3: ಶಿವಮೊಗ್ಗ, ಭದ್ರಾವತಿ ಹಾಗೂ ಸಾಗರ ನಗರದ ವಿವಿಧೆಡೆಯ ನಿರ್ಜನ ಪ್ರದೇಶಗಳಲ್ಲಿ ಪೊಲೀಸರು ಸೆ. 2 ರ ರಾತ್ರಿ ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸಿ ನೂರಕ್ಕೂ ಅಧಿಕ ಪ್ರಕರಣ ದಾಖಲಿಸಿಕೊಂಡ ಘಟನೆ ನಡೆದಿದೆ.

ಶಿವಮೊಗ್ಗ ಪೊಲೀಸ್ ಉಪ ವಿಭಾಗ – ಎ ವ್ಯಾಪ್ತಿಯ ಗೋಪಾಳ, ಚಾಲಕ್ಯು ನಗರ, ಎಂ.ಆರ್.ಎಸ್ ವೃತ್ತ, ಹೊಳೆಹೊನ್ನೂರು ವೃತ್ತ, ಉಪ ವಿಭಾಗ – ಬಿ ವ್ಯಾಪ್ತಿಯ ಎಪಿಎಂಸಿ, ಆಟೋ ಕಾಂಪ್ಲೆಕ್ಸ್, ಕೆಇಬಿ ವೃತ್ತ, ದುರ್ಗಿಗುಡಿ, ರಾಗಿಗುಡ್ಡ, ಹೊನ್ನಾಳ್ಳಿ ರಸ್ತೆ,

ಸಾಗರ ಉಪ ವಿಭಾಗ ವ್ಯಾಪ್ತಿಯ ನೆಹರು ಕ್ರೀಡಾಂಗಣ, ಆನಂದಪುರ ರೈಲ್ವೆ ನಿಲ್ದಾಣ ಹಾಗೂ ಭದ್ರಾವತಿ ಉಪ ವಿಭಾಗ ವ್ಯಾಪ್ತಿಯ ಸಾದತ್ ಕಾಲೋನಿ, ಹನುಮಂತ ನಗರ, ಹಿರಿಯೂರಿನ ಹೊರವಲಯದ ಪ್ರದೇಶಗಳಲ್ಲಿ ಪೊಲೀಸರು ಈ ವಿಶೇಷ ಗಸ್ತು ಕಾರ್ಯಾಚರಣೆ ನಡೆಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ ಅಸಭ್ಯ ವರ್ತನೆ ಆರೋಪದಡಿ 92 ಕೇಸ್, ಕೋಟ್ಪಾ ಕಾಯ್ದೆಯಡಿ 2 ಹಾಗೂ ಸಂಚಾರಿ ನಿಯಮಗಳ ಉಲ್ಲಂಘನೆಯಡಿ 25 ಪ್ರಕರಣಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ವಶಕ್ಕೆ ಪಡೆದವರ ಪೂರ್ವಾಪರ ಮಾಹಿತಿ ಕಲೆ ಹಾಕಿದ್ದಾರೆ.

ಕಳೆದ ಹಲವು ದಿನಗಳಿಂದ ಜಿಲ್ಲೆಯಾದ್ಯಂತ ಪೊಲೀಸರು ಏರಿಯಾ ಡಾಮಿನೇಷನ್ ಕಾರ್ಯಾಚರಣೆ ನಡೆಸುತ್ತಿದ್ದಾರೆ. ನಿರ್ಜನ ಪ್ರದೇಶಗಳಲ್ಲಿ ಅಸಭ್ಯ ವರ್ತನೆ, ಅನುಮಾನಾಸ್ಪದವಾಗಿ ತಿರುಗಾಡುವವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸುತ್ತಿದ್ದಾರೆ.

ಬರಗಾಲ ಘೋಷಣೆ : ಸೆ. 4 ರಂದು ತೀರ್ಮಾನ - ಮುಖ್ಯಮಂತ್ರಿ ಸಿದ್ದರಾಮಯ್ಯ Previous post ಬರಗಾಲ ಘೋಷಣೆ : ಸೆ. 4 ರಂದು ತೀರ್ಮಾನ – ಮುಖ್ಯಮಂತ್ರಿ ಸಿದ್ದರಾಮಯ್ಯ
ಭದ್ರಾವತಿ ಎಂಪಿಎಂ ಕಾರ್ಖಾನೆ ಪ್ರಾರಂಭ ಕುರಿತಂತೆ ಸೆ. 6 ರಂದು ಬೆಂಗಳೂರಿನಲ್ಲಿ ಸಭೆ Next post ಭದ್ರಾವತಿ ಎಂಪಿಎಂ ಕಾರ್ಖಾನೆ ಪ್ರಾರಂಭ ಕುರಿತಂತೆ ಸೆ. 6 ರಂದು ಬೆಂಗಳೂರಿನಲ್ಲಿ ಸಭೆ