
ತೀರ್ಥಹಳ್ಳಿ : ಬೆಂಗಳೂರಿನ ಯುವಕರಿಬ್ಬರು ನೀರುಪಾಲು!
ತೀರ್ಥಹಳ್ಳಿ, ಸೆ. 10: ನದಿಯಲ್ಲಿ ಈಜಲು ತೆರಳಿದ ಯುವಕರಿಬ್ಬರು ನೀರು ಪಾಲಾದ ಘಟನೆ ತೀರ್ಥಹಳ್ಳಿ ತಾಲೂಕಿನ ಮುಳುಬಾಗಿಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಭೀನಮಕಟ್ಟೆ ಬಳಿಯ ತುಂಗಾ ನದಿಯಲ್ಲಿ ನಡೆದಿದೆ.
ಬೆಂಗಳೂರಿನ ಖಾಸಗಿ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಗೌತಮ್ (27) ಹಾಗೂ ಸಂಜಯ್ (25) ನೀರು ಪಾಲಾದ ಯುವಕರೆಂದು ಗುರುತಿಸಲಾಗಿದೆ. ಯುವಕರು ಪ್ರವಾಸಕ್ಕೆಂದು ಆಗಮಿಸಿದ್ದರು.
ನದಿಯಲ್ಲಿ ಈಜಲು ತೆರಳಿದ್ದ ವೇಳೆ ನೀರು ಪಾಲಾಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ತೀರ್ಥಹಳ್ಳಿ ಪೊಲೀಸರು ಹಾಗೂ ಅಗ್ನಿಶಾಮಕ ದಳ ಸ್ಥಳಕ್ಕೆ ಭೇಟಿ ನೀಡಿದ್ದರು. ಸ್ಥಳೀಯ ಗ್ರಾಮಸ್ಥರ ಸಹಕಾರದೊಂದಿಗೆ ನದಿಯಲ್ಲಿ ಯುವಕರಿಬ್ಬರ ಶೋಧ ಕಾರ್ಯ ನಡೆಸಿದರು. ಘಟನೆಯ ಕುರಿತಂತೆ ಹೆಚ್ಚಿನ ವಿವರಗಳು ಇನ್ನಷ್ಟೆ ಲಭ್ಯವಾಗಬೇಕಾಗಿದೆ.