ಶಿವಮೊಗ್ಗ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 15, ಹಿರಿಯ ಪ್ರಾಥಮಿಕ ಶಾಲೆಯ 14, ಪ್ರೌಢಶಾಲೆಯ 9 ಶಿಕ್ಷಕರಿಗೆ ಪ್ರಶಸ್ತಿ

ಶಿವಮೊಗ್ಗ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪಟ್ಟಿ ಪ್ರಕಟ

ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ 15, ಹಿರಿಯ ಪ್ರಾಥಮಿಕ ಶಾಲೆಯ 14, ಪ್ರೌಢಶಾಲೆಯ 9 ಶಿಕ್ಷಕರಿಗೆ ಪ್ರಶಸ್ತಿ

ಶಿವಮೊಗ್ಗ, ಸೆ. 4: 2023-24 ನೇ ಸಾಲಿಗೆ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಜಿಲ್ಲಾ ಮಟ್ಟದ ಆಯ್ಕೆ ಸಮಿತಿ ಸಭೆಯಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 15, ಹಿರಿಯ ಪ್ರಾಥಮಿಕ ಶಾಲಾ ವಿಭಾಗದಿಂದ 14 ಹಾಗೂ ಪ್ರೌಢಶಾಲಾ ವಿಭಾಗದಿಂದ 09 ಸೇರಿದಂತೆ ಒಟ್ಟು 38 ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ.

ಸೆಪ್ಟೆಂಬರ್ 5 ರಂದು ಕುವೆಂಪು ರಂಗಮಂದಿರದಲ್ಲಿ ನಡೆಯುವ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆಯಂದು ಆಯ್ಕೆಯಾದ ಶಿಕ್ಷಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗುವುದು ಎಂದು ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರು (ಆಡಳಿತ) ತಿಳಿಸಿದ್ದಾರೆ. ಪ್ರಶಸ್ತಿ ವಿಜೇತ ಶಿಕ್ಷಕರ ಪಟ್ಟಿ ಈ ಮುಂದಿನಂತಿದೆ.

ಕಿರಿಯ ಪ್ರಾಥಮಿಕ ವಿಭಾಗ: ಸಹಶಿಕ್ಷಕರಾದ ಚೆಲುವರಾಜ ಎಸ್., ಗಾಡಿಕೊಪ್ಪ ಕ್ಯಾಂಪ್ ಶಾಲೆ. ಗೌಸಿಯಾ ಖಾನಂ, ರಾಮೇನಕೊಪ್ಪ. ಶೋಭಾ ವೈ, ಜ್ಯೋತಿನಗರ, ಶಿವಮೊಗ್ಗ. ಶಿವಕುಮಾರ್ ಕೆ.ಎಂ, ಅರಹತೊಳಲು, ಭದ್ರಾವತಿ. ರಮೇಶಪ್ಪ ಎನ್, ಚೌಡನಾಯಕನಕೊಪ್ಪ, ಶಿಕಾರಿಪುರ. ನಾಗರಾಜಪ್ಪ.ಬಿ, ಸಂಕ್ಲಾಪುರ, ಶಿಕಾರಿಪುರ. ಮನೋಹರಪ್ಪ ಡಿ, ಎಂ.ಕೆ.ಅರಳಿಕೊಪ್ಪ, ಸಾಗರ. ಪೂರ್ಣೇಶ್ ಹೆಚ್ ಆರ್, ಹೊಸೂರು, ತೀರ್ಥಹಳ್ಳಿ. ಲೀಲಾವತಿ ಎಸ್, ವಿಠ್ಠಲನಗರ, ತೀರ್ಥಹಳ್ಳಿ. ಭಾಗ್ಯಬಾಯಿ, ಹುಲ್ಕೋಡ್, ತೀರ್ಥಹಳ್ಳಿ. ತಿಮ್ಮಪ್ಪ ಸಿ, ವಿನಾಯಕ ನಗರ, ರಿಪ್ಪನ್‍ಪೇಟೆ. ನೀಲಾವತಿ ಟಿ, ಕಾಗೆಮರಡು, ಹೊಸನಗರ. ಹುಚ್ಚರಾಯಪ್ಪ ಬಿ, ವೃತ್ತಿಕೊಪ್ಪ, ಸೊರಬ. ಉಮೇಸಲ್ಮಾ, ಹೊಸಪೇಟೆ ಹಕ್ಕಲು, ಸೊರಬ. ಕೃಷ್ಣವೇಣಿ, ಕುದರೆಗಣಿ, ಸೊರಬ.

ಹಿರಿಯ ಪ್ರಾಥಮಿಕ ವಿಭಾಗ: ಸಹ ಶಿಕ್ಷಕರಾದ ಶೋಭಾ ಕೆಎಸ್, ಬೀರನಕೆರೆ ಶಿವಮೊಗ್ಗ. ರಂಗನಾಥ ಕೆಎನ್, ವಿಶ್ವನಗರ, ಭದ್ರಾವತಿ. ಫರೀದುನ್ನೀಸಾ, ಕಾಗದನಗರ, ಭದ್ರಾವತಿ. ಬೆನಕಪ್ಪ ಕೆವಿ, ಈಸೂರು, ಶಿಕಾರಿಪುರ. ಉಮೇಶ್ ಮಾರವಳ್ಳಿ, ಶಿಕಾರಿಪುರ. ಗೃಹಲಕ್ಷ್ಮಿ ಎಂ, ಅಮಟೆಕೊಪ್ಪ ಶಿಕಾರಿಪುರ. ಶಾರದಾಂಬ ಜಿ, ನೊಣಬೂರು, ತೀರ್ಥಹಳ್ಳಿ. ವೆಂಕಟೇಶ್ ಆರ್, ಹಂಚಿ, ಸೊರಬ. ಬ.ಮು.ಶಿಕ್ಷಕರಾದ ಅಂಬಿಕಾ, ಲಕ್ಕಿನಕೊಪ್ಪ, ಶಿವಮೊಗ್ಗ. ಡಾಕ್ಯಾನಾಯ್ಕ ಹೆಚ್, ಸಿದ್ಲಿಪುರ, ಭದ್ರಾವತಿ. ಸೌಭಾಗ್ಯ ಡಿ, ಎ.ಕೆ.ಮಂಚಾಲೆ, ಸಾಗರ. ಶಾರದ ಪಿ, ಮೇಲಿನಬೆಸಿಗೆ, ಹೊಸನಗರ. ಪ್ರ.ಮು.ಶಿಕ್ಷಕ ರಮೇಶ್ ಎನ್ ಹೆಗಡೆ, ಕೆ.ಕಮರೂರು, ಸೊರಬ. ದೈ.ಶಿ.ಶಿಕ್ಷಕ ಬಸವರಾಜ ಕೆ. ಸಾಗರ.

ಪ್ರೌಢಶಾಲಾ ವಿಭಾಗ: ಸಹ ಶಿಕ್ಷಕರಾದ ರಂಗಪ್ಪ ಆರ್, ಬಿ.ಹೆಚ್.ರಸ್ತೆ ಶಿವಮೊಗ್ಗ. ಬಬಿತಾಕುಮಾರಿ, ಅರಕೇರೆ, ಭದ್ರಾವತಿ. ಹರಿಪ್ರಸಾದ್ ಎಂ ಜಿ, ಕಟ್ಟಿನಕಾರು, ಸಾಗರ. ಶ್ರೀಧರ ಹೆಚ್ ಆರ್, ಕಟ್ಟೆಹಕ್ಲು, ತೀರ್ಥಹಳ್ಳಿ. ಸುರೇಂದ್ರ ಎಂ, ಜಯನಗರ, ಹೊಸನಗರ. ಮುಖ್ಯ ಶಿಕ್ಷಕರಾದ ಮಾಲತೇಶ್ವರ ಎಲ್, ಚಿಕ್ಕಜಂಬೂರು, ಶಿಕಾರಿಪುರ, ದತ್ತಾತ್ರೇಯ ಭಟ್, ಸಾಗರ. ಮಂಜಪ್ಪ ಕೆ, ಹೊಸಬಾಳೆ, ಸೊರಬ. ದೈ.ಶಿ.ಶಿಕ್ಷಕರಾದ ಪುಟ್ಟಪ್ಪ ಎ ಬಿ, ಹೊಸಮುಗಳಗೆರೆ ಶಿಕಾರಿಪುರ.

ಶಿವಮೊಗ್ಗ ವಿಮಾನ ನಿಲ್ದಾಣ : ಕನ್ನಡ ಮಾಹಿತಿ ಫಲಕದ ಫೋಟೋ ಶೇರ್ ಮಾಡಿದ ಸಚಿವರು! *’ಕನ್ನಡ ನೆಲ – ಜಲ – ಭಾಷೆಯ ವಿಷಯದಲ್ಲಿ ನಮ್ಮದು ಒಗ್ಗಟ್ಟಿನ ಧ್ವನಿ’ : ಎಂ. ಬಿ. ಪಾಟೀಲ್ Previous post ಶಿವಮೊಗ್ಗ ವಿಮಾನ ನಿಲ್ದಾಣ : ಕನ್ನಡ ಮಾಹಿತಿ ಫಲಕದ ಫೋಟೋ ಶೇರ್ ಮಾಡಿದ ಸಚಿವರು!
Next post ಪತ್ರಿಕಾ ವಿತರಕರಿಗೂ ಮಾಧ್ಯಮ ಅಕಾಡೆಮಿ ಪ್ರಶಸ್ತಿ : 2 ಕೋಟಿ ಕ್ಷೇಮ ನಿಧಿ – ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್