ಆಗುಂಬೆ ಘಾಟಿ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಿ ಶಿವಮೊಗ್ಗ ಡಿಸಿ ಆದೇಶ

ಶಿವಮೊಗ್ಗ, ಸೆ. 5: ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ 6, 7 ಮತ್ತು 11 ನೇ ತಿರುವಿನಲ್ಲಿ ಭಾರಿ ಮಳೆಯಿಂದಾಗಿ ಮತ್ತು ಭಾರೀ ವಾಹನಗಳ ಓಡಾಟದಿಂದ ಸಣ್ಣ ಬಿರುಕುಗಳು ಹಾಗೂ ಅಲ್ಲಲ್ಲಿ ರಸ್ತೆ ಕುಸಿತ ಕಂಡು ಬಂದ ಹಿನ್ನೆಲೆ ದಿ: 15-09-2023 ರವರೆಗೆ ಅಧಿಸೂಚಿಸಲಾಗಿದ್ದ ಭಾರೀ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಸಂಚಾರಕ್ಕೆ ಅನುವು ಮಾಡಿ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಆರ್ ಆದೇಶಿಸಿದ್ದಾರೆ.

ಈ ರಸ್ತೆಯಲ್ಲಿ ಭಾರೀ ವಾಹನ ಸಂಚಾರಕ್ಕೆ ಅನುಮತಿ ನೀಡಬೇಕೆಂದು ಸಾರ್ವಜನಿಕರು, ಜನಪ್ರತಿನಿಧಿಗಳ ಕೋರಿಕೆಯನ್ನು ಪರಿಗಣನೆ ತೆಗೆದುಕೊಂಡು ರಾಷ್ಟ್ರೀಯ ಹೆದ್ದಾರಿ 169 ಎ ತೀರ್ಥಹಳ್ಳಿ-ಮಲ್ಪೆ ರಸ್ತೆ ಆಗುಂಬೆ ಘಾಟಿಯಲ್ಲಿ ಭಾರೀ ವಾಹನ ಸಂಚಾರ ನಿಷೇಧವನ್ನು ಹಿಂಪಡೆದು ಸಂಚಾರಕ್ಕೆ ಅನುವು ಮಾಡಿ ಆದೇಶಿಸಿದ್ದಾರೆ.

Previous post ದೇಶಕ್ಕೆ ರಿಪಬ್ಲಿಕನ್  ಆಫ್ ಭಾರತ್ ಎಂದು  ಮರುನಾಮಕರಣ ಅಗತ್ಯವಿಲ್ಲ – ಇಂಡಿಯಾ ಒಪ್ಪಿತ ಹೆಸರು : ಸಿಎಂ ಸಿದ್ದರಾಮಯ್ಯ
Next post ಮಹಾತ್ಮಗಾಂಧಿಯನ್ನು ಕೊಂದ ಮನಸ್ಥಿತಿಯೇ ಗೌರಿಲಂಕೇಶ್, ಎಂ.ಎಂ.ಕಲ್ಬುರ್ಗಿಯವರನ್ನೂ ಕೊಂದಿದೆ : ಮುಖ್ಯಮಂತ್ರಿ ಸಿದ್ದರಾಮಯ್ಯ