ಶಿವಮೊಗ್ಗ ಭದ್ರಾವತಿ ಸಾಗರದಲ್ಲಿ ರೌಡಿಗಳ ಪರೇಡ್ : ಖಡಕ್ ಎಚ್ಚರಿಕೆ ಕೊಟ್ಟ ಖಾಕಿ ಪಡೆ!

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್ : ಖಡಕ್ ಎಚ್ಚರಿಕೆ ಕೊಟ್ಟ ಖಾಕಿ ಪಡೆ!

ಶಿವಮೊಗ್ಗ / ಭದ್ರಾವತಿ / ಸಾಗರ, ಸೆ. 13: ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ಹಿನ್ನೆಲೆಯಲ್ಲಿ, ಜಿಲ್ಲೆಯಲ್ಲಿ ಶಾಂತಿ-ಸುವ್ಯವಸ್ಥೆ ಕಾಯ್ದುಕೊಳ್ಳಲು ಜಿಲ್ಲಾ ಪೊಲೀಸ್ ಇಲಾಖೆ ವ್ಯಾಪಕ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ.

ಇತ್ತೀಚೆಗಷ್ಟೆ ಜಿಲ್ಲೆಯಾದ್ಯಂತ ರೌಡಿಗಳ ಮನೆ ಮೇಲೆ ಪೊಲೀಸರು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದರು. ಇದರ ಬೆನ್ನಲ್ಲೇ ಬುಧವಾರ ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿ ಶೀಟರ್ ಗಳ ಪರೇಡ್ ನಡೆಸಲಾಗಿದೆ. ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾಗದಂತೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ.

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್ : ಖಡಕ್ ಎಚ್ಚರಿಕೆ ಕೊಟ್ಟ ಖಾಕಿ ಪಡೆ!

ಶಿವಮೊಗ್ಗದ ಡಿಎಆರ್ ಮೈದಾನದಲ್ಲಿ ರೌಡಿಗಳ ಪರೇಡ್ ನಡೆಯಿತು. ‘ಕಾನೂನು-ಸುವ್ಯವಸ್ಥೆ ಹಾಗೂ ನಾಗರೀಕರ ನೆಮ್ಮದಿಗೆ ಭಂಗ ಉಂಟು ಮಾಡುವ ಯಾವುದೇ ಕೃತ್ಯಗಳಲ್ಲಿ ಭಾಗಿಯಾಗಬಾರದು. ಉತ್ತಮ ಜೀವನ ನಡೆಸುವಂತೆ’ ಜಿಲ್ಲಾ ರಕ್ಷಣಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಅವರು ರೌಡಿ ಶೀಟರ್ ಗಳಿಗೆ ತಾಕೀತು ಮಾಡಿದ್ದಾರೆ.

ಈ ಸಂದರ್ಭದಲ್ಲಿ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜ್, ಸುರೇಶ್ ಮೊದಲಾದವರು ಉಪಸ್ಥಿತರಿದ್ದರು.

ಭದ್ರಾವತಿ ಪಟ್ಟಣದಲ್ಲಿ ಡಿವೈಎಸ್ಪಿ ನಾಗರಾಜ್ ಹಾಗೂ ಸಾಗರ ಪಟ್ಟಣದಲ್ಲಿ ಗೋಪಾಲಕೃಷ್ಣ ತಿಮ್ಮಣ್ಣ ನಾಯ್ಕ್ ರವರ ನೇತೃತ್ವದಲ್ಲಿ ರೌಡಿ ಶೀಟರ್ ಗಳ ಪರೇಡ್ ನಡೆಯಿತು.

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್ : ಖಡಕ್ ಎಚ್ಚರಿಕೆ ಕೊಟ್ಟ ಖಾಕಿ ಪಡೆ!

ಶಿವಮೊಗ್ಗದಲ್ಲಿ 144, ಭದ್ರಾವತಿಯಲ್ಲಿ 79 ಹಾಗೂ ಸಾಗರದಲ್ಲಿ 40 ಸೇರಿದಂತೆ ಒಟ್ಟಾರೆ 263 ರೌಡಿ ಶೀಟರ್ ಗಳು ಪರೇಡ್ ನಲ್ಲಿ ಹಾಜರಾಗಿದ್ದರು.

ಸಮಗ್ರ ಮಾಹಿತಿ: ಪರೇಡ್ ವೇಳೆ ರೌಡಿ ಶೀಟರ್ ಗಳ ಪೂರ್ವಾಪರ, ಜೀವನೋಪಾಯಕ್ಕೆ ನಡೆಸುತ್ತಿರುವ ವೃತ್ತಿ, ಇತ್ತೀಚೆಗೆ ಯಾವುದಾದರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಮಾಹಿತಿಯನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಶಿವಮೊಗ್ಗ, ಭದ್ರಾವತಿ, ಸಾಗರದಲ್ಲಿ ರೌಡಿಗಳ ಪರೇಡ್ : ಖಡಕ್ ಎಚ್ಚರಿಕೆ ಕೊಟ್ಟ ಖಾಕಿ ಪಡೆ!

ಮುಂಬರುವ ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬದ ವೇಳೆ, ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆ ಹಾಗೂ ಕೋಮು ಸೌಹಾರ್ದತೆಗೆ ಧಕ್ಕೆ ತರುವಂತಹ ಕೃತ್ಯಗಳಲ್ಲಿ ಭಾಗಿಯಾಗಬಾರದು. ದುಷ್ಕೃತ್ಯಗಳಲ್ಲಿ ಭಾಗಿಯಾಗುವವರ ವಿರುದ್ದ ನಿರ್ದಾಕ್ಷಿಣ್ಯ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆಯನ್ನು ಪೊಲೀಸರು ರವಾನಿಸಿದ್ದಾರೆ.

ಶಿಕ್ಷಣ ಸಚಿವರ ತವರೂರಲ್ಲಿ ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಆರಂಭವಾಗದ ಬಿಸಿಯೂಟ! ವರದಿ : ಬಿ. ರೇಣುಕೇಶ್ Previous post ಶಿಕ್ಷಣ ಸಚಿವರ ತವರೂರಲ್ಲಿ ಶಾಲೆ ಆರಂಭವಾಗಿ ತಿಂಗಳುಗಳೇ ಉರುಳಿದರೂ ಆರಂಭವಾಗದ ಬಿಸಿಯೂಟ!
Next post ಸ್ಮಶಾನ – ಖಬರಸ್ಥಾನಗಳಿಗೆ 3 ತಿಂಗಳೊಳಗೆ ಜಾಗ ಒದಗಿಸಿ : ಡಿಸಿ – ಸಿಇಒಗಳಿಗೆ ಸಿಎಂ ಸೂಚನೆ