ಲೋಕಾಯುಕ್ತ : ಸಾರ್ವಜನಿಕರ ಕುಂದು ಕೊರತೆ ಅಹವಾಲು ಸ್ವೀಕಾರ ಸಭೆ

ಶಿವಮೊಗ್ಗ, ಫೆ. 4: ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗದ ಜಿಲ್ಲಾ ಅಧಿಕಾರಿಗಳು ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಫೆಬ್ರವರಿ-2023ರ ಮಾಹೆಯ ಕೆಳಕಂಡ ದಿನಗಳಂದು ಬೆಳಿಗ್ಗೆ 11.00 ಗಂಟೆಯಿಂದ ಮಧ್ಯಾಹ್ನ 01 ಗಂಟೆಯವರೆಗೆ ಸಾರ್ವಜನಿಕರ ಕುಂದು ಕೊರತೆ ಅರ್ಜಿ ಸ್ವೀಕಾರ ಸಭೆ ನಡೆಸುವರು. 

ಫೆ.07 ರಂದು ಹೊಸನಗರ ತಾಲೂಕು ಪಂಚಾಯತ್ ಸಭಾಂಗಣ, ಫೆ.09 ರಂದು ಶಿಕಾರಿಪುರ ತಾಲೂಕು ಪಂಚಾಯತ್ ಸಭಾಂಗಣ, ಫೆ. 14 ರಂದು  ಭದ್ರಾವತಿ ತಾಲೂಕು ಪಂಚಾಯತ್ ಸಭಾಂಗಣ, ಫೆ. 16 ರಂದು ತೀರ್ಥಹಳ್ಳಿ ತಾಲೂಕು ಪಂಚಾಯತ್ ಸಭಾಂಗಣ, ಫೆ.22 ರಂದು ಸಾಗರ ತಾಲೂಕು ಪಂಚಾಯತ್ ಸಭಾಂಗಣ ಹಾಗೂ ಫೆ.27  ರಂದು ಸೊರಬ ತಾಲೂಕು ಪಂಚಾಯತ್ ಸಭಾಂಗಣಗಳಲ್ಲಿ ಸಭೆ ನಡೆಯಲಿದೆ.

ಸರ್ಕಾರಿ ಕರ್ತವ್ಯ ನಿರ್ವಹಿಸಲು ಬೇಜವಾಬ್ಧಾರಿತನ, ನಿರ್ಲಕ್ಷ್ಯ, ವಿಳಂಬ ಮತ್ತು ಅಧಿಕೃತ ಕೆಲಸಕ್ಕಾಗಿ ಲಂಚಕ್ಕೆ ಬೇಡಿಕೆ ಇಟ್ಟಂತಹ ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ಸಾರ್ವಜನಿಕರು ಲಿಖಿತ ಅಹವಾಲು ಸಲ್ಲಿಸುವಂತೆ ಶಿವಮೊಗ್ಗದ ಕರ್ನಾಟಕ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರು ತಿಳಿಸಿದ್ದಾರೆ.

Previous post ಶಿವಮೊಗ್ಗ : ಮಾಚೇನಹಳ್ಳಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಫೆ.6 ರಂದು ವಿದ್ಯುತ್ ವ್ಯತ್ಯಯ
Next post ಕಳವು ಆರೋಪಿ ಬಂಧನ : ನಾಲ್ಕು ಬೈಕ್ ವಶಕ್ಕೆ!