ದೇಶಕ್ಕೆ ರಿಪಬ್ಲಿಕನ್  ಆಫ್ ಭಾರತ್ ಎಂದು  ಮರುನಾಮಕರಣ ಅಗತ್ಯವಿಲ್ಲ – ಇಂಡಿಯಾ ಒಪ್ಪಿತ ಹೆಸರು : ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಸೆ. 5: ಭಾರತವನ್ನು  ಸಂವಿಧಾನದಲ್ಲಿ ಇಂಡಿಯಾ ಎಂದೇ ಉಲ್ಲೇಖಿಸಲಾಗಿದ್ದು,  ಇಂಡಿಯಾ  ಎಂಬುದು ಎಲ್ಲರೂ  ಒಪ್ಪಿರುವ  ಹೆಸರಾಗಿದೆ. ಭಾರತ ಎಂದು ಮರುನಾಮಕರಣ ಮಾಡುವ ಅಗತ್ಯ ಇಲ್ಲ ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯ ಪಟ್ಟರು. 

ಕೇಂದ್ರ ಸರ್ಕಾರ ದೇಶಕ್ಕೆ ರಿಪಬ್ಲಿಕ್  ಆಫ್ ಭಾರತ್ ಎಂದು  ಮರುನಾಮಕರಣ ಮಾಡುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ವಿಧಾನ ಸೌಧದಲ್ಲಿ ಇಂದು ಅವರು ಪ್ರತಿಕ್ರಿಯೆ ನೀಡಿದರು.

ಸಭೆ : ರಾಜ್ಯದಲ್ಲಿ ಇತ್ತೀಚೆಗೆ ಮಾನವ- ವನ್ಯಪ್ರಾಣಿ ಸಂಘರ್ಷ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ಅಧಿಕಾರಿಗಳ ಸಭೆ ನಡೆಸಿ ಚರ್ಚಿಸಿದರು. 

ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಖಂಡ್ರೆ, ಅರಣ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್‌ ಅಖ್ತರ್‌, ಮುಖ್ಯಮಂತ್ರಿಯವರ ಕಾರ್ಯದರ್ಶಿ ಎನ್.‌ ಜಯರಾಂ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ - ಕೊನೆ ಹಂತದ ಕಾಮಗಾರಿಗಳು ವಿಳಂಬ! Previous post ಶಿವಮೊಗ್ಗ : ಕಾಶೀಪುರ ಫ್ಲೈ ಓವರ್ ನಲ್ಲಿ ವಾಹನಗಳ ಸಂಚಾರ ಆರಂಭ – ಕೊನೆ ಹಂತದ ಕಾಮಗಾರಿಗಳು ವಿಳಂಬ!
Next post ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಶಿವಮೊಗ್ಗ ಡಿಸಿ ಆದೇಶ