ಶಿವಮೊಗ್ಗ : ಸೆ.10 ರಂದು ವಿನೋಬನಗರ, ಗೋಪಾಳಗೌಡ ಬಡಾವಣೆ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ ಸೆ.15 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ ನ್ಯಾಯವಾದಿ ವೃತ್ತಿ ತರಬೇತಿ ಭತ್ಯೆ ನೀಡಲು ಅರ್ಜಿ ಆಹ್ವಾನ ಕಂದುರೋಗದ ವಿರುದ್ಧ ಜಾನುವಾರುಗಳಿಗೆ ಲಸಿಕೆ ಅಭಿಯಾನ

ಶಿವಮೊಗ್ಗ : ಸೆ.10 ರಂದು ವಿನೋಬನಗರ, ಗೋಪಾಳಗೌಡ ಬಡಾವಣೆ ಸೇರಿದಂತೆ ವಿವಿಧೆಡೆ ವಿದ್ಯುತ್ ವ್ಯತ್ಯಯ

ಶಿವಮೊಗ್ಗ, ಸೆ. 8: ಆಲ್ಕೋಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ಮೂರನೇ ತ್ರೈಮಾಸಿಕ ನಿರ್ವಹಣಾ ಕೆಲಸ ಹಮ್ಮಿಕೊಂಡಿರುವುದರಿಂದ, ಈ ವಿತರಣಾ ಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಕೆಳಕಂಡ ಪ್ರದೇಶಗಳಲ್ಲಿ ಸೆ. 10 ರಂದು ಬೆಳಿಗ್ಗೆ 10 ರಿಂದ ಸಂಜೆ 6  ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಸಂಸ್ಥೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.

ಆಲ್ಕೋಳ, ಸಾಗರ ರಸ್ತೆ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಸಕ್ಯೂಟ್ ಹೌಸ್, ನೀಲಮೇಘಮ್ ಲೇಔಟ್, ರಾಜಮಹಲ್ ಬಡಾವಣೆ, ಪೊಲೀಸ್ ಲೇಔಟ್, ಅಲ್ ಹರೀಮ್ ಲೇಔಟ್, ವಿಜಯನಗರ, ಪಂಪ ನಗರ, ಗುತ್ಯಪ್ಪ ಕಾಲೋನಿ, ನೇತಾಜಿ ವೃತ್ತ, ಶ್ರೀರಾಮನಗರ, ಟಿಪ್ಪುನಗರ,

ಪದ್ಮಾ ಟಾಕೀಸ್ ರಸ್ತೆ, ಸಿದ್ದೇಶ್ವರ ವೃತ್ತ, ಗೋಪಾಳಗೌಡ ಬಡಾವಣೆ ಎ ಯಿಂದ ಎಫ್ ಬ್ಲಾಕ್, ಅಣ್ಣಾನಗರ, ರಂಗನಾಥ ಬಡಾವಣೆ, ಕೆ.ಹೆಚ್.ಬಿ ಗೋಪಾಳ, ಜೆ.ಪಿ.ನಗರ, ಎಸ್.ವಿ.ಬಡಾವಣೆ, ಗಾಡಿಕೊಪ್ಪ, ನಂಜಪ್ಪ ಹೆಲ್ತ್ ಕೇರ್, ಶರಾವತಿ ದಂತ ವೈದ್ಯಾಕೀಯ ಕಾಲೇಜು, ಮಲ್ಲಿಗೇನಹಳ್ಳಿ,

ಸೋಮಿನಕೊಪ್ಪ ಪ್ರೆಸ್ ಕಾಲೋನಿ, ಭೈರನಕೊಪ್ಪ, ಎ.ಪಿ.ಎಂ.ಸಿ ಲೇಔಟ್(ಆಶ್ರಯ ಬಡಾವಣೆ), ಭೋವಿ ಕಾಲೋನಿ, ಆಲದೇವರಹೊಸೂರು, ಶಕ್ತಿಧಾಮ, ಶಿವಸಾಯಿ ಕಾಸ್ಟಿಂಗ್ ಗೆಜ್ಜೆನಹಳ್ಳಿ, ದೇವಕಾತಿಕೊಪ್ಪ, ಶ್ರೀರಾಮ್‍ಪುರ, ವಿರುಪಿನಕೊಪ್ಪ, ಸಿದ್ಲಿಪುರ, ಮುದ್ದಿನಕೊಪ್ಪ, ತ್ಯಾವರೆಕೊಪ್ಪ, ಸಿಂಹಧಾಮ,

ಗುಡ್ಡದಾರಿ ಕೊಪ್ಪ, ಗಾಲ್ಫ್ ಸ್ಟೇಡಿಯಂ,  ಭೂಮಿಕಾ ಇಂಡಸ್ಟ್ರಿ, ಪೆಸೆಟ್ ಕಾಲೇಜ್, ಕೋಟೆ ಗಂಗೂರು, ಗೆಜ್ಜೇನಹಳ್ಳಿ, ಬಸವ ಗಂಗೂರು, ಸೋಮಿನಕೊಪ್ಪ, ಆದರ್ಶನಗರ, ಸಹ್ಯಾದ್ರಿ ನಗರ, ಜೆ.ಹೆಚ್. ಪಟೇಲ್ ಬಡಾವಣೆ, ಕಾಶೀಪುರ, ಕಲ್ಲಹಳ್ಳಿ, ಶಿವಪ್ಪನಾಯಕ ಬಡಾವಣೆ, ಪ್ರಿಯದರ್ಶಿನಿ ಲೇಔಟ್, ಇಂದಿರಾಗಾಂಧಿ ಲೇಔಟ್,

ವಿನೋಬನಗರ, ದಾಮೋದರ್ ಕಾಲೋನಿ, ಚೇತನಾ ಸ್ಕೂಲ್, ಕಲ್ಲಹಳ್ಳಿ, ವಿನೋಬನಗರ 60ಅಡಿ ರಸ್ತೆ, ಜೈಲ್ ಸರ್ಕಲ್, ಆಟೋಕಾಂಪ್ಲೆಕ್ಸ್, ಪೋಲೀಸ್ ಚೌಕಿ, ಮೇಧಾರ ಕೇರಿ, ನರಸಿಂಹ ಬಡಾವಣೆ, ಶಾರದಮ್ಮ ಲೇಔಟ್,   ಮೈತ್ರಿ ಅಪಾರ್ಟ್‍ಮೆಂಟ್, ಕನಕ ನಗರ, ದೇವರಾಜ್ ಅರಸ್ ಬಡಾವಣೆ, ಪಿ ಅಂಡ್ ಟಿ ಕಾಲೋನಿ,

ಸೂರ್ಯ ಲೇಔಟ್, ಅರವಿಂದ ನಗರ, ಇಂಡಸ್ಟ್ರಿಯಲ್ ಎರಿಯಾ, ಎ.ಪಿ.ಎಂ.ಸಿ., ವೀರಣ್ಣ ಲೇಔಟ್, ಕಾಶೀಪುರ, ಜಯದೇವ ಬಡಾವಣೆ,  ಮೆಗ್ಗಾನ್ ಆಸ್ಪತ್ರೆ, ಬೂಸ್ಟರ್ ಪಂಪ್ ಹೌಸ್, ಆಲ್ಕೋಳ ವೃತ್ತ, ಸಹ್ಯಾದ್ರಿನಗರ, ಸಹಕಾರಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು ಸಾರ್ವಜನಿಕರು ಸಹಕರಿಸುವಂತೆ ಮೆಸಾಂ ಪ್ರಕಟಣೆ ತಿಳಿಸಿದೆ.

ಸೆ.15 ರಂದು ಶಿವಮೊಗ್ಗದಲ್ಲಿ ಉದ್ಯೋಗ ಮೇಳ

ಶಿವಮೊಗ್ಗ, ಸೆ. 8: ಕೌಶಾಲ್ಯಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ, ಕರ್ನಾಟಕ ಕೌಶಲ್ಯ ಅಭಿವೃದ್ಧಿ ನಿಗಮ, ಶಿವಮೊಗ್ಗ ಜಿಲ್ಲಾಡಳಿತ ವತಿಯಿಂದ ಸೆ. 15 ರಂದು ಶಿವಮೊಗ್ಗದ ಬಿ.ಹೆಚ್.ರಸ್ತೆ, ಸರ್ಕಾರಿ ಪದವಿ ಪೂರ್ವ ಸೈನ್ಸ್ ಫೀಲ್ಡ್‍ನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ.

ಸಂದರ್ಶನದಲ್ಲಿ ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗವಹಿಸಲಿದ್ದು, ಐಟಿಐ, ಡಿಪ್ಲೋಮಾ, ಬಿಕಾಂ, ಬಿ,ವೋಕ್, ಬಿಎ, ಬಿಸಿಎ, ಬಿಇ, ಬಿಸಿಎ, ಬಿಇ, ಬಿಟೆಕ್  ಮತ್ತು ಇತರೆ ಡಿಗ್ರಿ ತೇರ್ಗಡೆ ಹೊಂದಿದ ಅಭ್ಯರ್ಥಿಗಳು ಬಯೊಡಾಟಾ ಮತ್ತು ಆಧಾರ್ ಕಾರ್ಡ್ ಪ್ರತಿಯೊಂದಿಗೆ ಸಂದರ್ಶನದಲ್ಲಿ ಭಾಗವಹಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಗಾಜನೂರು, ಶಿವಮೊಗ್ಗ ಇವರನ್ನು ಖುದ್ದಾಗಿ ಅಥವಾ ದೂ. ಸಂ.: 8747824088 ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆನಂದಗಿರಿ, ತೀರ್ಥಹಳ್ಳಿ, ಭದ್ರಾವತಿ ದೂ.ಸಂ.: 9880005425 ಗಳನ್ನು ಸಂಪರ್ಕಿಸುವಂತೆ ತೀರ್ಥಹಳ್ಳಿ  ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ್ಯಾಯವಾದಿ ವೃತ್ತಿ ತರಬೇತಿ ಭತ್ಯೆ ನೀಡಲು ಅರ್ಜಿ ಆಹ್ವಾನ

ಶಿವಮೊಗ್ಗ, ಸೆ. 8:  2023-24 ನೇ ಸಾಲಿನಲ್ಲಿ  ಹಿಂದುಳಿದ ವರ್ಗಗಳ ಕಾನೂನು ಪದವೀಧರರಿಗೆ ವಕೀಲರಿಗೆ ಪ್ರೋತ್ಸಾಹ ಧನ ಕಾರ್ಯಕ್ರಮದಡಿ ಕಾನೂನು ಪದವೀಧರ ಅಭ್ಯರ್ಥಿಗಳಿಗೆ ನ್ಯಾಯವಾದಿ ವೃತ್ತಿಯ ಪ್ರಾಯೋಗಿಕ ತರಬೇತಿ ಜೊತೆಗೆ ತರಬೇತಿ ಭತ್ಯೆ ನೀಡಲು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ.

ತರಬೇತಿ ಭತ್ಯೆ ಶಿವಮೊಗ್ಗ ಜಿಲ್ಲೆಯ ಅಭ್ಯರ್ಥಿಗಳಿಗೆ ಮಾತ್ರ ಅನ್ವಯಿಸಿದ್ದು, ಹಿಂದುಳಿದ ವರ್ಗಗಳ ಅಭ್ಯರ್ಥಿಗಳನ್ನು ಪ್ರವರ್ಗವಾರು ನಿಗದಿಪಡಿಸಿದ ಗುರಿಗನುಗುಣವಾಗಿ ಮೆರಿಟ್ ಆಧಾರದ ಮೇಲೆ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಜಿ ಸಲ್ಲಿಸಲು ಸೆ.25 ಕಡೆಯ ದಿನವಾಗಿದ್ದು ಅರ್ಜಿ ನಮೂನೆಯನ್ನು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಬಸವಚೇತನ ಬಿಲ್ಡಿಂಗ್, 100 ಅಡಿ ರಸ್ತೆ, ರವೀಂದ್ರನಗರ, ಶಿವಮೊಗ್ಗ ಜಿಲ್ಲೆ, ದೂ.ಸಂ: 08182-222129 ಇಲ್ಲಿ ಪಡೆದು ಇದೇ ಕಚೇರಿಗೆ ಸಲ್ಲಿಸಬೇಕು.

ತರಬೇತಿ ಅವಧಿಯು 04 ವರ್ಷಗಳದ್ದಾಗಿದ್ದು, ಮಾಹೆಯಾನ ರೂ.4000 ಗಳ ತರಬೇತಿ ಭತ್ಯೆ ನೀಡಲಾಗುವುದು. ಪ್ರವರ್ಗ 2ಎ, 3ಎ ಮತ್ತು 3ಬಿ ಗಳಿಗೆ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ.2.50 ಲಕ್ಷ ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು ಪ್ರಕಟಣೆ ದಿನಾಂಕಕ್ಕೆ 30 ವರ್ಷಗಳನ್ನು ಮೀರಬಾರದು.  ಪ್ರವರ್ಗ-1 ಅಭ್ಯರ್ಥಿಗಳಿಗೆ ರೂ.3.50 ಲಕ್ಷ ಆದಾಯದ ಮಿತಿಯನ್ನು ನಿಗದಿಪಡಿಸಲಾಗಿದೆ. ಹಾಗೂ ಅಭ್ಯರ್ಥಿಯ ಗರಿಷ್ಟ ವಯೋಮಿತಿಯು 31 ವರ್ಷಗಳು ಮೀರಿರಬಾರದು. ತರಬೇತಿಗೆ ಅರ್ಜಿಗಳನ್ನು ಸ್ವೀಕರಿಸುವ ಕೊನೆಯ ದಿನಾಂಕಕ್ಕೆ ಅಭ್ಯರ್ಥಿಯು ಕಾನೂನು ಪರೀಕ್ಷೆಯಲ್ಲಿ ತೇರ್ಗಡೆಯಾಗಿ 2 ವರ್ಷ ಅವಧಿಯ ಒಳಗಿರುವವರು ಮಾತ್ರ ತರಬೇತಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದು, ಬಾರ್ ಕೌನ್ಸಿಲ್‍ನಲ್ಲಿ ನೋಂದಣಿ ಮಾಡಿಸಿರಬೇಕು ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಂದುರೋಗದ ವಿರುದ್ಧ ಜಾನುವಾರುಗಳಿಗೆ ಲಸಿಕೆ ಅಭಿಯಾನ

ಶಿವಮೊಗ್ಗ, ಸೆ. 8:  ಪಶುಪಾಲನಾ ಮತ್ತು ಪಶುವೈದ್ಯಸೇವಾ ಇಲಾಖೆಯು ರಾಷ್ಟ್ರೀಯ ಜಾನುವಾರು ರೋಗ ನಿಯಂತ್ರಣ ಕಾರ್ಯಕ್ರದಡಿ ಶಿವಮೊಗ್ಗ ಜಿಲ್ಲೆಯಾದ್ಯಂತ ಜಾನುವಾರುಗಳಲ್ಲಿ ಕಂದು ರೋಗ ನಿಯಂತ್ರಣ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸೆ.11 ರಿಂದ 25 ರವರೆಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುತ್ತಿದೆ. 

ಲಸಿಕಾದಾರರು ರೈತರ/ಪಶು ಪಾಲಕರ ಮನೆಬಾಗಿಲಲ್ಲೇ ಕರುಗಳಿಗೆ ಕಿವಿಯೋಲೆ ಅಳವಡಿಸಿ ನೊಂದಣಿ ಮಾಡಿಕೊಂಡು ಲಸಿಕೆ ಹಾಕುತ್ತಾರೆ.  ಎಲ್ಲಾ ರೈತರು ಮತ್ತು ಪಶುಪಾಲಕರು ತಮ್ಮಲ್ಲಿರುವ ಅರ್ಹ ಹೆಣ್ಣು ಕರುಗಳಿಗೆ ತಪ್ಪದೇ ಲಸಿಕೆ ಹಾಕಿಸುವ ಮೂಲಕ ಈ ಅವಕಾಶದ ಸದುಪಯೋಗ ಪಡೆದುಕೊಳ್ಳುವಂತೆ ಇಲಾಖೆಯ ಉಪನಿರ್ದೇಶಕ ಡಾ|| ಶಿವಯೋಗಿ ಬಿ.ಯಲಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

ಕಂದು ರೋಗವು ಪ್ರಾಣಿಜನ್ಯವಾಗಿದ್ದು, ರಾಸುಗಳಲ್ಲಿ ಈ ರೋಗದಿಂದ ಗರ್ಭಧರಿಸಿದ ಹಸುಗಳು 6 ತಿಂಗಳ ನಂತರ ಕಂದು ಹಾಕಬಹುದು.  ಅವುಗಳ ಗರ್ಭಸ್ರಾವದಿಂದ ಮತ್ತು ಹಸಿ ಹಾಲನ್ನು ಹಾಗೆಯೇ ಉಪಯೋಗಿಸುವುದರಿಂದ ರೋಗವು ಮನುಷ್ಯರಿಗೂ ಹರಡಬಹುದು.  ಈ ರೋಗವು ಮನುಷ್ಯರಿಗೆ ಬಂದರೆ ಸಂತಾನೋತ್ಪತ್ತಿ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ.  ಆದ್ದರಿಂದ ಅರ್ಹ ಕರುಗಳಿಗೆ ಲಸಿಕೆ ಹಾಕಿಸಿ, ಸಂಭವಿಸಬಹುದಾದ ಆರ್ಥಿಕ ನಷ್ಟ ತಪ್ಪಿಸಿ ನಿಮ್ಮ ಜಾನುವಾರುಗಳನ್ನು ರಕ್ಷಿಸಿಕೊಳ್ಳುವಂತೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಲಸಿಕಾ ಕಾರ್ಯಕ್ರಮದ ವೇಳಾಪಟ್ಟಿಯನ್ನು ತಾಲೂಕುವಾರು/ಗ್ರಾಮವಾರು ತಯಾರಿಸಲಾಗಿದ್ದು, ಪಶುಪಾಲನಾ ಇಲಾಖೆಯ ಅಧಿಕಾರಿ / ಸಿಬ್ಬಂದಿಯನ್ನೊಳಗೊಂಡ ಲಸಿಕಾ ತಂಡಗಳು ವೇಳಾಪಟ್ಟಿಯಂತೆ ಆಯಾ ಗ್ರಾಮಗಳಿಗೆ ಭೇಟಿ ನೀಡಿ ಜಾನುವಾರುಗಳಿಗೆ ಉಚಿತವಾಗಿ ಲಸಿಕೆಯನ್ನು ಹಾಕಲಾಗುವುದು. ಹೆಚ್ಚಿನ ಮಾಹಿತಿಗಾಗಿ ಸಮೀಪದ ಪಶುಚಿಕಿತ್ಸಾ ಸಂಸ್ಥೆಗಳನ್ನು ಸಂಪರ್ಕಿಸುವುದು.

Previous post ‘ಜಾಮೀನು ಪಡೆದವರಿಗೆ ಕಾನೂನಿನ ಭಯ ಇರುತ್ತಾ?’ : ಸಿಎಂ ಸಿದ್ದರಾಮಯ್ಯ
Next post ಬಿಜೆಪಿ – ಜೆಡಿಎಸ್ ಮೈತ್ರಿಗೆ ತಲೆಕೆಡಿಸಿಕೊಳ್ಳುವುದಿಲ್ಲ: ಮುಖ್ಯಮಂತ್ರಿ ಸಿದ್ದರಾಮಯ್ಯ