
ಕಳವು ಆರೋಪಿ ಬಂಧನ : ನಾಲ್ಕು ಬೈಕ್ ವಶಕ್ಕೆ!
ಶಿವಮೊಗ್ಗ, ಫೆ. 5: ನಗರದ ವಿವಿಧೆಡೆ ಬೈಕ್ ಕಳವು ಕೃತ್ಯಗಳಲ್ಲಿ ಭಾಗಿಯಾಗಿದ್ದ ಆರೋಪದ ಮೇರೆಗೆ ಕೋಟೆ ಠಾಣೆ ಪೊಲೀಸರು ಓರ್ವನನ್ನು ಬಂಧಿಸಿ, ನಾಲ್ಕು ಬೈಕ್ ವಶಕ್ಕೆ ಪಡೆದ ಘಟನೆ ನಡೆದಿದೆ.
ಭದ್ರಾವತಿ ತಾಲೂಕು ಅಗರದಹಳ್ಳಿ ಸಮೀಪದ ಹಂಚಿನ ಸಿದ್ಧಾಪುರದ ನಿವಾಸಿ ಅರುಣ್ (22) ಬಂಧಿತ ಆರೋಪಿ ಎಂದು ಗುರುತಿಸಲಾಗಿದೆ. ವಶಕ್ಕೆ ಪಡೆದ ಬೈಕ್ ಗಳ ಮೌಲ್ಯ 1 ಲಕ್ಷ ರೂ.ಗಳೆಂದು ಅಂದಾಜಿಸಲಾಗಿದೆ.
ಎಸ್ಪಿ ಜಿ.ಕೆ.ಮಿಥುನ್ ಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್ ಮಾರ್ಗದರ್ಶನದಲ್ಲಿ ಕೋಟೆ ಠಾಣೆ ಇನ್ಸ್’ಪೆಕ್ಟರ್ ಸಂತೋಷ್ ಪಾಟೀಲ್, ಪಿಎಸ್ಐ ಸಿ.ಆರ್.ಕೊಪ್ಪದ್, ಎಎಸ್ಐ ಹರ್ಷ, ಸಿಬ್ಬಂದಿಗಳಾದ ಅಣ್ಣಪ್ಪ, ನಾಗರಾಜ್, ಪ್ರಕಾಶ್, ಜಯಶ್ರೀ ತಂಡ ಆರೋಪಿ ಬಂಧಿಸುವಲ್ಲಿ ಸಫಲವಾಗಿದೆ. ಈ ಕುರಿತಂತೆ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.